ಅಭಿಮಾನಿಗೆ ಕಿರುಕುಳ ಆರೋಪ; ನಟಿ, ಬಿಜೆಪಿ ಮುಖಂಡೆ ವಿರುದ್ದ ದೂರು ದಾಖಲು!

ಅಭಿಮಾನಿಯೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎಂದು ತಮಿಳು ನಟಿ, ಬಿಜೆಪಿ ಮುಖಂಡೆ ಜಯಲಕ್ಷ್ಮಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಯಲಕ್ಷ್ಮಿ ಅವರ ಅಭಿಮಾನಿಯಾಗಿರುವ ಗೀತಾ ಎಂಬುವವರು, ಸ್ವಸಹಾಯ ಮಹಿಳಾ ಗುಂಪು ನಡೆಸುತ್ತಿದ್ದಾರೆ. ಅವರು ಜಯಲಕ್ಷ್ಮಿ ಅವರೊಂದಿಗೆ ಸ್ನೇಹವನ್ನೂ ಬೆಳೆಸಿಕೊಂಡಿದ್ದರು. ಜಯಲಕ್ಷ್ಮಿ ಅವರ ಬಳಿ ಗೀತಾ ಅವರು ಸಾಲ ಪಡೆದುಕೊಂಡಿದ್ಧಾರೆ. ಸಾಲ ಕೊಡುವ ವೇಳೆ ಹಲವು ದಾಖಲೆಗಳಿಗೆ ಜಯಲಕ್ಷ್ಮಿ ಅವರು ಸಹಿ ಮಾಡಿಕೊಂಡಿದ್ಧಾರೆ. ಮಾತ್ರವಲ್ಲ, ಖಾಲಿ ಹಾಳೆಗೂ ಸಹಿ ಹಾಕಿಸಿಕೊಂಡಿದ್ದರು. ಅವರು ನೀಡಿದ್ದ ಸಾಲವನ್ನು ಬಡ್ಡಿ ಸಮೇತ ತೀರಿಸಿದ್ದೇನೆ. ಆದರೂ, ಅಲೆಕ್ಸಾಂಡರ್ ಹಾಗೂ ಚಾರ್ಲ್ಸ್ ಎಂಬ ಇಬ್ಬರು ರೌಡಿಗಳನ್ನು ಕಳಿಸಿ ಬೆದರಿಕೆ ಹಾಕಿಸಿದ್ದಾರೆ ಎಂದು ಗೀತಾ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ.

”2019ರಲ್ಲಿ ಗೀತಾ ತನ್ನ ಸ್ವಸಹಾಯ ಮಹಿಳಾ ಗುಂಪಿನ ಮಹಿಳೆಯರು ಕಷ್ಟದಲ್ಲಿದ್ದು ಅವರ ಸಹಾಯ ಮಾಡುವಂತೆ ಕೇಳಿಕೊಂಡರು. ನಾನು ಆಗ 17.50 ಲಕ್ಷ ಸಾಲ ನೀಡಿ ಒಪ್ಪಂದ ಮಾಡಿಕೊಂಡೆ. ಒಂದೊಮ್ಮೆ ಇವರು ಆರು ತಿಂಗಳ ಒಳಗಾಗಿ ಸಾಲ ತೀರಿಸಿದರೆ ಯಾವುದೇ ಬಡ್ಡಿ ನೀಡುವ ಅಗತ್ಯ ಇಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದೆ” ಎಂದು ನಟಿ ಜಯಲಕ್ಷ್ಮಿ ಹೇಳಿದ್ದಾರೆ.

”ನಾನು ನೀಡಿದ ಹಣವನ್ನು ಗೀತಾ ದುರುಪಯೋಗ ಮಾಡಿಕೊಂಡಿದ್ದಾರೆ. ಈವರೆಗೆ ನನಗೆ ಹಣವನ್ನು ಮರಳಿ ನೀಡಿಲ್ಲ. ಹಣ ಮರಳಿ ಕೇಳಿದ್ದಕ್ಕೆ ನನ್ನ ವಿರುದ್ದವೇ ದೂರು ನೀಡಿದ್ದಾರೆ” ಎಂದು ನಟಿ ಚೆನ್ನೈನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಗೀತಾ ವಿರುದ್ಧವೂ ದೂರು ದಾಖಲಿಸಿದ್ದಾರೆ.

ತಮಿಳು ಟಿವಿ ಹಾಗೂ ಸಿನಿಮಾ ರಂಗದಲ್ಲಿ ಜಯಲಕ್ಷ್ಮಿ ಅವರು ‘ಪಿರಿವೋಂ ಸಂಧಿಪೋಂ’, ‘ಕೆಳದಿ ಕಣ್ಮಣಿ’, ‘ತಮಿಳ್ ಕಡುವುಲ್ ಮುರುಗನ್’, ‘ಕಲ್ಯಾಣ ಪರಿಸು’, ‘ಮುಲ್ಲುಂ ಮಲರುಂ’, ‘ಪೂವೆ ಉನಕ್ಕಾಗ’ ಇನ್ನು ಕೆಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಈ ನಟಿಸಿದ್ದಾರೆ.

ಅಲ್ಲದೆ, ‘ಮಯಂದಿ ಕುಟುಂಬಧರ್’, ‘ಅಲೈ ಪೇಸಿ’, ‘ವೇಟ್ಟಿಕಾರನ್’, ‘ಗೋರಿಪಾಳ್ಯಂ’, ‘ಮುತ್ತುಕುಂ ಮುತ್ತಾಗ’, ‘ಅಪ್ಪ’, ‘ವಿಸಾರಣೈ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ನಟಿ ಜಯಲಕ್ಷ್ಮಿ ಕೆಲ ತಿಂಗಳ ಹಿಂದಷ್ಟೆ ಬಿಜೆಪಿ ಸೇರಿರುವ ನಟಿ ಜಯಲಕ್ಷ್ಮಿ ಕಳೆದ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನೂ ಮಾಡಿದ್ದರು.

Read Also: ಅಪಘಾತಕ್ಕೀಡಾದವರಿಗೆ ಸಹಾಯ ಮಾಡುವವರಿಗೆ 5,000 ರೂ ಬಹುಮಾನ: ರಾಜಸ್ಥಾನ ಸರ್ಕಾರ ಘೋಷಣೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights