ಉದ್ಯೋಗ ಕೇಳಿದ್ರೆ ಮೋದಿ ಪಕೋಡ ಮಾರಿ ಅಂತಾರೆ; ಸಚಿವರು ಮಂಚ ಹತ್ತಿ ಅಂತಾರೆ: BJP ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ!

ಕರ್ನಾಟಕ ಬಿಜೆಪಿ ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂದಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಹಾಗೂ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ವಿಚಾರವಾಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ಉದ್ಯೋಗ ಕೇಳಿದವರಿಗೆ ಮೋದಿ ‘ಪಕೋಡಾ ಮಾರಿ’ ಅಂತಾರೇ, ರಾಜ್ಯದ ಸಚಿವರು ‘ಮಂಚ ಹತ್ತಿ’ ಎನ್ನುತ್ತಾರೆ. ಬಿಜೆಪಿ ರೇಪಿಸ್ಟ್ ಬಜಾವೋ ಮಾಡುತ್ತಿದೆ ಎಂದು ಲೇವಡಿ ಮಾಡಿದೆ.

ಸಿಡಿ ಪ್ರಕರಣದ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ನರೇಂದ್ರ ಮೋದಿ ಅವರೇ, ‘ಬೇಟಿ ಬಚಾವೋ’ ಎನ್ನುವುದು ನಿಮ್ಮ ಭಾಷಣದ ಸ್ಲೋಗನ್ ಮಾತ್ರವಾ, ಅಥವಾ ಅದಕ್ಕೆ ಬದ್ಧತೆ ಇದೆಯೇ? ಉದ್ಯೋಗ ಕೇಳಿದ ಯುವತಿಯನ್ನು ಅತ್ಯಾಚಾವೆಸಗಿದ ನಿಮ್ಮದೇ ಪಕ್ಷದ ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಿಸಲು ಕರ್ನಾಟಕ ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಈ ವಿದ್ಯಮಾನಗಳು ನಿಮ್ಮ ಗಮನಕ್ಕಿಲ್ಲವೇ? ಅಥವಾ ತಾವೂ ಅತ್ಯಾಚಾರಿಗಳ ಪರವೇ? ಎಂದು ಪ್ರಶ್ನಿಸಿದೆ.

ಸಿಡಿ ಪ್ರಕರಣ ಹೊರಬಂದು 21 ದಿನಗಳು ಕಳೆದಿವೆ. ಇದುವರೆಗೂ ಅತ್ಯಾಚಾರವೆಸಗಿದ ರಮೇಶ್‌ ಜಾರಕಿಹೊಳಿ ಮೇಲೆ ಎಫ್‌ಐಆರ್‌ ದಾಖಲಿಸದಿರುವುದೇ ಅವರನ್ನು ರಕ್ಷಿಸಲು ಬಿಜೆಪಿ ಯತ್ನಿಸುತ್ತಿರುವುದಕ್ಕೆ ಸಾಕ್ಷಿ. ಬಿಜೆಪಿಯದ್ದು ಬೇಟಿ ಬಚಾವೋ ಅಲ್ಲ ರೇಪಿಸ್ಟ್ ಬಚಾವೋ ಎನ್ನುವುದೇ ಮೂಲಮಂತ್ರ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಗೌರವ, ರಕ್ಷಣೆ ಇಲ್ಲವಾಗಿದೆ ಎಂದಿದೆ.

ಬಿಜೆಪಿಗರ ಬಾಯಲ್ಲಿ ‘ಬೇಟಿ ಬಚಾವೋ’ ಮಾಡುವುದು ‘ರೇಪಿಸ್ಟ್ ಬಚಾವೋ’ ಯುಪಿಯಿಂದ ಹಿಡಿದು ಕರ್ನಾಟಕದವರೆಗೆ ಮಹಿಳೆಯರನ್ನು ರಕ್ಷಿಸುವ ಬದಲು ರೇಪಿಸ್ಟ್‌ಗಳನ್ನು ರಕ್ಷಿಸುತ್ತಿದೆ ಬಿಜೆಪಿ. ಬಿಜೆಪಿ, ನರೇಂದ್ರ ಮೋದಿ ಅವರಿಗೆ ತಮ್ಮ ‘ಬೇಟಿ ಬಚಾವೋ’ ಘೋಷಣೆ ಬದ್ಧರಾಗಿದ್ದರೆ ರೇಪಿಸ್ಟ್‌ ರಮೇಶ್‌ ಅವರ ಮೇಲೆ ಅತ್ಯಾಚಾರದ ಕೇಸ್ ದಾಖಲಿಸಿ, ಬಂಧಿಸಲಿ ಎಂದು ಆಗ್ರಹಿಸಿದೆ.

ಹೆಣ್ಣಿನ ಅಸಹಾಯಕತೆ, ಬಡತನವನ್ನು ಆಮಿಷ ಒಡ್ಡಿ ದೈಹಿಕವಾಗಿ ಉಪಯೋಗಿಸಿಕೊಳ್ಳುವುದು ಅತ್ಯಾಚಾರವಾಗುತ್ತದೆ. ರೇಪಿಸ್ಟ್‌ ರಮೇಶ್ ಕೂಡ ಮಾಡಿದ್ದು ಅದನ್ನೇ. ಬಸವರಾಜ ಬೊಮ್ಮಾಯಿ ಅವರೇ, ಕಾನೂನಿನ ಪರಿಜ್ಞಾನವಿದೆಯೇ ತಮಗೆ? ಅಥವಾ ರಾಜ್ಯದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ಬದಲಾಗಿದೆಯೇ? ಬಿಜೆಪಿ ಸ್ತ್ರೀಸಂಕುಲಕ್ಕೆ ಅಪಮಾನವೆಸಗುತ್ತಿದೆ ಎಂಬುದಾಗಿ ಕಿಡಿ ಕಾರಿದೆ.

ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಹಾಗೂ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತದೆ. ಸಂತ್ರಸ್ತೆಯ ಆರೋಪ ಹಾಗೂ ಸತ್ಯಾಂಶವನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸುತ್ತಿರುವುದೇಕೆ? ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಸಾಧ್ಯ ಎಂದು ಕರ್ನಾಟಕ ಕಾಂಗ್ರೆಸ್ ಆಗ್ರಹಿಸಿದೆ.

ಉದ್ಯೋಗ ಕೇಳಿದವರಿಗೆ ನರೇಂದ್ರ ಮೋದಿ ‘ಪಕೋಡಾ ಮಾರಿ’ ಎನ್ನುತ್ತಾರೆ. ರಾಜ್ಯದ ಸಚಿವರು ‘ಮಂಚ ಹತ್ತಿ‘ ಎನ್ನುತ್ತಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.

Read also: ಸತೀಶ್ ಜಾರಕಿಹೊಳಿ ಮೂಲೆಗುಂಪು ಮಾಡಲು ಕಾಂಗ್ರೆಸ್‌ನಲ್ಲಿ ಸಂಚು?: ಬೆಂಬಲಿಗರ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights