ಮೋದಿಯವರ ವಸತಿ ಜಾಹೀರಾತು ನಕಲಿ? ನನಗೆ ಸ್ವಂತ ಮನೆಯೇ ಇಲ್ಲ ಎಂದ ಮಹಿಳೆ…!
ಪಿಎಂ ಮೋದಿಯವರೊಂದಿಗೆ ವಸತಿ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕೋಲ್ಕತಾ ಮಹಿಳೆ ವಾಶ್ ರೂಂ ಇಲ್ಲದ ಬಾಡಿಗೆ ರೂಂನಲ್ಲಿ ವಾಸಿಸುತ್ತಿದ್ದಾರೆ.
ಹೌದು… ಫೆಬ್ರವರಿ 25 ರಂದು ಕೆಲವು ಕೋಲ್ಕತಾ ಪತ್ರಿಕೆಗಳಲ್ಲಿನ ಜಾಹೀರಾತಿನಲ್ಲಿ, ಕೇಂದ್ರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯ ಯಶಸ್ಸನ್ನು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೋಲ್ಕತಾ ಮಹಿಳೆಯ ಫೋಟೋವನ್ನು ಬಳಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಈವರೆಗೆ 24 ಲಕ್ಷ ಕುಟುಂಬಗಳು ಕೇಂದ್ರದ ಯೋಜನೆಯಿಂದ ಲಾಭ ಪಡೆದಿದ್ದಾರೆ ಎಂದು ‘ಆತ್ಮನಿರ್ಭಾರ ಭಾರತ್, ಆತ್ಮನಿರ್ಭರ್ ಬಂಗಾಳ’ ಶೀರ್ಷಿಕೆಯ ಜಾಹೀರಾತು ಹೇಳಿದೆ. “ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಿಂದಾಗಿ ನನ್ನ ಮನೆ ಮೇಲೆ ಛಾವಣಿಯಿದೆ” ಎಂದು ಮಹಿಳೆ ಉಲ್ಲೇಖಿಸಿದ ಜಾಹೀರಾತು ಇದು.
ಮಹಿಳೆಯನ್ನು ಭೇಟಿ ಮಾಡಿದಾಗ ಈ ವಿಚಾರ ಸುಳ್ಳು ಎಂದು ಹೇಳಲಾಗುತ್ತಿದೆ. ಜಾಹಿರಾತಿನಲ್ಲಿ ಕಂಡು ಬಂದ ಮಹಿಳೆ ಹೇಳುವ ಪ್ರಕಾರ ತಮಗೆ ಯಾವುದೇ ಧಾನ್ ಮಂತ್ರಿ ಆವಾಸ್ ಯೋಜನೆಯಿಂದ ಸೌಲಭ್ಯಗಳು ಸಿಕ್ಕಿಲ್ಲ. ಜೊತೆಗೆ ತಾನು ಶೌಚಾಲಯವಿಲ್ಲದ ಕೋಣೆಯಲ್ಲಿ ವಾಸವಿದ್ದೇನೆ. ಈ ಜಾಹಿರಾತು ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ನಾವು ಕಂಡುಕೊಂಡದ್ದು ಇಲ್ಲಿದೆ:
ಕೋಲ್ಕತ್ತಾದ ಬೌಬಜಾರ್ ಪ್ರದೇಶದ ಮಲಂಗಾ ಲೇನ್ ನಿವಾಸಿ ಲಕ್ಷ್ಮಿ ದೇವಿ ಅವರು ಇಂಡಿಯಾ ಟುಡೆ ಈ ಬಗ್ಗೆ ದೃಢಪಡಿಸಿದ್ದಾರೆ. ಅವರು ನಿಜವಾಗಿಯೂ ಪತ್ರಿಕೆಗಳಲ್ಲಿ ಚಿತ್ರಿಸಿದ ಮಹಿಳೆ ಎಂದು ದೃಢಪಡಿಸಿದ್ದಾರೆ. ಆದರೆ, ಲಕ್ಷ್ಮಿ ಅವರು ಜಾಹೀರಾತಿನ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ಜಾಹೀರಾತಿನಲ್ಲಿ ಹೇಳಿದಂತೆ ನನಗೆ ಯಾವ ಸೌಲಭ್ಯವನ್ನು ಕೊಟ್ಟಿಲ್ಲ ಇದು ನಿಜವಲ್ಲ ಎಂದು ಹೇಳಿದ್ದಾರೆ.
ಜಾಹೀರಾತಿನಲ್ಲಿ ಪ್ರಸ್ತಾಪಿಸಿದಂತೆ, ಕೇಂದ್ರ ಯೋಜನೆಯಡಿ ತನಗೆ ಎಂದಿಗೂ ಮನೆ ಸಿಗಲಿಲ್ಲ ಎಂದು ಲಕ್ಷ್ಮಿ ದೇವಿ ಹೇಳಿದ್ದಾರೆ.
