ದೇಶದಲ್ಲಿ 40,134 ಹೊಸ ಕೊರೊನಾ ಕೇಸ್ ಪತ್ತೆ: 422 ಜನ ಬಲಿ..!

ದೇಶದಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು 422 ಜನ ಬಲಿಯಾಗಿದ್ದಾರೆಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.

ಹೊಸದಾಗಿ ದಾಖಲಾದ 40,134 ಪ್ರಕರಣಗಳು ಸೇರಿದಂತೆ ದೇಶದ ಒಟ್ಟು ಧನಾತ್ಮಕ ಪ್ರಕರಣಗಳ ಸಂಖ್ಯೆ 3,16,95,958 ಕ್ಕೆ ತಲುಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,24,773 ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,08,57,467 ಕ್ಕೆ ತಲುಪಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 4,13,718 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ, ಸಕ್ರಿಯ ಪ್ರಕರಣಗಳು 2,766 ಹೆಚ್ಚಾಗಿದೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳಲ್ಲಿ ಕೇರಳ 20,728 ಪ್ರಕರಣಗಳನ್ನು ದಾಖಲಿಸಿದ್ದರೆ, ಮಹಾರಾಷ್ಟ್ರ 6,479 ಪ್ರಕರಣಗಳು, ಆಂಧ್ರ ಪ್ರದೇಶ 2,287 ಪ್ರಕರಣಗಳು, ತಮಿಳುನಾಡು 1,990 ಪ್ರಕರಣಗಳು ಮತ್ತು ಕರ್ನಾಟಕ 1,875 ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಯಲ್ಲಿ 422 ಜನ ಸಾವನ್ನಪ್ಪಿದ್ದು ಈ ಪೈಕಿ ಮಹಾರಾಷ್ಟ್ರದಲ್ಲಿ (157) ಗರಿಷ್ಠ ಸಾವುಗಳು ವರದಿಯಾಗಿವೆ. ಒಡಿಶಾದಲ್ಲಿ 64 ಸಾವುಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ, 17,06,598 ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ, 47,22,23,639 ಡೋಸ್ ಲಸಿಕೆ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights