FACT CHECK | ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಪೋಸ್ಟ್ ನ ಅಸಲೀಯತ್ತೇನು ಗೊತ್ತೇ?
ಸರ್ವ ಶಿಕ್ಷಾ ಅಭಿಯಾನ (ಎಸ್ಎಸ್ಎ) ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ದೇಶಾದ್ಯಂತ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಇದರ ಉದ್ದೇಶ. ಈ ಅಭಿಯಾನದಡಿಯಲ್ಲಿ, ಶಾಲೆಗಳಿಲ್ಲದ ಸ್ಥಳಗಳಲ್ಲಿ ಹೊಸ ಶಾಲೆಗಳನ್ನು ತೆರೆಯಲಾಗುತ್ತದೆ. ಇದಲ್ಲದೆ, ಅಸ್ತಿತ್ವದಲ್ಲಿರುವ ಶಾಲೆಗಳ ಸೌಲಭ್ಯಗಳನ್ನು ಸಹ ಸುಧಾರಿಸಲಾಗಿದೆ. ಭಾರತದಲ್ಲಿ ಶಿಕ್ಷಣವನ್ನು ವಿಸ್ತರಿಸಲು ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡಲು ಕೇಂದ್ರ ಸರಕಾರ ಇದನ್ನು ಪ್ರಾರಂಭಿಸಿದೆ.

ಭಾರತ ಸರ್ಕಾರವು 2025 ರ ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ, ಎಲ್ಲರಿಗೂ ಪ್ರವೇಶಿಸಬಹುದಾದ ಮತ್ತು ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ವಲಯದಲ್ಲಿ ದೊಡ್ಡ ಪ್ರಮಾಣದ ನೇಮಕಾತಿಯನ್ನು ಘೋಷಿಸಲಾಗಿದೆ ಎಂದು ಹಲವರು ಪೋಸ್ಟ್ವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದವರ ಗಮನವನ್ನು ಸೆಳೆದಿದ್ದು, ಹಲವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿದಾಗ, 2025 ರಲ್ಲಿ ಯಾವುದೇ ನೇಮಕಾತಿ ಅಧಿಸೂಚನೆಯನ್ನು ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ಘೋಷಿಸಿಲ್ಲ.

ಇದಲ್ಲದೆ ನಮಗೆ ಶಿಕ್ಷಣ ಸಚಿವಾಲಯದ ಪತ್ರಿಕಾ ಪ್ರಕಟಣೆಯೂ ಸಿಕ್ಕಿದೆ. ಅಮಾಯಕ ಅರ್ಜಿದಾರರನ್ನು ವಂಚಿಸುವ ಸಲುವಾಗಿ ಈ ಇಲಾಖೆಯ ಯೋಜನೆಗಳಿಗೆ ಹೋಲುವ ಹೆಸರುಗಳಲ್ಲಿ (www.sarvashiksha.online, https://samagra.shikshaabhiyan.co.in, https://shikshaabhiyan.org.in ನಂತಹ) ಹಲವಾರು ವೆಬ್ಸೈಟ್ಗಳನ್ನು ರಚಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ಬರೆಯಲಾಗಿದೆ. ಈ ವೆಬ್ಸೈಟ್ಗಳು ಆಸಕ್ತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ ಎಂದು ಬರೆದಿದೆ ಮತ್ತು ಮೂಲ ವೆಬ್ಸೈಟ್ನಂತೆಯೇ ವೆಬ್ಸೈಟ್ನ ವಿನ್ಯಾಸ, ವಿಷಯ ಮತ್ತು ಪ್ರಸ್ತುತಿಯ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ದಾರಿ ತಪ್ಪಿಸುತ್ತಿವೆ ಮತ್ತು ಅರ್ಜಿ ಸಲ್ಲಿಸಲು ಪ್ರತಿಕ್ರಿಯಿಸುವವರಿಂದ ಹಣವನ್ನು ಬೇಡಿಕೆ ಇಡುತ್ತಿವೆ ಎಂದು ಹೇಳಿದೆ.
ಆದರೆ, ಭಾರತ ಸರ್ಕಾರದ ಈ ಅಭಿಯಾನವು ಈಗ ಆನ್ಲೈನ್ ವಂಚನೆಗೆ ಬಲಿಯಾಗಿದೆ. ವಾಸ್ತವವಾಗಿ, ವಿವಿಧ ಸರ್ಕಾರಿ ಉದ್ಯೋಗಗಳಿಗೆ ಜಾಹೀರಾತುಗಳನ್ನು sarvashikshaabhiyan.com ಎಂಬ ನಕಲಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತಿದೆ. ಈ ಉದ್ಯೋಗಗಳಲ್ಲಿ, ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಕಚೇರಿ ಸಿಬ್ಬಂದಿ, ಪ್ಯೂನ್ ಮುಂತಾದ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.