“ನಾನು ಬಾಹುಬಜಾರ್ ಪ್ರದೇಶದಲ್ಲಿ ಒಂದು ಕೋಣೆಯ ಬಾಡಿಗೆ ಸೌಕರ್ಯದಲ್ಲಿ ಇತರ ಆರು ಜನರೊಂದಿಗೆ ಇರುತ್ತೇನೆ, ಇದಕ್ಕಾಗಿ ನಾವು ತಿಂಗಳಿಗೆ 500 ರೂ. ಬಾಡಿಗೆ ಕಟ್ಟುತ್ತೇವೆ. ನಾವು ರಾತ್ರಿಯಲ್ಲಿ ಫುಟ್ಪಾತ್ನಲ್ಲಿ ಹೊರಗೆ ಮಲಗುತ್ತೇವೆ, ಮಕ್ಕಳನ್ನು ಒಳಗಡೆ ಮಲಗಿಸುತ್ತೇವೆ. ನಮಗೆ ವಾಶ್ ರೂಮ್ ಕೂಡ ಇಲ್ಲ”ಎಂದು ಲಕ್ಷ್ಮಿ ಇಂಡಿಯಾ ಟುಡೆ ಟಿವಿಗೆ ತಿಳಿಸಿದರು.
ತನಗೆ ಮನೆ ಸಿಗುತ್ತದೆ ಎಂಬ ಹೇಳಿಕೆಗಳು ಸುಳ್ಳು ಎಂದು ಪುನರುಚ್ಚರಿಸಿದ ಲಕ್ಷ್ಮಿ ದೇವಿ, ನೆರೆಹೊರೆಯವರು ಪತ್ರಿಕೆ ಕ್ಲಿಪಿಂಗ್ ಬಗ್ಗೆ ಹೇಳಿದ ನಂತರವೇ ಅವರು ಜಾಹೀರಾತಿನ ಬಗ್ಗೆ ತಿಳಿದುಕೊಂಡರು ಎಂದು ಹೇಳಿದ್ದಾರೆ.
कोलकाता की लक्ष्मी देवी को विज्ञापन में प्रधानमंत्री आवास योजना के तहत आवास मिला लेकिन हकीकत में रहती है किराए के घर में.#ReporterDiary #RE pic.twitter.com/p7rmVHSlhv
— AajTak (@aajtak) March 22, 2021
“ಪತ್ರಿಕೆಯಲ್ಲಿ ನನ್ನ ಫೋಟೋ ನೋಡಿದಾಗ ನನಗೆ ಭಯವಾಯಿತು. ನನ್ನ ಫೋಟೋ ತೆಗೆದವರು ಯಾರು ಮತ್ತು ಯಾವಾಗ ಎಂದು ನನಗೆ ಗೊತ್ತಿಲ್ಲ, ”ಎಂದು ಅವರು ಇಂಡಿಯಾ ಟುಡೆ ಟಿವಿಗೆ ತಿಳಿಸಿದರು. ಬಾಬುಘಾಟ್ನಲ್ಲಿ ಶೌಚಾಲಯ ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ಈ ಫೋಟೋ ತೆಗೆಯದಿರಬಹುದು ಎಂದು ಲಕ್ಷ್ಮಿ ಹೇಳಿದ್ದಾರೆ.
ಆದಾಗ್ಯೂ, ಯಾರೂ ತನ್ನನ್ನು ಸಂಪರ್ಕಿಸಿಲ್ಲ ಮತ್ತು ಛಾಯಾಚಿತ್ರ ತೆಗೆಯಲು ಅನುಮತಿ ಕೇಳಲಿಲ್ಲ ಎಂದು ಅವರು ಹೇಳಿದರು.
ಅವರಿಗೆ ಬಿಜೆಪಿ ಕಚೇರಿಯನ್ನು ಸಂಪರ್ಕಿಸಿದ್ದೀರಾ ಎಂದು ಕೇಳಿದಾಗ, ಲಕ್ಷ್ಮಿ ದೇವಿ ಅವರು ಪಕ್ಷದ ಯಾರೊಂದಿಗೂ ಮಾತನಾಡಲಿಲ್ಲ ಎಂದು ಹೇಳಿದರು. “ನಾನು ಅವರೊಂದಿಗೆ ಮಾತನಾಡಲಿಲ್ಲ. ನಾನು ಅನಕ್ಷರಸ್ಥೆ ಮತ್ತು ಈ ಯಾವುದನ್ನೂ ಅರ್ಥಮಾಡಿಕೊಳ್ಳುವುದಿಲ್ಲ, ”ಎಂದು ಅವರು ಹೇಳಿದರು.
ಬಿಜೆಪಿ ಏನು ಹೇಳಿದೆ?
ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

