ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಕಠಿಣ ರೂಲ್ಸ್ : ಕುಂಟು ನೆಪ ಹೇಳುವವರಿಗೆ ಬಿಸಿ ಮುಟ್ಟಿಸಿದ ಖಾಕಿ!
ಇಂದಿನಿಂದ 14 ದಿನಗಳವರೆಗೆ ರಾಜ್ಯಾದಾದ್ಯಂತ ಕಠಿಣ ರೂಲ್ಸ್ ಜಾರಿಗೆ ಬರಲಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಆದರೆ ಅಗತ್ಯ ವಸ್ತುಗಳ ಖರೀದಿಗೆ ನೀಡಿದ ಸಮಯ ಮೀರಿದರೂ ಬೆಂಗಳೂರು ರಸ್ತೆಗಳು ತುಂಬಿ ಹೋಗಿವೆ.
ಹೌದು.. ಇಂದಿನಿಂದ ಹೊಸ ಲಾಕ್ಡೌನ್ ಜಾರಿಗೆ ಬಂದಿದೆ. ಆದರೆ ಜನ ಲಾಕ್ಡೌನ್ ಲೆಕ್ಕಿಸದೆ ಜನ ಬೀದಿಯಲ್ಲಿ ಸುಖಾಸುಮ್ಮನೆ ಸುತ್ತುತ್ತಿರುವುದು ಕಂಡುಬಂದಿದೆ. ರಾಜ್ಯ ಮೂಲೆ ಮೂಲೆಯಲ್ಲೂ ಸ್ಟ್ರಿಕ್ಟ್ ರೂಲ್ಸ್ ಜಾರಿಯಲ್ಲಿದೆ ಆದರೂ ವಾಹನಗಳು ಬೀದಿಗಳಿಯುವುದು ಮಾತ್ರ ಬಿಟ್ಟಿಲ್ಲ.
ಇದರಿಂದ ಖಾಕಿ ಹೈಅಲರ್ಟ್ ಆಗಿದ್ದು ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ರೂಲ್ಸ್ ಉಲ್ಲಂಘಿಸಿದರೆ ವಾಹನ ಸೀಜ್ ಮಾಡಲಾಗುತ್ತಿದೆ. ಜೊತೆಗೆ ಪೈನ್ ಕೂಡ ಹಾಕಲಾಗುತ್ತಿದೆ. ಬೆಕ್ಕು, ನಾಯಿ ಹಿಡುಕೊಂಡು ಬಿಡುತ್ತಿಲ್ಲ ಖಾಕಿ. ಅನಗತ್ಯ ರಸ್ತೆಗಿಳಿದವರಿಗೆ ಖಾಕಿ ಬಿಸಿ ಮುಟ್ಟಿಸುತ್ತಿದೆ.
ಕುಂಟು ನೆಪಗಳನ್ನು ಹೇಳುವವರಿಗೆ ಖಾಕಿ ಬಿಸಿ ಮುಟ್ಟಿಸುತ್ತಿದ್ದಾರೆ. ಸ್ಕಾನಿಂಗ್, ಆರೋಗ್ಯ ತಪಾಸಣೆ, ಔಷಧಿ ಖರೀದಿ ಹೀಗೆ ಕುಂಟು ನೆಪಗಳನ್ನು ಹೇಳಿ ಒಂದು ಕಾರಿನಲ್ಲಿ ನಾಲ್ಕೈದು ಜನ ಹೋಗುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತಿವೆ.
ಕೆಲ ಜಿಲ್ಲೆಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಜನ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. 10 ಗಂಟೆ ಬಳಿಕ ಮನೆ ಬಿಟ್ಟು ಹೊರಬರುತ್ತಿಲ್ಲ. ಬಂದರೂ ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾರ್ಕೇಟ್, ರಸ್ತೆಗಳು ಖಾಲಿ ಇರುತ್ತವೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಜನ ಕ್ಯಾರೆ ಎನ್ನುತ್ತಿಲ್ಲ. ಹೀಗಾಗರೆ ಕೊರೊನಾ ಹಾಟ್ ಸ್ಪಾಟ್ ಆದ ಬೆಂಗಳೂರಿನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವುದು ಪಕ್ಕಾ.