ಭಾರತ ಸರ್ಕಾರದ ಅಧಿಕೃತ ರಾಷ್ಟ್ರೀಯ ಪೋರ್ಟಲ್ india.gov.in ನಲ್ಲಿ ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿದ್ದೇವೆ. ಈ ಸಮಯದಲ್ಲಿ ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್ಸೈಟ್ samagra.education.gov.in ಎಂದು ನಮಗೆ ತಿಳಿದುಬಂದಿತು. ಇದನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತದೆ.
ಸರ್ವ ಶಿಕ್ಷಾ ಅಭಿಯಾನದ ಬಗ್ಗೆ ವಿವರವಾದ ಮಾಹಿತಿಯನ್ನು ಈ ವೆಬ್ಸೈಟ್ನಲ್ಲಿ ಪಡೆಯಬಹುದು. ಈ ಮಾಹಿತಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒದಗಿಸಿದೆ.
Beware!⚠️#Fake website ‘https://t.co/7SBNovCTVq‘ is posing as the official website of Sarva Shiksha Abhiyan & offering fake job opportunities#PIBFactCheck
▶️This website is not associated with GOI
▶️Official website: https://t.co/pCjN1ZGIMW
Read: https://t.co/Pi56ELk7hn pic.twitter.com/EKPzKScQqO
— PIB Fact Check (@PIBFactCheck) February 8, 2025
ಈ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಾವು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದಾಗ ಫೆಬ್ರವರಿ 08, 2025 ರಂದು PIB ಫ್ಯಾಕ್ಟ್ ಚೆಕ್ ತಂಡ X ನಲ್ಲಿ ಹಂಚಿಕೊಂಡ ಪೋಸ್ಟ್ವೊಂದು ಕಂಡು ಬಂದಿದೆ. ಇದರಲ್ಲಿ ವೈರಲ್ ಆಗಿರುವ ಉದ್ಯೋಗ ನೇಮಕಾತಿ ಅಧಿಸೂಚನೆ ಮತ್ತು ವೆಬ್ಸೈಟ್ ನಕಲಿ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಇದರಲ್ಲಿ ವೈರಲ್ ಪೋಸ್ಟ್ನಲ್ಲಿರುವ ವೆಬ್ಸೈಟ್ ಲಿಂಕ್ಗೂ ಭಾರತ ಸರ್ಕಾರಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದನ್ನು ಕೂಡ ಖಚಿತ ಪಡಿಸಲಾಗಿದೆ.
ಈ ವೆಬ್ಸೈಟ್ಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಮನಕ್ಕೆ ಬಂದಿದ್ದರೂ, ಉದ್ಯೋಗದ ಭರವಸೆ ನೀಡುವ ಮತ್ತು ನೇಮಕಾತಿ ಪ್ರಕ್ರಿಯೆಗೆ ಹಣ ಕೇಳುವ ಇಂತಹ ವೆಬ್ಸೈಟ್ಗಳು/ಸಾಮಾಜಿಕ ಮಾಧ್ಯಮ ಖಾತೆಗಳು ಇನ್ನೂ ಹೆಚ್ಚಿರಬಹುದು. ಸಾರ್ವಜನಿಕರು ಅಂತಹ ವೆಬ್ಸೈಟ್ಗಳಲ್ಲಿ ಉದ್ಯೋಗಾವಕಾಶಗಳಿಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಬೇಕು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ/ವೈಯಕ್ತಿಕ ವಿಚಾರಣೆ/ದೂರವಾಣಿ ಕರೆ/ಇ-ಮೇಲ್ ಮಾಡುವ ಮೂಲಕ ವೆಬ್ಸೈಟ್ಗಳ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬರೆದುಕೊಂಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸರ್ವ ಶಿಕ್ಷಾ ಅಭಿಯಾನದ ಭಾಗವಾಗಿ ಕೇಂದ್ರ ಶಿಕ್ಷಣ ಇಲಾಖೆ ಬೃಹತ್ ನೇಮಕಾತಿಯನ್ನು ಮಾಡುತ್ತಿದೆ ಎಂಬುದು ಸುಳ್ಳಾಗಿದೆ. sarvashikshaabhiyan.com ಡೊಮೇನ್ನಿಂದ ಚಾಲನೆಯಲ್ಲಿರುವ ವೆಬ್ಸೈಟ್ ನಕಲಿ. ಈ ವೆಬ್ಸೈಟ್ ಉದ್ಯೋಗ ಜಾಹೀರಾತುಗಳ ಮೂಲಕ ಜನರನ್ನು ವಂಚಿಸುತ್ತಿದೆ ಮತ್ತು ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾಕುಂಭ ಮೇಳಕ್ಕೆ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ ಭೋಂಸ್ಲೆ ಗ್ಲಾಮರ್ ಲುಕ್ ಫೋಟೊದ ಅಸಲೀಯತ್ತೆನು ಗೊತ್ತೆ?

