ಪ್ರೇಮಿಯ ಸಹಾಯದಿಂದ ಪತಿಯನ್ನು ಕೊಂದ ಪತ್ನಿ : ಗಂಡನ ಸಮಾಧಿ ಮೇಲೆಯೇ ಕಳ್ಳಾಟ..!
ಮಹಿಳೆಯೊಬ್ಬಳು ಪ್ರೇಮಿಯ ಸಹಾಯದಿಂದ ಗಂಡನನ್ನು ಕೊಂದು ಮಲಗುವ ಜಾಗದಲ್ಲಿ ಸಮಾಧಿ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಪಶ್ಚಿಮ ಉಪನಗರ ದಹಿಸಾರ್ನಲ್ಲಿ 28 ವರ್ಷದ ಯುವತಿಯೊಬ್ಬಳು ತನ್ನ ಗಂಡನನ್ನು ಪ್ರೇಮಿಯ ಸಹಾಯದಿಂದ ಕೊಂದು ಶವವನ್ನು ತನ್ನ ಮನೆಯೊಳಗೆ ಹೂಳಿದ್ದಾಳೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.
ರಶೀದಾ ಶೇಖ್ ಎಂದು ಗುರುತಿಸಲ್ಪಟ್ಟ ಮಹಿಳೆ ಹಾಗೂ ಆಕೆಯ ಪ್ರೇಮಿ ಅಮಿತ್ ಮಿಶ್ರಾ ಅವನೊಂದಿಗೆ ಸೇರಿ ಪತಿ ರಯೀಸ್ ಶೇಖ್ನನ್ನು ಕೊಂದಿದ್ದಾಳೆ. ಸದ್ಯ ಮಹಿಳೆಯನ್ನು ಬಂಧಿಸಲಾಗಿದ್ದು, ಪ್ರೇಮಿ ಮಿಶ್ರಾ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12 ದಿನಗಳ ಹಿಂದೆ ಆರೋಪಿ ಮಿಶ್ರಾ ರಯೀಸ್ ನ ಅಪ್ರಾಪ್ತ ಮಗಳ ಮುಂದೆ ತೀಕ್ಷ್ಣವಾದ ಆಯುಧದಿಂದ ಗಂಟಲನ್ನು ಕತ್ತರಿಸಿದ್ದಾನೆ. ನಂತರ ಆರೋಪಿಗಳಿಬ್ಬರೂ ಶವವನ್ನು ಮಲಗುವ ಕೋಣೆಯಲ್ಲಿ ಹೂತುಹಾಕಿ ತಮ್ಮ ಕಳ್ಳಾಟವನ್ನು ಮುಂದುವರಿಸಿದ್ದಾರೆ.
ಬಲಿಪಶು ಬಟ್ಟೆ ಅಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದನು. ಮೇ 25 ರಂದು ನೆರೆಹೊರೆಯವರು ರಯೀಸ್ ಅವನನ್ನು ಒಂದು ವಾರದಿಂದ ನೋಡದ ಕಾರಣ ಕಾಣೆಯಾಗಿದ್ದಾನೆಂದು ದೂರು ದಾಖಲಿಸಿದ್ದಾರೆ. ಇದೇ ಸಮಯದಲ್ಲಿ ರಯೀಸ್ ಸಹೋದರ ಮನೆಗೆ ಬಂದಾಗ ಸೋದರ ಸೊಸೆ ಕಳ್ಳಾಟ ಬೆಳಕಿಗೆ ಬಂದಿದೆ.
ಮಹಿಳಾ ಕೋಣೆಯಲ್ಲಿ ಸಮಾಧಿ ಮಾಡಿದ್ದ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆ ಮತ್ತು ಪ್ರೇಮಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

