“Dangerous Trend” : ಬೇರೆ ಬೇರೆ ಕೋವಿಡ್ ಲಸಿಕೆಗಳ ಮಿಶ್ರಣ ವಿರುದ್ಧ WHO ಎಚ್ಚರಿಕೆ!
ಬೇರೆ ಬೇರೆ ಕೋವಿಡ್ ಲಸಿಕೆಗಳನ್ನು ಬೆರೆಸುವುದರ ವಿರುದ್ಧ WHO ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಸೋಮವಾರ ಬೇರೆ ಬೇರೆ ಕೋವಿಡ್ -19 ಲಸಿಕೆಗಳನ್ನು ಬೆರೆಸುವುದರ ವಿರುದ್ಧ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಇದರ ಬಗ್ಗೆ ಹೆಚ್ಚು ಪುರಾವೆಗಳಿಲ್ಲವಾದರೂ ಇದೊಂದು ಅಪಾಯಕಾರಿ ಬೆಳವಣಿಗೆ ಎಂದಿದ್ದಾರೆ.
ಎರಡನೇ, ಮೂರನೇ ಮತ್ತು ನಾಲ್ಕನೇ ಪ್ರಮಾಣವನ್ನು ತೆಗೆದುಕೊಳ್ಳುವುದನ್ನ ಎಂಬುದನ್ನು ನಾಗರಿಕರೇ ಅಸ್ತವ್ಯಸ್ತಕ್ಕೆ ಕಾರಣವಾಗಬಹುದು ಎಂದು ಸೌಮ್ಯಾ ಸ್ವಾಮಿನಾಥನ್ ಆನ್ಲೈನ್ ಬ್ರೀಫಿಂಗ್ ಸಮಯದಲ್ಲಿ ಹೇಳಿದರು.
ಹೆಚ್ಚು ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಕೆಲವೆಡೆ ಎರಡು ಬೇರೆ ಬೇರೆ ಲಸಿಕೆಗಳನ್ನು ಮಿಶ್ರಣ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.