ದೇಶದಲ್ಲಿ 3.23 ಲಕ್ಷ ಹೊಸ ಕೊರೊನಾ ಕೇಸ್ : ಮಹಾಮಾರಿಗೆ 2,771 ಜನ ಬಲಿ!
ದೇಶದಲ್ಲಿ ದಿನ ಕಳೆದಂತೆ ಕೊರೊನಾ ಕಪ್ಪು ಕಾರ್ಮೋಡ ದಟ್ಟವಾಗಿ ಆವರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 3.23 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,771 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ನಿನ್ನೆ ಕೊರೊನಾವೈರಸ್ ಪ್ರಕರಣಗಳು ಮತ್ತು ಸೋಂಕಿನಿಂದ ಉಂಟಾದ ಸಾವುಗಳಲ್ಲಿ ಸ್ವಲ್ಪ ಕುಸಿತ ಕಂಡಿದ್ದು, ಭಾರತ ಕಳೆದ 24 ಗಂಎಯಲ್ಲಿ 3.23 ಲಕ್ಷ ಪ್ರಕರಣಗಳು ಮತ್ತು 2,771 ಸಾವುನೋವುಗಳನ್ನು ದಾಖಲಿಸಿದೆ.ಮಹಾರಾಷ್ಟ್ರದಲ್ಲಿ 524 ಗರಿಷ್ಠ ಸಾವುನೋವುಗಳು ವರದಿಯಾಗಿದ್ದು, ದೆಹಲಿಯಲ್ಲಿ 380 ದೈನಂದಿನ ಸಾವುಗಳು ಸಂಭವಿಸಿವೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 1,97,894ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 2,51,827 ಕೋವಿಡ್ -19 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಭಾರತದಲ್ಲಿ ಚೇತರಿಕೆ 1,45,56,209 ಕ್ಕೆ ತಲುಪಿದೆ. ಭಾರತದಲ್ಲಿ 28,82,204 ಕೋವಿಡ್ -19 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಒಟ್ಟು 28,09,79,877 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ; ಈ ಪೈಕಿ 16,58,700 ಮಾದರಿಗಳನ್ನು ಸೋಮವಾರ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

