ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ 5 ದೇಶಗಳು…

ಜಗತ್ತಿನಲ್ಲಿ ಕೊರೊನಾವೈರಸ್ ನಿಂದ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಮಂಗಳವಾರ 1 ಮಿಲಿಯನ್ ಗಡಿ ದಾಟಿದೆ. ಯುಎಸ್, ಭಾರತ, ಬ್ರೆಜಿಲ್ ಮತ್ತು ಇತರ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ.

ರಾಯಿಟರ್ಸ್ ಪ್ರಕಾರ, ಇದುವರೆಗೆ ಕೋವಿಡ್ -19 ಸಾವುಗಳ ಸಂಖ್ಯೆ ಈಗಾಗಲೇ ಪ್ರತಿ ವರ್ಷ ಮಲೇರಿಯಾದಿಂದ ಸಾಯುವವರ ಸಂಖ್ಯೆಕಿಂತ ದ್ವಿಗುಣವಾಗಿದೆ ಎಂದು ಅಂದಾಜಿಸಲಾಗಿದೆ.

ಕೋವಿಡ್ -19 ಸಾವಿನ ಸಂಖ್ಯೆ 1 ಮಿಲಿಯನ್ ದಾಟಿದ ಬಗ್ಗೆ ಮಾತನಾಡಿದ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, “ನಮ್ಮ ಜಗತ್ತು ಸಂಕಟದ ಮೈಲಿಗಲ್ಲನ್ನು ತಲುಪಿದೆ ” ಎಂದಿದ್ದಾರೆ.

ರಾಯಿಟರ್ಸ್ ಹೇಳುವಂತೆ, ಕೋವಿಡ್ -19 ನಿಂದ ಜಾಗತಿಕವಾಗಿ ಪ್ರತಿದಿನ 5,400 ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. “ಅದು ಗಂಟೆಗೆ ಸುಮಾರು 226 ಜನರಿಗೆ ಅಥವಾ ಪ್ರತಿ 16 ಸೆಕೆಂಡಿಗೆ ಒಬ್ಬ ವ್ಯಕ್ತಿಗೆ ಸಮನಾಗಿರುತ್ತದೆ. 90 ನಿಮಿಷಗಳ ಸಾಕರ್ ಪಂದ್ಯವನ್ನು ವೀಕ್ಷಿಸಲು ತೆಗೆದುಕೊಳ್ಳುವ ಸಮಯದಲ್ಲಿ, ಸರಾಸರಿ 340 ಜನರು ಸಾಯುತ್ತಾರೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜಾಗತಿಕ ಕೋವಿಡ್ -19 ಪ್ರಕರಣ 33 ಮಿಲಿಯನ್ ದಾಟಿದೆ. ಭಾರತದಲ್ಲಿ ಮಾತ್ರ ಇದುವರೆಗೆ 61 ಲಕ್ಷ (6.1 ಮಿಲಿಯನ್) ಪ್ರಕರಣಗಳಿದ್ದು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ನಂತರ ಎರಡನೇ ಅತಿ ಹೆಚ್ಚು ಪೀಡಿತ ದೇಶವಾಗಿದೆ.

ಕೊರೊನಾದಿಂದ ಕೆಟ್ಟ ಪರಿಣಾಮಕ್ಕೊಳಗಾದ 5 ದೇಶಗಳ ಪಟ್ಟಿ ಇಲ್ಲಿದೆ:

1) ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ: ಯುಎಸ್ ಇದುವರೆಗೆ ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ಮಂಗಳವಾರದ ವೇಳೆಗೆ ಅದರ ಒಟ್ಟು 71,49,073 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಕೋವಿಡ್ -19 ಸಾವುಗಳ ವಿಷಯದಲ್ಲಿ, ಯುಎಸ್ ಸಾಕಷ್ಟು ಪ್ರಾಣಿಹಾನಿಗೊಳಗಾಗುತ್ತಿದೆ. ಇದುವರೆಗೆ 205,085 ಸಾವುಗಳು ಸಂಭವಿಸಿವೆ.

2) ಭಾರತ: ಕೆಲವು ಸಮಯದಿಂದ ಭಾರತ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ಪ್ರತಿದಿನ ಸರಾಸರಿ 80,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಮಂಗಳವಾರ 61,45,291 ಪ್ರಕರಣಗಳಿವೆ. ಅತಿ ಹೆಚ್ಚು ಕೋವಿಡ್ -19 ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಈವರೆಗೆ ಒಟ್ಟು 96,318 ಜನರು ಕೋವಿಡ್ -19 ಸಾವನ್ನಪ್ಪಿದ್ದಾರೆ.

3) ಬ್ರೆಜಿಲ್: 47,45,464 ಕೋವಿಡ್ -19 ಪ್ರಕರಣಗಳೊಂದಿಗೆ ಬ್ರೆಜಿಲ್ ಮೂರನೇ ಅತಿ ಹೆಚ್ಚು ಪೀಡಿತ ದೇಶವಾಗಿದೆ. ಕೋವಿಡ್ -19 ಸೋಂಕಿತರ ಸಾವಿನಲ್ಲಿ ಇದು ಎರಡನೇ ಸ್ಥಾನದಲ್ಲಿದೆ.

4) ರಷ್ಯಾ: ಯುಎಸ್, ಭಾರತ ಮತ್ತು ಬ್ರೆಜಿಲ್ಗೆ ಹೋಲಿಸಿದರೆ, ರಷ್ಯಾ ಕಡಿಮೆ ಕೋವಿಡ್ -19 ಪ್ರಕರಣಗಳನ್ನು ಹೊಂದಿದೆ ಆದರೆ ಇದು ಇನ್ನೂ ಹೆಚ್ಚು ಪರಿಣಾಮ ಬೀರುವ ನಾಲ್ಕನೇ ದೇಶವಾಗಿ ಉಳಿದಿದೆ. ರಷ್ಯಾದಲ್ಲಿ ಕೋವಿಡ್ -19 ಗೆ ಇದುವರೆಗೆ ಒಟ್ಟು 11,54,299 ಜನರು ಧನಾತ್ಮಕ ಪರೀಕ್ಷೆ ನಡೆಸಿದ್ದರೆ, 20,299 ಜನರು ಸಾವನ್ನಪ್ಪಿದ್ದಾರೆ.

5) ಕೊಲಂಬಿಯಾ: ಒಟ್ಟು ಕೊವಿಡ್ -19 ಪ್ರಕರಣಗಳ ವಿಷಯದಲ್ಲಿ 1 ಮಿಲಿಯನ್ ಗಡಿ ತಲುಪುವ ಐದನೇ ದೇಶ ಕೊಲಂಬಿಯಾ. ಇದು ಪ್ರಸ್ತುತ 8,18,203 ಪ್ರಕರಣಗಳನ್ನು ಹೊಂದಿದೆ ಮತ್ತು ಕೋವಿಡ್ ಸಾವಿನ ಸಂಖ್ಯೆ 25,641 ಕ್ಕೆ ಏರಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights