ಲಸಿಕೆ ಪಡೆದಿದ್ದರೂ ಭಾರತದ ಪ್ರವಾಸ ರದ್ದುಗೊಳಿಸಿ; ಪ್ರಜೆಗಳಿಗೆ ಅಮೆರಿಕಾ ಎಚ್ಚರಿಕೆ!
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾದಿಂದ ಭಾರತಕ್ಕೆ ಪ್ರವಾಸ ಹೋಗುವವರು ತಮ್ಮ ಪ್ರಯಾಣವನ್ನು ಮುಂದೂಡಬೇಕು ಎಂದು ಅಮೆರಿಕದ ಸಾರ್ವಜನಿಕ ಆರೋಗ್ಯ ಸಂಸ್ಥೆ ಅಮೆರಿಕಾದ ಜನರಿಗೆ ಸೂಚನೆ ನೀಡಿದೆ. ಒಂದು ವೇಳೆ ಹೋರಡಲೇಬೇಕಾದ ಅನಿವಾರ್ಯವಿದ್ದರೆ ಮಾತ್ರ ತೆರಳಿ, ಹೋರಡುವ ಮುನ್ನ ವ್ಯಾಕ್ಸಿನೇಶನ್ ಪಡೆದುಕೊಳ್ಳಿ ಎಂದು ತಿಳಿಸಿದೆ.
ಕೊರೊನಾ ವಿರುದ್ಧ ವಿತರಿಸಲಾಗುತ್ತಿರುವ ಲಸಿಕೆಯನ್ನು ಪಡೆದಿದ್ದರೂ ಕೂಡ ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವುದು ಅಪಾಯಕಾರಿ. ಲಸಿಕೆ ಪಡೆದಿದ್ದರೂ ರೂಪಾಂತರಿ ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತಮ್ಮ ಪ್ರವಾಸವನ್ನು ಮುಂದೂಡುವುದು ಉತ್ತಮ ಎಂದು ಪ್ರಜೆಗಳಿಗೆ ಡೀಸಿಸ್ ಕಂಟ್ರೋಲ್ ಆಯಂಡ್ ಪ್ರಿವೆನ್ಶನ್ (ಸಿಡಿಸಿ) ಮನವಿ ಮಾಡಿದೆ.
Amid a surge in COVID cases (in India), travellers should avoid all travel to India. Even fully vaccinated travellers may be at risk for getting & spreading variants and should avoid all travel to India. If you must travel to India, get fully vaccinated before travel: CDC, USA pic.twitter.com/VrLK4hpZRA
— ANI (@ANI) April 20, 2021
ಭಾರತದಲ್ಲಿ ಇತ್ತೀಚೆಗೆ ದಿನನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ 2 ಲಕ್ಷವನ್ನು ದಾಟುತ್ತಿದೆ. ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್, ನೈಟ್‌ಕರ್ಫ್ಯೂಗಳನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಕೈಮೀರಿದ ಕೊರೊನಾ : 2,59,170 ಹೊಸ ಕೇಸ್ – 1,761 ಜನ ಸಾವು!

