ಕಾರ್ಗಿಲ್‌ ಯುದ್ದಕ್ಕಿಂತ ಹೆಚ್ಚು ಜನರು ಬಲಿಯಾಗುತ್ತಿದ್ದರೂ ಚುನಾವಣಾ ರ್‍ಯಾಲಿಗಳು ಬೇಕೇ?: ಮಾಜಿ ಸೇನಾ ಮುಖ್ಯಸ್ಥ ಆಕ್ರೋಶ

ದೇಶವು ಕೊರೊನಾ ವಿರುದ್ದದ ಯದ್ಧದಲ್ಲಿದೆ. ದೇಶದಲ್ಲಿ ಕಾರ್ಗಿಲ್‌ ಯುದ್ದದಲ್ಲಿ ಮಡಿದ ಯೋಧರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಜನರು ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಚುಣಾವಣಾ ರ್‍ಯಾಲಿಗಳನ್ನು ನಡೆಸುವ ಅವಶ್ಯಕತೆ ಇದೆಯೇ ಎಂದು ಮಾಜಿ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ನಮ್ಮ ರಾಷ್ಟ್ರವು ಯುದ್ಧದಲ್ಲಿದೆ. 1338 ಭಾರತೀಯರು ಸಾಂಕ್ರಾಮಿಕ ರೋಗದಿಂದ ಶನಿವಾರ ಸಾವನ್ನಪ್ಪಿದ್ದಾರೆ. ಅದಕ್ಕೂ ಮೊದಲ ದಿನ 1182 ಮಂದಿ ಸಾವನ್ನಪ್ಪಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸಂಖ್ಯೆಗಿಂತ 2.5 ಪಟ್ಟು ಹೆಚ್ಚು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಷ್ಟ್ರವು ಈ ಯುದ್ಧದ ಮೇಲೆ ಕೇಂದ್ರೀಕರಿಸಿದೆಯೇ? ಚುನಾವಣಾ ರ್ಯಾಲಿಗಳು, ಧಾರ್ಮಿಕ ಕಾರ್ಯಕ್ರಮಗಳು, ರೈತರ ಆಂದೋಲನ, ಸಂಪನ್ಮೂಲಗಳ ಬಗ್ಗೆ ನಡೆಯುತ್ತಿರುವ ಹೋರಾಟ… ಎಚ್ಚರಗೊಳ್ಳು ಭಾರತ!” ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಸುಮಾರು 2 ತಿಂಗಳು ನಡೆದ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೊರೊನಾಗೆ ಬಲಿಯಾಗುತ್ತಿರುವ ಬಗ್ಗೆ ಅವರ ಕಳವಳ ಗಮನಾರ್ಹ ಎಂದು ಹಲವರು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆಯು ಭಾರೀ ವ್ಯಾಪಕವಾಗಿ ಹಡುತ್ತಿದೆ, ಸಾವಿರಾರು ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದರೂ, ದೇಶದ ಪ್ರಧಾನಿ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ತಮ್ಮ ಗಮನವನ್ನು ಚುನಾವಣೆಗಳ ಮೇಲೆ ಕೇಂದ್ರಿಕರಿಸಿರುವುದು ಮತ್ತು ರ್‍ಯಾಲಿಗಳನ್ನು ನಡೆಸುತ್ತಿರುವ ಬಗ್ಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಬಂಗಾಳದಲ್ಲಿ ಎಲ್ಲಾ ರ್‍ಯಾಲಿಗಳನ್ನೂ ಮಾಡಿದ ರಾಹುಲ್‌ಗಾಂಧಿ; ಇತರ ಪಕ್ಷಗಳಿಗೂ ಮನವಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights