Bigg Boss: ಮನೆಯ 2ನೇ ಮಹಿಳಾ ಕ್ಯಾಪ್ಟನ್ ಆದ ಡಿಎಸ್…!

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್  ಆಗೋ ಕನಸು ಪ್ರತಿಯೊಬ್ಬ ಸದಸ್ಯರದ್ದು. ಈ ಕನಸು ಕಂಡಿದ್ದ ದಿವ್ಯ ಸುರೇಶ್ ಬಿಗ್ ಬಾಸ್ ಸೀಸನ್ 8 ರ ಎರಡನೇ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಹೌದು… ಬಿಗ್ ಬಾಸ್ ಆರಂಭದಿಂದಲೂ ಮನೆಯಲ್ಲಿ ಕೇವಲ ಪುರುಷ ಸದಸ್ಯರೇ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದರು. ಆದರೆ ಈ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮನೆಯ ಮೊದಲನೇ ಕ್ಯಾಪ್ಟನ್ ಆಗಿ ದಿವ್ಯ ಉರುಡುಗ ಆಯ್ಕೆಯಾಗಿದ್ದರು. ಕ್ಯಾಪ್ಟನ್ ಆಗಲೇಬೇಕು ಎನ್ನುವ ಕನಸು ಕಂಡಿದ್ದ ದಿವ್ಯ ಸುರೇಶ್ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ನಿನ್ನೆ ನೀಡಿದ್ದ ಹಣೆಯ ಮೇಲೆ ಕ್ವಾನ್ ಜೋಡಿಸುವ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ದಿವ್ಯ ಸುರೇಶ್ ಗೆದ್ದು ಕ್ಯಾಪ್ಟನ್ ಆದ್ರು. ಕೆಲ ದಿನಗಳಿಂದ ಕ್ಯಾಪ್ಟನ್ ಆಗುವ ಹೆಚ್ಚು ಉತ್ಸಾಹದಲ್ಲಿದ್ದ ದಿವ್ಯ ಕೊನೆಗೂ ಛಲ ಬಿಡದೆ ಗೆದ್ದಿರುವುದು ಮನೆಯ ಇನ್ನುಳಿದ ಸದಸ್ಯರಿಗೂ ಖುಷಿ ತಂದಿದೆ.

ಕಳೆದ ಬಾರಿ ದಿವ್ಯಾ ಉರುಡುಗ ಕ್ಯಾಪ್ಟನ್ ಆದಾಗ ಕೊಂಚ ಫೇವರ್ ಗೇಮ್ ಆದಾಗ ಕಿಚ್ಚಿ ಸುದೀಪ್ ಅವರು ವಾರದ ಕಥೆಯಲ್ಲಿ ಬುದ್ಧ ಮಾತು ಹೇಳಿದ್ದರು. ಅದಕ್ಕೆ ಡಿಯು ಗಳಗಳನೇ ಅತ್ತಿದ್ರು.

ಈ ಬಾರಿ ದಿವ್ಯಾ ಸುರೇಶ್ ಫೇವರ್ ಗೇಮ್ ಆಡದೆ ನಾಯಕತ್ವಕ್ಕೆ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights