ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಅರ್ಜಿ ತಿರಸ್ಕರಿಸಿದ ಅಟಾರ್ನಿ ಜನರಲ್

ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ದ ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಬೇಕು ಎಂದು ಸಿಲ್ಲಿಸಿದ್ದ ಅರ್ಜಿಯನ್ನು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಗುರುವಾರ (ಸೆಪ್ಟೆಂಬರ್ 17) ತಿರಸ್ಕರಿಸಿದ್ದಾರೆ.

ಉನ್ನತ ಕಾನೂನು ಅಧಿಕಾರಿಯ ಪ್ರಕಾರ, ಇಂಡಿಯಾ ಟುಡೆ ಗ್ರೂಪ್‌ನ ಸಲಹಾ ಸಂಪಾದಕರಾಗಿರುವ ಸರ್ದೇಸಾಯಿ ಅವರು ನೀಡಿದ ಹೇಳಿಕೆಗಳು, ಸುಪ್ರೀಂ ಕೋರ್ಟ್‌ನ ಗೌರವವನ್ನು ಹಾಳುಮಾಡುವ ಅಥವಾ ಜನರ ಮನಸ್ಸಿನಲ್ಲಿ ಕೋರ್ಟ್‌ ಬಗೆಗಿನ ನಿಲುವನ್ನು ಕುಗ್ಗಿಸುವಷ್ಟು ಗಂಭೀರವಾಗಿರಲಿಲ್ಲ ಎಂದು ಹೇಳಿದ್ದಾರೆ.

“ಕಳೆದ 70 ವರ್ಷಗಳಲ್ಲಿ ದೃಢವಾಗಿ ನಿರ್ಮಿಸಲಾಗಿರುವ, ಪ್ರಾಜಾಪ್ರಭುತ್ವದ ಬೃಹತ್ ಸ್ತಂಭವಾಗಿರುವ ಸುಪ್ರೀಂ ಕೋರ್ಟ್‌ನ ಖ್ಯಾತಿ ಮತ್ತು ಅದರ ಚಿತ್ರಣವನ್ನು ಕ್ಷುಲ್ಲಕ ಟೀಕೆಗಳು ಕೆಡಿಸುವ ಸಾಧ್ಯತೆಯಿಲ್ಲ”ಎಂದು ಎಜಿ ಹೇಳಿದ್ದಾರೆ ಎಂದು ಲೈವ್‌ಲಾ ಉಲ್ಲೇಖಿಸಿದೆ.

ಇದನ್ನೂ ಓದಿ: ಟ್ವೀಟ್‌ ಮಾಡಿದ್ದು ನನ್ನ ಕರ್ತವ್ಯ; ಕೋರ್ಟ್‌ ಗೌರವಿಸಿ ದಂಡ ಕಟ್ಟುತ್ತೇನೆ: ಪ್ರಶಾಂತ್‌ ಭೂಷಣ್‌

ಟ್ವಿಟ್ಟರ್ನಲ್ಲಿ ಸುದ್ದಿ ಹಂಚಿಕೊಂಡ ಸರ್ದೇಸಾಯಿ, “ಸತ್ಯಮೇವ್ ಜಯತೆ! ಕಾನೂನು ಮತ್ತು ಸಂವಿಧಾನದ ರಕ್ಷಕರಿಗೆ ಧನ್ಯವಾದಗಳು!” ಎಂದು ಬರೆದುಕೊಂಡಿದ್ದಾರೆ.

ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಪ್ರಾರಂಭಿಸಲು ಕೋರಿರುವ ಅಸ್ತಾ ಖುರ್ನಾನಾ, ಸರ್ದೇಸಾಯಿ ಅವರು ಸರಣಿ ಟ್ವೀಟ್‌ಗಳಲ್ಲಿ ಉದ್ದೇಶಪೂರ್ವಕವಾಗಿ ಮಾನಹಾನಿಕರ ಮತ್ತು ನಿಂದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸ್ವಿಚ್ಛೆಯಿಂದ ಸುಪ್ರೀಂ ಕೋರ್ಟ್‌ಗೆ ಅಗೌರವ ತೋರಿದ್ದಾರೆ ಎಂದು ವಾದಿಸಿದ್ದಾರೆ.

ತನ್ನ ವಾದವನ್ನು ಮಂಡಿಸಲು, ಅರ್ಜಿದಾರರು ಆಗಸ್ಟ್‌ 31ರಂದು ಸರ್ದೇಸಾಯ್ ಅವರ ಒಂದು ಟ್ವೀಟ್‌ ಅನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಸರ್ದೇಸಾಯ್ ಅವರು, “ಸ್ಪಷ್ಟವಾಗಿ, ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್‌ ಅವರ ನಿಂದನೆ ಪ್ರಕರಣದಲ್ಲಿ ನ್ಯಾಯಾಲಯವು ತನ್ನದೇ ಆದ ಮುಜುಗರದಿಂದ ಹೊರಬರಲು ನೋಡುತ್ತಿದೆ” ಎಂದು ಟ್ವೀಟ್‌ ಮಾಡಿದ್ದರು.

ಅರ್ಜಿಯನ್ನು ಅಟಾರ್ನಿ ಜನರಲ್‌ ತಿರಸ್ಕರಿಸಿದ್ದಾರೆ. ಕಳೆದ ತಿಂಗಳು, ಅಯೋಧ್ಯೆ ತೀರ್ಪಿನ ಬಗ್ಗೆ ನಟಿ ಸ್ವರಾ ಭಾಸ್ಕರ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಟಾರ್ನಿ ಜನರಲ್ ತಿರಸ್ಕರಿಸಿದ್ದರು.


ಇದನ್ನೂ ಓದಿ: ಕೋರ್ಟ್‌ ಆದೇಶವನ್ನು ಒಪ್ಪಿಲ್ಲ; ದಂಡ ಪಾವತಿಸಿದ್ದೇನೆ: ಪ್ರಶಾಂತ್ ಭೂಷಣ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights