ಹೊಸದಿಗಂತ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕರಿಗೆ 40 ಸಾವಿರ ದಂಡ – 7 ತಿಂಗಳ ಜೈಲು ಶಿಕ್ಷೆ!

ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ ಅವರನ್ನು ‘ನಕ್ಸಲ್ ಬೆಂಬಲಿಗ’ ಎಂಬ ಶಿರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿದ್ದ ಹೊಸ ದಿಗಂತ ಪತ್ರಿಕೆಯ ಸಂಪಾದಕ ದು.ಗು. ಲಕ್ಷ್ಮಣ ಹಾಗೂ ಪ್ರಕಾಶಕ ಎಸ್‌.ಶಾಂತಾರಾಮ್ ಅವರಿಗೆ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸಂಘಪರಿವಾರದ ಬೆಂಬಲಿಗ ಪತ್ರಿಕೆ ಎನ್ನಿಸಿಕೊಂಡಿರುವ ‘ಹೊಸ ದಿಗಂತ’ ಪತ್ರಿಕೆಯಲ್ಲಿ 2007 ರ ಜುಲೈ 3 ರಂದು ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ ಅವರ ಚಿತ್ರವನ್ನು ಪ್ರಕಟಿಸಿ, ‘ನಕ್ಸಲ್‌ ಬೆಂಬಲಿಗ’ ಎಂಬ ಶಿರ್ಷಿಕೆಯಲ್ಲಿ ಸುಳ್ಳು ಮತ್ತು ಮಾನಹಾನಿ ವರದಿಯನ್ನು ಪ್ರಕಟಿಸಿತ್ತು.

ಪತ್ರಿಕೆಯ ವರದಿಯ ವಿರುದ್ಧ ನ್ಯಾಯಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. 2019ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಶೃಂಗೇರಿ ಜೆ.ಎಂ.ಎಫ್‌.ಸಿ ನ್ಯಾಯಾಲಯವು ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು. ಅಲ್ಲದೆ, ಪತ್ರಿಕೆಯ ಸಂಪಾದಕ ದು.ಗು ಲಕ್ಷ್ಮಣ ಹಾಗೂ ಪ್ರಕಾಶಕ ಎಸ್. ಶಾಂತಾರಾಮ್‌ ಅವರಿಗೆ 40 ಸಾವಿರ ದಂಡ ಮತ್ತು ಐದು ತಿಂಗಳ ಸಜೆ, ತಪ್ಪಿದಲ್ಲಿ ಏಳು ಸಜೆ ವಿಧಿಸಿ ವಿಧಿಸಿತ್ತು.

ಶೃಂಗೇರಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ತಪ್ಪಿತಸ್ಥರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮನವಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಕೆಳ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದಿದ್ದು, ಶಂಗೇರಿಯ ಜೆ.ಎಂ.ಎಫ್‌.ಸಿ ನ್ಯಾಯಾಲಯ ವಿಧಿಸಿದ್ದ ದಂಡ ಮತ್ತು ಸಜೆಯನ್ನು ಖಾಯಂಗೊಳಿಸಿ ಖಾಯಂಗೊಳಿಸಿ ಆದೇಶ ನೀಡಿದೆ.

ಸಾಹಿತಿ ವಿಠಲ ಹೆಗ್ಗಡೆ ಅವರ ಚಾರಿತ್ಯ್ರ ವಧೆ ಮಾಡಿರುವುದರಿಂದ ಅವರಿಗೆ 35 ಸಾವಿರ ಹಾಗೂ ಸರ್ಕಾರಕ್ಕೆ 5 ಸಾವಿರ ಪಾವತಿಸಬೇಕೆಂದು, ತಪ್ಪಿದ್ದಲ್ಲಿ ಏಳು ತಿಂಗಳ ಜೈಲು ಶಿಕ್ಷೆಗೆ ಒಳಗಾಗಬೇಕೆಂದು ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

“ನಮ್ಮ ಜನಪರ ಚಳವಳಿಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ನಮ್ಮ ಬಗ್ಗೆ ಅಗೌರವ ಉಂಟು ಮಾಡಿ, ನನ್ನನ್ನು ಹಾಗೂ ನನ್ನ ಚಳುವಳಿಗಳನ್ನು ಮುಗಿಸುವ ಷಡ್ಯಂತ್ರ ರೂಪಿಸಿದ ಪತ್ರಕರ್ತರಿಬ್ಬರಿಗೆ ತಕ್ಕ ಶಿಕ್ಷೆಯಾಗಿದೆ. ನಮ್ಮ ಹೋರಾಟವು ಎಂದೆಂದಿಗೂ ಪ್ರಜಾತಾಂತ್ರಿಕ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೆ ನಡೆಯುತ್ತಿರುವುದಕ್ಕೆ ಸಿಕ್ಕ ಜಯ ಇದಾಗಿದೆ” ಎಂದು ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ
ಸಾಹಿತಿ ಕಲ್ಕುಳಿ ವಿಠಲ ಹೆಗ್ಗಡೆ

“ಕಳೆದ ವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗಲೂ ಶಾಸಕ ಸಿ.ಟಿ. ರವಿ ಹಾಗೂ ಅವರ ಪಕ್ಷ ಕೂಡಾ ಇದೇ ಆರೋಪವನ್ನು ಮಾಡಿತ್ತು. ಅವರೆಲ್ಲರಿಗೂ ಈ ತೀರ್ಪು ಎಚ್ಚರಿಕೆಯಾಗಿ ಬಂದಿದೆ” ಎಂದು ವಿಠಲ ಹೆಗ್ಗಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಗೋಕರ್ಣ ದೇವಾಲಯ ನಿರ್ವಹಣೆ ಮಾಜಿ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಹಸ್ತಾಂತರ: ಸುಪ್ರೀಂ ಕೋರ್ಟ್‌ ತೀರ್ಪು

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights