FACT CHECK | ಮಹಾಕುಂಭ ಮೇಳಕ್ಕೆ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ ಭೋಂಸ್ಲೆ ಗ್ಲಾಮರ್ ಲುಕ್ ಫೋಟೊದ ಅಸಲೀಯತ್ತೆನು ಗೊತ್ತೆ?
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಾಮಾಜಿಕ ಮಾಧ್ಯಮದ ಕಾರಣದಿಂದಾಗಿ ಕೆಲ ವ್ಯಕ್ತಿಗಳು ವೈರಲ್ ಆದರು. ಅವರ ಜನಪ್ರಿಯತೆ ರಾತ್ರೋರಾತ್ರಿ ಗಗನಕ್ಕೇರಿತು. ಅವರಲ್ಲಿ ಒಬ್ಬರು ಇಂದೋರ್ ನಿವಾಸಿ ಮೊನಾಲಿಸಾ ಭೋಂಸ್ಲೆ. ಮಹಾ ಕುಂಭಕ್ಕೆ ರುದ್ರಾಕ್ಷಿ ಮಾರಾಟ ಮಾಡಲು ಬಂದಿದ್ದ ಇವರು ಸುಂದರ ಕಣ್ಣುಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾದರು. ಇದೀಗ ಹೊಸ ಗೆಟಪ್ನಲ್ಲಿ ಮೊನಾಲಿಸಾ ಭೋಂಸ್ಲೆ ಎಂದು ವೀಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಇವರು ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಫೇಸ್ಬುಕ್ ಬಳಕೆದಾರರೊಬ್ಬರು ಫೆಬ್ರವರಿ 4, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ಮೊನಾಲಿಸಾ ನಾ?.. ಹೊಸ ಗೆಟಪ್ನಲ್ಲಿ ವೈರಲ್ ಹುಡುಗಿ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರವ ಮೊನಾಲಿಸಾ ಭೋಂಸ್ಲೆ ಪೋಟೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ ಜನವರಿ 17, 2025 ರಂದು ಪ್ರಸಿದ್ಧ ಮನರಂಜನಾ ಮಾಧ್ಯಮ ಫಿಲ್ಮಿ ಗ್ಯಾನ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವೈರಲ್ ವಿಡಿಯೋಗೆ ಹೋಲುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿರುವುದು ಲಭ್ಯವಾಗಿದೆ. ವಿಡಿಯೋ ಶೀರ್ಷಿಕೆಯಲ್ಲಿ ಇವರು ನಟಿ ವಾಮಿಕಾ ಗಬ್ಬಿ ಎಂದು ಬರೆಯಲಾಗಿದೆ.
View this post on Instagram
ಹಾಗೆಯೆ ಇದೇ ಸಂದರ್ಭ ರೇಡಿಯಾ ಸಿಟಿ ಬುಝ್ ಕೂಡ ಇದೇ ವೀಡಿಯೊವನ್ನು ಹಂಚಿಕೊಂಡು ‘‘ವಾಮಿಕಾ ಗಬ್ಬಿಯ ಮುದ್ದಾದ ನೋಟ ಹೃದಯಗಳನ್ನು ಕದಿಯುತ್ತಿವೆ’’ ಎಂದು ಬರೆದುಕೊಂಡಿದೆ. ‘ಕಪ್ಪು ಬಟ್ಟೆಯಲ್ಲಿ ಕಂಗೊಳಿಸಿದ ವಾಮಿಕಾ ಗಬ್ಬಿ’ ಎಂದು ನ್ಯೂಸ್ 18 ಕೂಡ ಶಾರ್ಟ್ಸ್ ಪ್ರಕಟಿಸಿರುವುದನ್ನು ನೀವು ಇಲ್ಲಿ ನೋಡಬಹುದು.

ವೈರಲ್ ವಿಡಿಯೋವನ್ನು ಮತ್ತು ವಾಮಿಕಾ ಗಬ್ಬಿ ಎಂದು ಹೇಳಿರುವ ವಿಡಿಯೋದೊಂದಿಗೆ ಹೋಲಿಕೆ ಮಾಡಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೈರಲ್ ವೀಡಿಯೊದಲ್ಲಿ ನಟಿ ವಾಮಿಕಾ ಗಬ್ಬಿಯ ಮುಖವನ್ನು ಮೊನಾಲಿಸಾ ಭೋಂಸ್ಲೆ ಅವರ ಮುಖದೊಂದಿಗೆ ಡಿಜಿಟಲ್ ಎಡಿಟ್ ಮಾಡಲಾಗಿದೆ. ನೈಜ್ಯ ವಿಡಿಯೋದಲ್ಲಿ ಮುಖ ಬೆಳ್ಳಗಿದೆ ಅದೇ ವೈರಲ್ ವೀಡಿಯೊದಲ್ಲಿ ಮುಖವನ್ನು ಕೊಂಚ ಕಪ್ಪು ಮಾಡಲಾಗಿದೆ. ಹಾಗೆಯೆ ಕಣ್ಣುಗಳನ್ನು ಕೂಡ ಎಡಿಟ್ ಮಾಡಿರುವುದು ಕಾಣಬಹುದು. ನಟಿ ವಾಮಿಕಾ ಗಬ್ಬಿ ಇದೇ ಉಡುಪನ್ನು ಧರಿಸಿ ಪೋಸ್ ಕೊಡುತ್ತಿರುವ ವೀಡಿಯೊವನ್ನು ಹಲವಾರು ಮಾಧ್ಯಮಗಳು ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಲುವುದಾದರೆ, ನಟಿ ವಾಮಿಕಾ ಗಬ್ಬಿ ಅವರ ಡಿಜಿಟಲ್ ಎಡಿಟ್ ಮಾಡಿದ ವಿಡಿಯೋವನ್ನು ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುವ ಮೂಲಕ ಪ್ರಸಿದ್ಧರಾದ ಮೊನಾಲಿಸಾ ಭೋಂಸ್ಲೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ : ನ್ಯೂಸ್ ಮೀಟರ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ರಾ ಶಾರುಖ್ ಮತ್ತು ಸಲ್ಮಾನ್ ಖಾನ್?

