ಇಂದಿನಿಂದ ಕೊರೊನಾ ಸಂಜೀವಿನಿಯ ಮೂರನೇ ಹಂತ ಆರಂಭ…!

ಭಾರತದಲ್ಲಿ ಕೊರೊನಾ ಅಟ್ಟಹಾಸ ಮತ್ತೆ ಶುರುವಾಗಿದ್ದು ಇದರ ಬೆನ್ನಲ್ಲೆ ಇಂದಿನಿಂದ ಕೊರೊನಾ ಸಂಜೀವಿನಿಯ ಮೂರನೇ ಇನ್ನಿಂಗ್ಸ್ ಆರಂಭಿಸಲಾಗಿದೆ.

ಹೌದು.. ಇಂದಿನಿಂದ 20 ರೀತಿಯ ಕಾಯಿಲೆ ಇರೋರಿಗೆ ಮೂರನೇ ಹಂತದ ಲಸಿಕೆ ನೀಡಲಾಗುತ್ತದೆ. 45 ವರ್ಷ ಮೇಲ್ಪಟ್ಟವರಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ 10 ಸಾವಿರ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. 20 ಸಾವಿರ ಖಾಸಗಿ ಕೇಂದ್ರಗಳಲ್ಲಿ ಪ್ರತೀ ಡೋಸ್ ಗೆ 250 ರೂ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಲಸಿಕೆಗೆ ಇಂತಿಷ್ಟು ಹಣ ನೀಡಬೇಕು.

ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದ ಪಿಎಂ ಮೋದಿ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ. ಲಸಿಕೆ ಪಡೆಯಲು ಯಾರೂ ಕೂಡ ಹಿಂಜರಿಯಬೇಡಿ. ರಾಷ್ಟ್ರವನ್ನು ಕೋವಿಡ್ ಮುಕ್ತ ದೇಶವನ್ನು ಮಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲೂ  24 ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಕೊಡಲಾಗುತ್ತದೆ. 3 ಸರ್ಕಾರಿ, 2 ಖಾಸಗಿ ಮೆಡಿಕಲ್ ಕಾಲೇಜ್, 17 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಕೊಡಲಾಗುತ್ತದೆ. ಕೆಸಿ , ಬೌರಿಂಗ್, ಲೇಡಿ ಕರ್ಜನ್, ಎಂಎಸ್ ರಾಮಯ್ಯ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ನೀಡಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights