‘ಸಚಿವರಿಗೆ ಮರಾಠಿ ಭಾಷೆಯ ಮೇಲೆ ಪ್ರೇಮ’ : ಶಶಿಕಲಾ ಜೊಲ್ಲೆ ವಿರುದ್ದ ಕನ್ನಡಿಗರ ಆಕ್ರೋಶ!
ಮರಾಠಿ ಪ್ರೇಮವನ್ನು ಮುಂದುವರೆಸಿದ ರಾಜ್ಯ ಸಚಿವರ ವಿರುದ್ದ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.
ಕರ್ನಾಟಕದಲ್ಲಿ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅವರು ಮರಾಠಿ ಪ್ರೇಮ ತೋರಿದ್ದಾರೆಂದು ಆರೋಪಿಸಿ ಕನ್ನಡ ಅಭಿಮಾನಿಗಳು ಗರಂ ಆಗಿದ್ದಾರೆ.
ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಏತ ನೀರಾವರಿ ಉದ್ಫಾಟನೆ ಸಂದರ್ಭದಲ್ಲಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಈ ಸಮಾರಭದಲ್ಲಿ ಶಶಿಕಲಾ ಜೊಲ್ಲೆ ಭಾಗಿಯಾಗುವುದರ ಜೊತೆಗೆ ಮರಾಠಿ ಭಾಷೆಯ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸಿದ್ದಾರೆಂದು ಆರೋಪಿಸಲಾಗಿದೆ.
ಇಂದು ಕಾರ್ಯಕ್ರಮದಲ್ಲಿ ಸೌಂದಲಗಾ ಗ್ರಾಮದಲ್ಲಿ ಮಂಜೂರಾದ 1 ಕೋಟಿ 49 ಲಕ್ಷ ರೂ. ಮೊತ್ತದ ದೂಧಗಂಗಾ ನದಿಯಿಂದ ೇತ ನೀರಾವರಿ ಯೋಜನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ , ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರ ಿಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ಈ ಕಾರ್ಯಕ್ರಮ ಸಂಪೂರ್ಣ ಮರಾಠಿ ಮಯವಾಗಿತ್ತು. ಅಧಿಕಾರ ನುಭವಿಸಲು ಕರ್ನಾಟಕ ಬೇಕು. ಆದರೆ ಓಟ್ ಬ್ಯಾಂಕ್ ಗಾಗಿ ಕನ್ನಡವನ್ನು ನಿರ್ಲಕ್ಷ ಮಾಡುವುದಾ ಎಂದು ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.

