ಅತ್ಯಾಚಾರ ಪ್ರಕರಣ; ಅಪರಾಧಿ ಪಾದ್ರಯನ್ನೇ ವಿವಾಹವಾಗಲು ಸಂತ್ರಸ್ತೆ ಸುಪ್ರೀಂನಲ್ಲಿ ಮನವಿ!

ಚರ್ಚ್‌ನ ಪಾದ್ರಿಯಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪಾದ್ರಿಯನ್ನೇ ವಿವಾಹವಾಗಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ಕೇರಳದ ಕೊಟ್ಟಿಯೂರಿನ 16 ವರ್ಷದ ಬಾಲಕಿಯ ಮೇಲೆ 2016ರಲ್ಲಿ ಅಲ್ಲಿನ ಸ್ಥಳೀಯ ಚರ್ಚ್‌ನ ಪಾದ್ರಿ ರಾಬಿನ್ ವಡಕ್ಕುಚೇರಿ ಅತ್ಯಾಚಾರ ಎಸಗಿದ್ದರು. ಆಕೆ ಒಂದು ಮಗುವಿಗೆ ಜನ್ಮವನ್ನೂ ನೀಡಿದ್ದರು. ಪ್ರಕರಣದಲ್ಲಿ ಆಪರಾಧಿಗೆ 20 ವ‍ರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

ಇದೀಗ, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಆತನೊಂದಿಗೆ ವಿವಾಹವಾಗಲು ಅನುಮತಿ ನೀಡಬೇಕು ಎಂದು ಸಂತ್ರಸ್ತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಹೇಶ್ವರಿ ಅವರ ಪೀಠವು, ಈ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ರಾಜಕೀಯ ತೊರೆಯುತ್ತೇನೆ’: ಕೇಂದ್ರ ಸಚಿವ ಬಬುಲ್‌ ಸುಪ್ರಿಯೋ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights