‘ಯುವತಿ ಈಗಾಗ್ಲೇ ಕೋರ್ಟ್ ಹಾಲ್ ನಲ್ಲಿ ಇದ್ದಾಳೆ’ – ಯುವತಿ ಪರ ವಕೀಲ ಜಗದೀಶ್ ಕುಮಾರ್
ಸಿಡಿ ಯುವತಿ ಈಗಾಗ್ಲೇ ಕೋರ್ಟ್ ಹಾಲ್ ನಲ್ಲಿ ಇದ್ದಾಳೆ. ಆಕೆಯ ವಿಚಾರಣೆ ಆರಮಭವಾಗಿದೆ ಎಂದು ಯುವತಿ ಪರ ವಕೀಲ ಜಗದೀಶ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ.
ಹೌದು… ನ್ಯಾಯಾಧೀಶರ ಮುಂದೆ ಯುವತಿ ಈಗಾಗಲೇ ನೇರವಾಗಿ ಬಂದು ಹೇಳಿಕೆ ಕೊಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ ನೇರವಾಗಿ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ. ಯುವತಿ ಆಗಮಿಸುವ ಹಿನ್ನಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ. ಕೋರ್ಟ್ ಗೆ ಹಾಜರಾಗುವ ಮುನ್ನ ಯುವತಿ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಯಾವ ಪೊಲೀಸರ ರಕ್ಷಣೆಯ ಮೂಲಕವೂ ಆಕೆ ಕೋರ್ಟ್ ಆವರಣ ಪ್ರವೇಶಿಸಿಲ್ಲ. ಹೀಗಿದ್ದರೂ ಯುವತಿ ಪರ ವಕೀಲ ಜಗದೀಶ್ ಯುವತಿ ಈಗಾಗಲೇ ನ್ಯಾಯಾಧೀಶರ ಮುಂದೆ ಇದ್ದಾಳೆ ಎನ್ನುವ ಹೇಳಿಕೆ ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಯುವತಿಯ ಬಗ್ಗೆ ಇನ್ನಷ್ಟು ಮಾತನಾಡಿದ ವಕೀಲ ಜಗದೀಶ್ ಕುಮಾರ್, “ಆಕೆ ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾಳೆ. ಆಕೆಯ ಜೊತೆ ನಮ್ಮ ವಕೀಲರು ಇದ್ದಾರೆ” ಎಂದು ಹೇಳಿದ್ದಾರೆ.
ಈಗಾಗಲೇ ಯುವತಿ ಪರ ವಕೀಲ ಜಗದೀಶ್ ಕುಮಾರ್, ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಕೋರ್ಟ್ ಗೆ ಆಗಮಿಸಿದ್ದಾರೆ. ಈಗ ಯುವತಿ ಹೇಳಿಕೆ ಶುರುವಾಗಿದೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿಕೆ ನೀಡಿದ್ದಾರೆ.

