‘ಕೊರೊನಾ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ‘- ಸಚಿವ ಡಾ.ಕೆ ಸುಧಾಕರ್ ಸ್ಪಷ್ಟನೆ!
ಅನಿವಾರ್ಯವಾಗಿ ಕೊರೊನಾ ನಿಯಮ ಜಾರಿ ಮಾಡಿದ್ದೇವೆ. ಕೊರೊನಾ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಏ. 20ರವರೆಗೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ತಡೆಗೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದಂತೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದ ಬೆನ್ನಲ್ಲೆ ರಾಜ್ಯದಲ್ಲಿ ‘ಹಿಟ್ ಚಿತ್ರಗಳ ಕೊಲೆಯಾಗುತ್ತಿದೆ’ ಎಂದು ಆರೋಪಿಸಲಾಗುತ್ತಿದೆ. ಏಪ್ರಿಲ್ 1 ರಂದು ರಿಲೀಸ್ ಆದ ‘ಯುವರತ್ನ’ ಸಿನಿಮಾಕ್ಕೆ ಸರ್ಕಾರದ ಆದೇಶದಿಂದ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಪುನೀತ್ ರಾಜಕುಮಾರ್ ” ಒಳ್ಳೆಯ ಸಿನಿಮಾವನ್ನು ಕೊಲೆ ಮಾಡಬೇಡಿ” ಎಂದು ಮನವಿ ಮಾಡಿದ್ದಾರೆ.
ಮಾತ್ರವಲ್ಲದೇ ಜಿಮ್ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಆದೇಶಿಸಲಾಗಿದ್ದು, ಜಿಮ್ ಮಾಲೀಕರು ಬೀದಿಗಿಳಿದು ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು ಸಾರ್ವಕಜನಿಕರು ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ ಕೊರೊನಾ ಹಿಮ್ಮೆಟ್ಟಿಸಲು ಸಹಕರಿಸಬೇಕೆಂದು ಕೋರುತ್ತೇನೆ.
ಲಸಿಕೆ ಹಾಕಿಸಿ, ಮುನ್ನೆಚ್ಚರಿಕೆಯೂ ಪಾಲಿಸಿ. pic.twitter.com/T1QYRkC3Xj
— Dr Sudhakar K (@mla_sudhakar) April 2, 2021
ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, “ಸಿನಿಮಾ ಕ್ಷೇತ್ರಕ್ಕೆ ಯಾವುದೇ ವಿನಾಯತಿ ಇಲ್ಲ. ಎರಡನೇ ಅಲೆ ಹೊಸ್ತಿಲಲ್ಲಿ ನಾವಿದ್ದೇವೆ. ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ದಾರಿಯಿಲ್ಲ. ಇನ್ನು ಈ ಮಾರ್ಗಸೂಚಿಗಳನ್ನು ಎಲ್ಲರ ಜೊತೆ ಚರ್ಚಿಸಿಯೇ ನಿರ್ಧರಿಸಿದ್ದೇವೆ. ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕ್ಷೇತ್ರದ ಮೇಲೆ ನಿರ್ಬಂಧ ಹೇರಲು ಸರ್ಕಾರಕ್ಕೂ ಇಷ್ಟವಿಲ್ಲ. ಆದರೆ ಈಗ ಅನಿವಾರ್ಯವಾಗಿ ಮಾರ್ಗಸೂಚಿ ಪಾಲನೆ ಮಾಡಲೇಬೇಕು ಎಂದರುಚುನಾವಣಾ ಆಯೋಗದಿಂದಲೂ ಮಾರ್ಗಸೂಚಿ ಪ್ರಕಟವಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೂ ಕಠಿಣ ಕ್ರಮ ಜಾರಿ ಮಾಡಲಾಗುವುದು.ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲರಾಜ್ಯದಲ್ಲಿ ಪ್ರತಿನಿತ್ಯ 5 ಸಾವಿರ ಪ್ರಕರಣ ದಾಖಲಾಗುತ್ತಿದೆ. ಬೆಂಗಳೂರಲ್ಲಿ 3 ಸಾವಿರ ಕೇಸ್ ದಾಖಲಾಗಿದೆ. ಈಗ ಕ್ರಮಕೈಗೊಳ್ಳದಿದ್ರೆ ಹೆಚ್ಚುಕಡಿಮೆ ಆಗಲಿದೆ” ಎಂದರು.

