ಗೋಲ್ಗಪ್ಪಗಳಿಂದ ಮಾಡಿದ ಕಿರೀಟ, ಹಾರ ಹಾಕಿಕೊಂಡ ದೇಸಿ ವಧು..!

ದೇಸಿ ವಧುಯೊಬ್ಬಳು ಗೋಲ್ಗಪ್ಪಗಳಿಂದ ಮಾಡಿದ ಕಿರೀಟ, ಹಾರ ಹಾಕಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವೀಡಿಯೋ 4 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

ವಧು ತನ್ನ ನೆಚ್ಚಿನ ಬೀದಿ ತಿಂಡಿ ಮೇಲಿನ ಪ್ರೀತಿಯನ್ನು ವಿಶಿಷ್ಟ ರೀತಿಯಲ್ಲಿ ತೋರಿಸಿದ್ದಾಳೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಧುವಿನ ವಿಡಿಯೋ ಮದುವೆ ಆಚರಣಾ ಸ್ಥಳದಿಂದ ವೈರಲ್ ಆಗಿದೆ. ವೀಡಿಯೋದಲ್ಲಿ ಅವಳು ಗೊಲ್ಗಪ್ಪದಿಂದ ಮಾಡಿದ ಕಿರೀಟ ಮತ್ತು ಹಾರವನ್ನು ಧರಿಸಿ ಸಂತೋಷ ಪಡುವುದನ್ನ ಕಾಣಬಹುದು.

ವೀಡಿಯೋವನ್ನು ಇಲ್ಲಿ ನೋಡಿ…

ವೀಡಿಯೊವನ್ನು ವಧುವಿನ ಮೇಕಪ್ ಕಲಾವಿದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಸುಂದರ ವಧು ಅಕ್ಷಯ ಮತ್ತು ನನ್ನ ವರ ಅಭಿಷೇಕ್ ಅವರಿಗೆ ಅಭಿನಂದನೆಗಳು. ಈ ಮೇಕಪ್ ಅನ್ನು ಬೆಳಿಗ್ಗೆ 3 ಗಂಟೆಗೆ ಮಾಡಲಾಯಿತು. ಈ ವೀಡಿಯೊವನ್ನು ಮಧ್ಯಹ್ನನ 3 ಗಂಟೆಗೆ ಚಿತ್ರೀಕರಿಸಲಾಗಿದೆ. ಭಾರತೀಯ ವಿವಾಹ ಆಟಗಳು ನಿಜವಾಗಿಯೂ ಭಾರತೀಯ ವಿವಾಹದ ಉತ್ಸಾಹದ ಭಾಗವಾಗಿವೆ ”ಎಂದು ಬರೆದಿದ್ದಾರೆ. ಈ ವೀಡಿಯೊ 4.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಮೇಕಪ್ ಕಲಾವಿದನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ವಧುವಿನ ಮತ್ತೊಂದು ಮೋಜಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತದ ವಿವಾಹವೊಂದರಲ್ಲಿ ಇದೊಂದು ಮೋಜಿನ ಆಚರಣೆಯಾಗಿದೆ.  ವಧುವಿನ ತಲೆಯ ಮೇಲೆ ಹಲವಾರು ಪಾಪಾಡ್‌ಗಳನ್ನು ಜೋಡಿಸಲಾಗಿದೆ.

ವೀಡಿಯೋವನ್ನು ಇಲ್ಲಿ ನೋಡಿ..

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights