ಬಂಗಾಳ ಚುನಾವಣೆ: ಹಿಂದೂ-ಮುಸ್ಲಿಮರನ್ನು ವಿಭಜಿಸಲು AIMIM, ISA ಪಕ್ಷಗಳು BJPಯಿಂದ ಹಣ ಪಡೆದಿವೆ: ಮಮತಾ ಬ್ಯಾನರ್ಜಿ

ಪಶ್ವಿಮ ಬಂಗಾಳದಲ್ಲಿ ಬಿಜೆಪಿಯು ವಿಭಜನೆಯ ರಾಜಕೀಯವನ್ನು ಮಾಡುತ್ತಿದೆ. ರಾಜ್ಯದಲ್ಲಿ ಹಿಂದೂ-ಮುಸ್ಲಿಮರನ್ನು ವಿಭಜಿಸಲು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂ) ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಪಕ್ಷಗಳಿಗೆ ಬಿಜೆಪಿ ಹಣ ನೀಡುತ್ತಿದೆ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

“ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಹರೇ ಕೃಷ್ಣ ಹರೇ ಹರೇ, ತೃಣಮೂಲ ಘರೆ ಘರೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಹರೇ ಕೃಷ್ಣ ಹರೇ ಹರೇ, ಹಿಂದೂ, ಮುಸ್ಲಿಂ ಭಾಗ್ ಕರೇ, ಪರಿಶಿಷ್ಟ ಜಾತಿ (ಎಸ್‌ಸಿ) ಭಾಗ್ ಕರೇ ಎಂದು ಹೇಳುತ್ತಿದ್ದು,  ಬಂಗಾಳವನ್ನು ವಿಭಜಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ನಮ್ಮ ಸಂಸ್ಕೃತಿ ಏನೆಂದರೆ, ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಚಹಾ ಸೇವಿಸುತ್ತಾರೆ ಮತ್ತು ದುರ್ಗಾ ಪೂಜೆಯನ್ನು ಒಟ್ಟಿಗೆ ಆಚರಿಸುತ್ತಾರೆ. ಇದನ್ನು ಸಹಿಸದ ಬಿಜೆಪಿ ಸೌಹಾರ್ದತೆಯನ್ನು ಒಡೆಯುತ್ತಿದೆ. ನಮ್ಮ ಹಳ್ಳಿಗಳಲ್ಲಿ ಅಶಾಂತಿ ಇದ್ದರೆ ಬಿಜೆಪಿಗೆ ಲಾಭವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

“ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಎಐಎಂಐಎಂ ಮತ್ತು ಐಎಸ್‌ಎಫ್ ಪಕ್ಷಗಳಿಗೆ ಬಿಜೆಪಿ ಹಣ ನೀಡಿದೆ. ನೀವು (ಬಂಗಾಳ ಜನರು) ವಿಭಜನೆಯನ್ನು ಸಹಿಸದಿದ್ದರೆ, ರಾಜ್ಯದಲ್ಲಿ ಎನ್‌ಆರ್‌ಸಿ ಬೇಡವಾದರೆ ಅವರಿಗೆ ಮತ ಚಲಾಯಿಸಬೇಡಿ” ಎಂದು ಮಮತಾ ಕರೆಕೊಟ್ಟಿದ್ದಾರೆ.

“ಅವರಿಗೆ ಮತ ನೀಡಿದರೆ ನೀವು ಬಿಜೆಪಿಗೆ ಮತ ನೀಡಿದ್ದೀರಿ ಎಂದರ್ಥ. ನಂದಿಗ್ರಾಮದಲ್ಲಿ, ನಿಮ್ಮ ಮಗಳು ಮತ್ತು ಮಕ್ಕಳನ್ನು ಅಪಹರಿಸಲಾಗುವುದು, ಅದನ್ನೇ ಈ ಗೂಂಡಾಗಳು ಬೆದರಿಸುತ್ತಿದ್ದಾರೆ. ಬಿಜೆಪಿಯ ಹೊರಗಿನ ಗುಂಡಾಗಳಿಗೆ ಮತಗಳನ್ನು ನೀಡಬೇಡಿ” ಎಂದು ಅವರು ಹೇಳಿದರು.

“ನಿಮಗೆ ಮಮತಾ ಬೇಕಾದರೆ, ಟಿಎಂಸಿಗೆ ಮತ ನೀಡಿ. ಇದು ದೆಹಲಿ ಚುನಾವಣೆಯಲ್ಲ ಬಂಗಾಳದ ಚುನಾವಣೆ” ಎಂದು ಅವರು ನೆನಪಿಸಿದರು.

ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಕ್ರಮವಾಗಿ ಮಾರ್ಚ್ 27 ಮತ್ತು ಏಪ್ರಿಲ್ 1 ರಂದು ನಡೆದಿವೆ. ಮುಂದಿನ ಹಂತದ ಮತದಾನ ಏಪ್ರಿಲ್ 6 ರಂದು ನಡೆಯಲಿದೆ.

ಇದನ್ನೂ ಓದಿ: ಮೋದಿ – ಮಮತಾ ಮುಖಾಮುಖಿ: ಹೂಗ್ಲಿಯಲ್ಲಿ ಇಬ್ಬರೂ ಚುನಾವಣಾ ಪ್ರಚಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights