ಟೋಕಿಯೊ ಒಲಿಂಪಿಕ್ಸ್: ಭಾರತಕ್ಕೆ 2 ನೇ ಪದಕ ಖಚಿತ : ಸೆಮಿಫೈನಲ್ ಪ್ರವೇಶಿಸಿದ ಲವ್ಲಿನಾ.!

ಟೋಕಿಯೊ ಒಲಿಂಪಿಕ್ಸ್ ಮಹಿಳಾ ವೆಲ್ಟರ್ (64-69 ಕೆಜಿ) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೀನ್-ಚಿನ್ ಚೆನ್ ಅವರನ್ನು ಸೋಲಿಸಿದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಭಾರತಕ್ಕೆ ಎರಡನೇ ಪದಕ ನೀಡುವ ಭರವಸೆ ನೀಡಿದ್ದಾರೆ.

ಟೋಕಿಯೊ ಒಲಂಪಿಕ್ಸ್ ಆರಂಭವಾಗಿ 7 ದಿನಗಳು ಕಳೆದಿದ್ದು ಇದುವರೆಗೂ ಭಾರತದ ಪರ ಪದಕವನ್ನು ಗೆದ್ದಿರುವ ಏಕೈಕ ಆಟಗಾರ್ತಿ ಮೀರಾಬಾಯಿ ಚಾನು ಮಾತ್ರ. ಸೈಕೋಮ್ ಮೀರಾಬಾಯಿ ಚಾನು ಹೊರತುಪಡಿಸಿ ಭಾರತದ ಬೇರೆ ಯಾವುದೇ ಕ್ರೀಡಾಪಟು ಕೂಡ ಪದಕವನ್ನು ಗೆದ್ದಿಲ್ಲ.

ಇದೀಗ ಲವ್ಲಿನಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು ಭಾರತಕ್ಕೆ ಕಂಚಿನ ಪದಕ ಪಡೆಯುವ ಭರವಸೆ ನೀಡಿದ್ದಾರೆ. ಜುಲೈ 24 ರಂದು, ವೇಟ್ ಲಿಫ್ಟರ್ ಮೀರಾಬಾಯಿ ಚಾನು ಟೋಕಿಯೋ ಗೇಮ್ಸ್ ನಲ್ಲಿ ಭಾರತದ ಮೊದಲ ಪದಕ ಗೆದ್ದಿದ್ದರು. ಒಟ್ಟು 202 ಕೆಜಿ (87 ಕೆಜಿ ಸ್ನ್ಯಾಚ್ ಮತ್ತು 115 ಕೆಜಿ ಕ್ಲೀನ್ ಮತ್ತು ಜರ್ಕ್) ಎತ್ತುವ ಮೂಲಕ ಅವರು ಭಾರತದ ಭಾರ ಎತ್ತುವಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಪಿವಿ ಸಿಂಧು, ಅತನು ದಾಸ್, ದೀಪಿಕಾ ಕುಮಾರಿ ಮತ್ತು ಭಾರತದ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಇವರುಗಳ ಜೊತೆ ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದ ಎರಡನೇ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಚೀನಾದ ಎನ್ ಸಿ ಚೆನ್ ವಿರುದ್ಧ 4-1 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಭಾರತದ ಲವ್ಲಿನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights