ರಮೇಶ್ ಸಿಡಿ ಕೇಸ್ ಗೆ ಟ್ವಿಸ್ಟ್ : ‘ಸಿಡಿ’ದ ಗೋಕಾಕ್ ಸಾಹುಕಾರ…!

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಟ್ವಿಸ್ಟ್ ಪಡೆದುಕೊಂಡಿದ್ದು ಷಡ್ಯಂತರ ಮಾಡಿದವರು ಎಲ್ಲಿದ್ದಾರೆಂದು ರಮೇಶ್ ಸುಳಿವು ಕೊಟ್ಟಿದ್ದಾರೆ.

ಹೌದು.. ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ ಸಿಡಿ ಪ್ಲ್ಯಾನ್ ಮಾಡಿದವರು ಬೆಂಗಳೂರಿನಲ್ಲೇ ಇದ್ದಾರೆ ಎಂದು ಹೇಳಿದ್ದಾರೆ.

ಬಾಂಬೆ ಟ್ರಿಪ್ ಗೂ ಸಿಡಿಗೂ ಲಿಂಕ್ ಮಾಡಿ ಹೇಳಲಾಗುತ್ತಿದೆ. ಆದರೆ ಇದಕ್ಕೂ ಮೈತ್ರಿ ಸರ್ಕಾರ ಬಿಟ್ಟಿದ್ದಕ್ಕೂ ಸಂಬಂಧವಿಲ್ಲ. ಸಿಡಿ ಕಳೆದ 6-7 ತಿಂಗಳಲ್ಲಿ ಮಾಡಲಾಗಿದೆ. ಸಿಡಿ ಮಾಡಿದವರು ಬೆಂಗಳೂರು ಹೃದಯಭಾಗದಲ್ಲಿ ಇದ್ದಾರೆ. ಅವರ ಫೋನ್ ನಂಬರ್, ವಿಳಾಸ, ಹೆಸರು ಗೊತ್ತಿದೆ. ಅವರನ್ನು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಷಡ್ಯಂತ್ರ ಮಾಡಿದವರು ಬೆಂಗಳೂರಿನಲ್ಲೇ ಇದ್ದಾರೆ. ತಕ್ಕ ಶಾಸ್ತಿ ಮಾಡುತ್ತೇನೆಂದು ಹೇಳಿದ್ದಾರೆ. ದೂರು ಕೊಟ್ಟೆ ಕೊಡುತ್ತೇವೆ ಬಿಡುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ. ಕಾನೂನು ಹೋರಾಟ ವಿಚಾರವನ್ನು ಬಾಲಚಂದ್ರ ಜಾರಕಿಹೊಳಿಗೆ ಬಿಟ್ಟಿದ್ದೇನೆ. ಅವರು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ಆದರೆ ಎಷ್ಟೇ ಖರ್ಚಾದರೂ ಅವರಿಗೆ ಮಟ್ಟಹಾಕೇ ಹಾಕುತ್ತೇನೆ.

ಬಾಂಬೆ ಹೋಗಿದ್ದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ಮೈತ್ರಿ ಸರ್ಕಾರ ಬೀಳುವ ಸಂದರ್ಭದಲ್ಲಿ ನಡೆದ ವಿದ್ಯಾಮಾನಗಳು ಅಲ್ಲ. ಇದು ಇತ್ತೀಚೆಗೆ 6-7 ತಿಂಗಳ ಹಿಂದೆ ನಡೆದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights