ಗ್ರಾಮಸ್ಥರಿಂದ ಥಳಿಸಲ್ಪಟ್ಟು ಬಿಹಾರ ಪೊಲೀಸ್ ಸಾವು : ವಿಚಾರ ಕೇಳಿ ನಿಂತೇ ಹೊಯ್ತು ತಾಯಿ ಹೃದಯದ ಬಡಿತ!

ಗ್ರಾಮಸ್ಥರಿಂದ ಥಳಿಸಲ್ಪಟ್ಟು ಬಿಹಾರ ಪೊಲೀಸ್ ಅಧಿಕಾರಿ ಸಾವು ಅರಿಗಿಸಿಕೊಳ್ಳಲಾಗದೆ ತಾಯಿಗೆ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಜನಸಮೂಹವೊಂದರಿಂದ ಥಳಿಸಲ್ಪಟ್ಟ ಬಿಹಾರ ಪೊಲೀಸ್ ಅಧಿಕಾರಿಯ ಸಾವನ್ನು ಸಹಿಸಲಾಗದೆ ವೃದ್ಧ ತಾಯಿ ಭಾನುವಾರ ಆಘಾತದಿಂದ ಸಾವನ್ನಪ್ಪಿದ್ದಾರೆ.

ಏಪ್ರಿಲ್ 10 ರಂದು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ನಡೆದ ದಾಳಿಯಲ್ಲಿ ಕಿಶನ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಶ್ವಿನಿ ಕುಮಾರ್ ಅವರನ್ನು ಜನಸಮೂಹ ಹೊಡೆದು ಸಾಯಿಸಿದೆ. ಮಗನ ನಷ್ಟವನ್ನು ಭರಿಸಲಾಗದೆ ಅಶ್ವಿನಿ ಕುಮಾರ್ ಅವರ ತಾಯಿ ಆಘಾತದಿಂದ ಸಾವನ್ನಪ್ಪಿದ್ದಾರೆ.

ಪಿಟಿಐ ಪ್ರಕಾರ, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಸುರೇಶ್ ಚೌಧರಿ ಅವರ ಸೂಚನೆಯ ಮೇರೆಗೆ ಮೋಟಾರ್ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನಿ ಕುಮಾರ್ ಪಶ್ಚಿಮ ಬಂಗಾಳ ಗ್ರಾಮಕ್ಕೆ ತೆರಳಿದ್ದರು.

ದಾಳಿಯಲ್ಲಿ ಏನಾಯಿತು?
ಅಶ್ವಿನಿ ಕುಮಾರ್ ಬಂಗಾಳದ ಪಂಜಿಪರಾ ಪೊಲೀಸ್ ಠಾಣೆ ವ್ಯಾಪ್ತಿಯ ನೆರೆಯ ಪ್ರದೇಶದಲ್ಲಿ ಮೋಟಾರ್ಸೈಕಲ್ ಕಳ್ಳತನ ಅಪರಾಧಿಯನ್ನು ಹುಡುಕಲು ಹೋಗಿದ್ದರು.

ಮೋಟಾರ್ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನಿ ಕುಮಾರ್ ದಾಳಿ ನಡೆಸುತ್ತಿದ್ದಾಗ ಮಧ್ಯರಾತ್ರಿಯ ನಂತರ ಜಿಲ್ಲೆಯ ಗೋಲ್ಪೋಖರ್ ಪೊಲೀಸ್ ಠಾಣೆ ಪ್ರದೇಶದ ಪಂತಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮಸ್ಥರು ಅಶ್ವಿನಿ ಕುಮಾರ್ ಮೇಲೆ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ.

ನಂತರ, ಪಂಜಿಪರಾ ಹೊರಠಾಣೆ ಪೊಲೀಸ್ ಸಿಬ್ಬಂದಿಯ ತಂಡ ಆತನನ್ನು ರಕ್ಷಿಸಿ ಇಸ್ಲಾಂಪುರ್ ಸದರ್ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೆ ಅಶ್ವಿನ್ ಕುಮಾರ್ ಪ್ರಾಣ ಪಕ್ಷ ಹಾರಿಹೋಗಿತ್ತು. ಈ ವೇಳೆ ಇವರೊಂದಿಗೆ 7 ಜನ ಪೊಲೀಸರು ಇದ್ದರು ಎನ್ನಲಾಗಿದೆ. ಹಲ್ಲೆ ನಡೆಸಿದಾಗ ಓಡಿಹೋದ ಏಳು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಜೊತೆಗೆ ಅಶ್ವಿನಿ ಕುಮಾರ್ ಅವರು ಬಂಗಾಳದ ಸ್ಥಳೀಯ ಪೊಲೀಸರಿಂದ ಯಾವುದೇ ಬೆಂಬಲವನ್ನು ಪಡೆದಿಲ್ಲ ಎಂದು ಆರೋಪಿಸಲಾಗಿದೆ. ಅಶ್ವಿನಿ ಕುಮಾರ್ ಸಹಾಯ ಕೋರಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದರೆ, ಅವರು ಅವರೊಂದಿಗೆ ತಂಡವನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದರು, ಆದರೆ ಅದನ್ನು ಮಾಡಲು ವಿಫಲರಾಗಿದ್ದಾರೆ ಎಂದು ಬಿಹಾರ ಪೊಲೀಸ್ ಸಂಘ ಹೇಳಿದೆ.

ಸದ್ಯ ತಾಯಿ ಮತ್ತು ಮಗ ಇಬ್ಬರನ್ನೂ ಪೂರ್ಣಿಯಾ ಜಿಲ್ಲೆಯ ಅವರ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights