ಸಾಹುಕಾರ ಸಿಡಿ ಪ್ರಕರಣ : ಇವರೇನಾ ಆ.. ಮಹಾನಾಯಕ? ಮಹಾನಾಯಕಿ..?
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಎಸ್ಐಟಿ ನಡೆಸುತ್ತಿದ್ದು ಈ ಮಧ್ಯೆ ಸಿಡಿ ವಿಚಾರ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ.
ಸಿಡಿ ಹಿಂದೆ ಮಹಾನಾಯಕನ ಕೈವಾಡವಿದೆ ಎಂದು ರಮೇಶ್ ಆರೋಪ ಮಾಡುತ್ತಿದ್ದಂತೆ ಇತ್ತ ಕಾಂಗ್ರೆಸ್ ನಲ್ಲಿ ಆ ಮಹಾನಾಯಕ ಯಾರು ಎನ್ನುವ ಪ್ರಶ್ನೆಗಳು ಉದ್ಬವಿಸುತ್ತಿವೆ. ಬಿಜೆಪಿಯಲ್ಲಿ ಸಿಡಿ ಹಿಂದೆ ಕೇವಲ ಮಹಾನಾಯಕ ಮಾತ್ರವಲ್ಲ ಮಹಾನಾಯಕಿ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ.
ಹಾಗಾದ್ರೆ ಇವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಖಚಿತವಾಗಿಲ್ಲವಾದರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಹಾನಾಯಕ ಆದರೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಾನಾಯಕಿ ಎನ್ನುವ ಆರೊಪಗಳು ಕೇಳಿ ಬರುತ್ತಿವೆ.
ಹೌದು… ಸಿ.ಡಿ. ಪ್ರಕರಣ ಕುರಿತಂತೆ ಶಿವಮೊಗ್ಗದಲ್ಲಿ ಇತ್ತೀಚಿಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನನ್ನ ವಿರುದ್ಧ ಹಿಂದೆ ಮಾಡಿದ್ದ ಷಡ್ಯಂತ್ರಗಳು ಈಗಲೂ ಮುಂದುವರೀತಾ ಇದೆ. ಸಿಡಿ ಪ್ರಕರಣದಲ್ಲೂ ನನ್ನನ್ನು ಸಿಲುಕಿಸಲು ನೋಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ.
ಏನಿದೆಲ್ಲಾ!?
ಬೆಂಕಿಯಿಲ್ಲದೆ ಹೊಗೆಯಾಡುವುದೇ?
ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್ ಹಗೆತನ ಸಾಧಿಸುತ್ತಿದೆ. pic.twitter.com/MGdRfAyXDq
— BJP Karnataka (@BJP4Karnataka) March 16, 2021
ಈ ಹೇಳಿಕೆಗಳನ್ನೆ ಗುರಿಯಾಗಿಟ್ಟುಕೊಂಡು ಇದೀಗ ಬಿಜೆಪಿ ಕಾಂಗ್ರೆಸ್ ಮುಖಂಡರಿಗೆ ಟಕ್ಕರ್ ನೀಡಿದೆ. ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ. ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ? ಬೆಂಕಿಯಿಲ್ಲದೆ ಹೊಗೆಯಾಡುವುದೇ?

