ಮುಷ್ಕರ ನಿರತ ಸಾರಿಗೆ ನೌಕರರ ಮೇಲೆ ಸರ್ಕಾರದ ದರ್ಪ; 271 ಚಾಲಕ-ನಿರ್ವಾಹಕರ ಅಮಾನತು!

ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ 9 ದಿನಕ್ಕೆ ಕಾಲಿಟ್ಟಿದೆ. ಆಯೋಗ ಜಾರಿಯಾಗುವವರೆಗೂ ತಮ್ಮ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಆದರೆ, 271 ಚಾಲಕರು ಹಾಗೂ ನಿರ್ವಾಹಕರನ್ನು ಸರ್ಕಾರ ಅಮಾನತು ಮಾಡಿದೆ.

09 ದಿನಗಳಿಂದ ಮುಷ್ಕರ ನಡೆಸುತ್ತಿರುವ ನೌಕರರು ಇಂದು ಕ್ಯಾಂಡಲ್‌ ಮಾರ್ಚ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ನಟ ಯಶ್‌ ಅವರ ಬೆಂಬಲವನ್ನೂ ನೌಕರರು ಕೋರಿದ್ದಾರೆ.

ದಿನಗಳೆದಂತೆ ತಮ್ಮ ಪ್ರತಿಭಟನೆಯನ್ನು ವಿವಿಧ ರೀತಿಯಲ್ಲಿ ಮುಂದುವರೆಸಿರುವ ಸಾರಿಗೆ ನೌಕರರನ್ನು ಮಾತು-ಕತೆಗೂ ಕರೆಯದ ಸರ್ಕಾರ ನೌಕರರ ಮೇಲೆ ಮತ್ತಷ್ಟು ದೌರ್ಜನ್ಯ ಎಸಗುತ್ತಿದೆ. ಹೀಗಾಗಿ ಶಿಸ್ತುಕ್ರಮದ ಹೆಸರಿನಲ್ಲಿ ನೌಕರರನ್ನು ಅಮಾನತು ಮಾಡುತ್ತಿದೆ. ಕರ್ತವ್ಯಕ್ಕೆ ಗೈರು ಹಾಜರಿ ಎಂಬ ಹೆಸರಿನಲ್ಲಿ 271 ಚಾಲಕರು ಮತ್ತು ನಿರ್ವಾಹಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಕಳೆದ 8 ದಿನಗಳಲ್ಲಿ 495 ನೌಕರರ ಮೇಲೆ ಶಿಸ್ತುಕ್ರಮದ ಅಸ್ತ್ರ ಪ್ರಯೋಗಿಸಲಾಗಿದೆ.

ಇನ್ನು ಕರ್ತವ್ಯಕ್ಕೆ ಹಾಜರಾದ ನೌಕರರ ಕೆಲಸಕ್ಕೆ ಅಡ್ಡಿಪಡಿಸುವ ಹಾಗೂ ಬಸ್ ಗಳ ಮೇಲೆ ದಾಳಿ ಮಾಡುವವರ ವಿರುದ್ಧ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಮತ್ತು ಕೆಸ್ಮಾ (ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಪ್ರಯೋಗಿಸಿದೆ.

ಇದನ್ನೂ ಓದಿ: ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಸಾಧ್ಯತೆ ತೀರಾ ಕಮ್ಮಿ – ಯಾಕೆ ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights