Bigg Boss :’ಮಂಜುದು ಈಗ ಏನೂ ನಡೆಯುತ್ತಿಲ್ಲ, ನೀನೇ ಸೆಂಟ್ರಾಫ್ ಅಟ್ರ್ಯಾಕ್ಷನ್ ಆಗಬೇಕು’

‘ಮಂಜುದು ಈಗ ಏನೂ ನಡೆಯುತ್ತಿಲ್ಲ, ನೀನೇ ಸೆಂಟ್ರಾಫ್ ಅಟ್ರ್ಯಾಕ್ಷನ್ ಆಗಬೇಕು’ ಹೀಗಂತ ಬಿಗ್ ಬಾಸ್ ಮನೆಯಲ್ಲಿ ಶಮಂತ್ ಗೆ ಪ್ರಶಾಂತ್ ಸಂಬರಗಿ ಹೇಳಿದ್ದು ನಿನ್ನೆಯ ಸಂಚಿಕೆಯಲ್ಲಿ ಕಂಡು ಬಂತು.

ಹೌದು… ಈಗಾಗಲೇ ತುಪ್ಪದ ವಿಚಾರಕ್ಕೆ ಟಾರ್ಗೇಟ್ ಆಗಿದ್ದ ಪ್ರಶಾಂತ್ ಲ್ಯಾಗ್ ಮಂಜನ ಮಧ್ಯೆ ಟಾಸ್ಕ್ ವಿಚಾರದಲ್ಲಿ ಜಗಳವಾಗಿದ್ದು, ಇದಕ್ಕಾಗಿನೋ ಏನೋ ಗೊತ್ತಿಲ್ಲ ಪ್ರಶಾಂತ್ ಸಂಬರಗಿ ‘ಮಂಜುದು ಈಗ ಏನೂ ನಡೆಯುತ್ತಿಲ್ಲ, ನೀನೇ ಸೆಂಟ್ರಾಫ್ ಅಟ್ರ್ಯಾಕ್ಷನ್ ಆಗಬೇಕು’ ಎಂದು ಶಮಂತ್ ಗೆ ಹೇಳಿದ್ದು ಕಂಡುಬಂತು.

ಇಷ್ಟು ದಿನ ಮಾತನಾಡುತ್ತಿಲ್ಲ ಎಂಬ ಹೇಳಿಕೆಗೆ ಮನೆಯ ಎಲ್ಲ ಸದಸ್ಯರ ಆರೋಪಕ್ಕೆ ಗುರಿಯಾಗಿದ್ದ ಶಮಂತ್ ‘ಎಕೋ ವಾಯ್ಸ್’ ಬಳಸಿ ಮಾತನಾಡುವುದರಿಂದ ಮನೆಯ ಸದಸ್ಯರನ್ನು ರಂಜಿಸುತ್ತಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಪ್ರಶಾಂತ್ ಶಮಂತ್ ಬಳಿ ಹೋಗಿ ಮಂಜನದ್ದು ಈಗ ಏನೂ ನಡೆಯುತ್ತಿಲ್ಲ. ನೀನೇ ಮನೆಯ ಸದಸ್ಯರ ಸೆಂಟ್ರಾಫ್ ಅಟ್ರ್ಯಾಕ್ಷನ್ ಆಗಬೇಕು ಎಂದು ಸಲಹೆ ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೇ ಪ್ರಶಾಂತ್ ಸಂಬರಗಿ ದಿವ್ಯ ಸುರೇಶ್ ಬಳಿ ಹೋಗಿ ಇದೇ ರೀತಿ ಸಲಹೆಯನ್ನು ಕೊಟ್ಟಿದ್ದಾರೆ. ಅಂದರೆ ‘ಮಂಜುವಿನ ಬಾಲ ನೀನು. ನೆರಳಲ್ಲಿ ಬದುಕುವುದು ಬೇಡ. ಹುಡುಗಿಯರಲ್ಲಿ ನೀನೇ ಸ್ಟ್ರಾಂಗ್. ಮನೆಯ ಎಲ್ಲಾ ಸದಸ್ಯರೊಂದಿಗೆ ಬೆರೆಯುವಂತೆ’ ಸಲಹೆ ನೀಡಿದರು. ಇದಕ್ಕೆ ದಿವ್ಯ ಸುರೇಶ್ ಕೂಡ ಒಪ್ಪಿಗೆ ಸೂಚಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights