ಮೇ 2ರ ವೇಳೆಗೆ ದೀದೀ ಕಾಲು ಗುಣವಾಗುತ್ತೆ; ನಡೆದುಕೊಂಡೇ ಹೋಗಿ ರಾಜೀನಾಮೆ ನೀಡುತ್ತಾರೆ: ಅಮಿತ್‌ ಶಾ

ಪಶ್ಚಿಮ ಬಂಗಾಳದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆದಿರುವ 180 ಸ್ಥಾನಗಳಲ್ಲಿ ಬಿಜೆಪಿ 122ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಟಿಎಂಸಿ ಭಾರೀ ಅಂತರದಲ್ಲಿ ಸೋಲು ಕಾಣಲಿದೆ. ಅಲ್ಲದೆ, ಮೇ 02ರವೇಳೆಗೆ ದೀದೀ (ಮಮತಾ) ಅವರ ಕಾಲು ಸರಿಹೋಗುತ್ತದೆ. ಅವರು ನಡೆದುಕೊಂಡು ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಐದು ಹಂತದ ಚುನಾವಣೆಯ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರುತ್ಸಾಹಗೊಂಡಿದ್ದಾರೆ. ಏಕೆಂದರೆ, ಚುನಾವಣೆ ನಡೆದಿರುವ ಕ್ಷೇತ್ರಗಳಲ್ಲಿ 122ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಅಲ್ಲದೆ,  ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ದೀದೀಯನ್ನು ಸೋಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಮೇ 2ರ ವೇಳೆಗೆ ದೀದೀ ಕಾಲಿಗೆ ಆಗಿರುವ ಗಾಯ ಗುಣವಾಗುತ್ತೆ. ಫಲಿತಾಂಶ ಬಂದ ಮೇಲೆ ಅವರು ನಡೆದುಕೊಂಡೇ ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತಾರೆ.

‘ ದೀದಿಗೆ ಬಂಗಾಳದ ಅಭಿವೃದ್ಧಿಗೆ ಯಾವುದೇ ಕಾರ್ಯಸೂಚಿ ಇಲ್ಲ. ದೀದಿ ಬಂಗಾಳದಲ್ಲಿ 12 ನಿಮಿಷಗಳನ್ನ ಕಳೆದರೆ, ಅದರಲ್ಲಿ 10 ನಿಮಿಷ ನನ್ನನ್ನೂ ಮತ್ತು ಮೋದಿಯವರನ್ನೂ ನಿಂದಿಸೋಕೆ ಕಳೆಯುತ್ತಾರೆ. ಇನ್ನುಳಿದ 2 ನಿಮಿಷಗಳ ಕಾಲ ಭದ್ರತಾ ಪಡೆಗಳನ್ನ ಶಪಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಇದರಿಂದಾಗಿ, ಬಂಗಾಳದ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೊರಟಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಪ್ರತಿ ಕುಟುಂಬದಿಂದ ಒಬ್ಬ ವ್ಯಕ್ತಿಗೆ ಉದ್ಯೋಗ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಬಂಗಾಳದಲ್ಲಿ ಎಲ್ಲಾ ರ್‍ಯಾಲಿಗಳನ್ನೂ ಮಾಡಿದ ರಾಹುಲ್‌ಗಾಂಧಿ; ಇತರ ಪಕ್ಷಗಳಿಗೂ ಮನವಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights