ದೇಶದ ಏಕದಿನ ಕೊರೊನಾ ಪ್ರಕರಣಗಳಲ್ಲಿ ಮಹಾರಾಷ್ಟ್ರವನ್ನು ಮೀರಿಸಿದ ಕರ್ನಾಟಕ…!

ದೇಶದ ಏಕದಿನ ಕೊರೊನಾ ಪ್ರಕರಣಗಳಲ್ಲಿ ಮಹಾರಾಷ್ಟ್ರವನ್ನು ಕರ್ನಾಟಕ ಮೀರಿಸಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3.48 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಕರ್ನಾಟಕ ದೇಶದ ಅತೀ ಹೆಚ್ಚು ಏಕದಿನ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು 4,205 ಸಾವುಗಳು ಸಂಭವಿಸಿವೆ. ಇದರರೊಂದಿಗೆ ದೇಶದ ಒಟ್ಟು ಸಾವಿನ ಸಂಖ್ಯೆ 2,54,197 ತಲುಪಿದೆ. ಭಾರತದ ಒಟ್ಟು ಕೋವಿಡ್ ಸಂಖ್ಯೆ ಈಗ 2,33,40,938 ಕ್ಕೆರಿಕೆಯಾಗಿದ್ದರೆ, ಸಕ್ರಿಯ ಪ್ರಕರಣಗಳು 37,04,099 ಕ್ಕೆ ತಲುಪಿದೆ.

ದೇಶದಲ್ಲಿ ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳು- 40,956 ಪ್ರಕರಣಗಳು ಮಹಾರಾಷ್ಟ್ರ, 39,510 ಪ್ರಕರಣಗಳು ಕರ್ನಾಟಕ, 37,290 ಪ್ರಕರಣಗಳು ಕೇರಳ, 29,272 ಪ್ರಕರಣಗಳು ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ 20,445 ಪ್ರಕರಣಗಳು ದಾಖಲಾಗಿವೆ.

ಒಟ್ಟು 3.48 ಲಕ್ಷ ಪ್ರಕರಣಗಳಲ್ಲಿ, 48.06% ಈ ಐದು ರಾಜ್ಯಗಳಿಂದ ವರದಿಯಾಗಿದೆ, ಮಹಾರಾಷ್ಟ್ರ ಮಾತ್ರ 11.75% ಪ್ರಕರಣಗಳನ್ನು ದಾಖಲಿಸಿದೆ.

24 ಗಂಟೆಗಳಲ್ಲಿ 4,205 ಸಾವುಗಳು ಸಂಭವಿಸಿದ ಭಾರತ, ಇದುವರೆಗೆ ದೇಶದಲ್ಲಿ ಅತಿ ಹೆಚ್ಚು ಏಕದಿನ ಸಾವಿನ ಸಂಖ್ಯೆಯನ್ನು ವರದಿ ಮಾಡಿದೆ. ಮಹಾರಾಷ್ಟ್ರದಿಂದ (793) ಗರಿಷ್ಠ ಸಾವುನೋವು ಸಂಭವಿಸಿದೆ, ನಂತರದ ಸ್ಥಾನದಲ್ಲಿ ಕರ್ನಾಟಕ (480). ಭಾರತದ ಒಟ್ಟು ಸಾವಿನ ಸಂಖ್ಯೆ ಈಗ 2.5 ಲಕ್ಷ ದಾಟಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights