ಗೂಳಿ ದಾಳಿ : 11 ತಿಂಗಳುಗಳ ಬಳಿಕ ಸಂಪೂರ್ಣವಾಗಿ ಬದಲಾಯ್ತು ವ್ಯಕ್ತಿ ಮುಖ..!
ಗೂಳಿ ದಾಳಿ ಬಳಿಕ ವ್ಯಕ್ತಿಯೋರ್ವನ ಮುಖ ಗುರುತು ಸಿಗದಂತೆ ಸಂಪೂರ್ಣವಾಗಿ ಬದಲಾಗಿ ಹೋಗಿದೆ.
38 ವರ್ಷದ ರಾಜಸ್ಥಾನದ ಬಿಕಾನೇರಿ ಪ್ರದೇಶದ ಕರ್ನಿ ಬಿಷ್ಣೋಯ್ ಎಂಬ ವ್ಯಕ್ತಿಯ ಸೆಪ್ಟೆಂಬರ್ 2020 ರಲ್ಲಿ ಗೂಳಿ ದಾಳಿಗೆ ಒಳಗಾಗಿದ್ದರು. ನಗರದ ಎಫ್‌ಎಂಸಿಜಿ ಕಂಪನಿಯ ಆಪರೇಟಿಂಗ್ ಹೆಡ್ ಆಗಿ ಕೆಲಸ ಮಾಡುತ್ತಿದ್ದ ಕರ್ನಿ ಕಾರು ಚಲಾಯಿಸುತ್ತಿದ್ದಾಗ ಮುಖಕ್ಕೆ ಗೂಳಿಯೊಂದು ಗುದ್ದಿತ್ತು. ಗುದ್ದಿದ ರಬಸಕ್ಕೆ ಕರ್ನಿಯ ಮುಖದ ಮೂಳೆಗಳಿಗೆ ಹಾನಿಯಾಗಿ ಮುಖದ ಆಕಾರವೇ ಬದಲಾಗಿತ್ತು. ತಕ್ಷಣ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಘಟನೆ ಹೇಗಾಯಿತು..?
ಕರ್ನಿ ಬಿಷ್ಣೋಯ್ ಕಾರಿನಲ್ಲಿ ಆಫೀಸ್ ತೆರಳುತ್ತಿದ್ದಾಗ ಗೂಳಿಯೊಂದು ವೇಗವಾಗಿ ಬರುವುದನ್ನ ಕಂಡರು. ಜೊತೆಗೆ ತಮ್ಮ ವಾಹನ ನಿಧಾನವಾಗಿಸಿದರು. ಆದರೆ ರಸ್ತೆ ದಾಟುವ ಬದಲಿಗೆ ಗೂಳಿ ಅದೇ ವೇಗವಾಗಿ ಬಂದು ಕರ್ನಿ ಬಿಷ್ಣೋಯ್ ಅವರ ಬಲಭಾಗದ ಮುಖಕ್ಕೆ ಗುದ್ದಿದೆ. ಘಟನೆಯಲ್ಲಿ ಬಿಷ್ಣೋಯ್ ಬಲಗಣ್ಣನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಅವರ ಮುಖದ ಬಲಭಾಗದಲ್ಲಿ ಮೂಗು, ತುಟಿಗಳು ಮತ್ತು ನೆತ್ತಿಯ ಭಾಗದ ಮೂಳೆಗಳು ತುಂಡಾಗಿವೆ. ಸ್ಥಳೀಯರು ಬಿಷ್ಣೋಯ್ ಅವರನ್ನು ಕಾರಿನಿಂದ ಹೊರತೆಗೆದ ಬಳಿಕ ಗೂಳಿ ಅವರನ್ನು ಜೀವಂತವಾಗಿ ಬಿಟ್ಟಿದೆ. ಅವನೊಂದಿಗೆ ಪ್ರಯಾಣಿಸುತ್ತಿದ್ದ ಅವನ ಸ್ನೇಹಿತನಿಗೆ ಅಷ್ಟಾಗಿ ಗಾಯವಾಗಲಿಲ್ಲ. ತಕ್ಷಣ ಬಿಷ್ಣೋಯಿಯನ್ನು ಸಹೋದರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಕ್ಷಣ ವೈದ್ಯರು ಕೆಲವು ದೊಡ್ಡ ಹೊಲಿಗೆಗಳಿಂದ ರಕ್ತಸ್ರಾವವನ್ನು ತಡೆಯುವಲ್ಲಿ ವೈದ್ಯರು ಯಶಸ್ವಿಯಾದರು. 11 ತಿಂಗಳುಗಳ ಕಾಲ ಕಷ್ಟಪಟ್ಟು ಮೂಳೆ, ಮಾಂಸ, ಮೂಗು ತುಣುಕುಗಳನ್ನು ಜೋಡಿಸಲಾಯಿತು. ಒಂಬತ್ತು ಗಂಟೆಗಳ ಕಾಲ ನಡೆದ ಮತ್ತೊಂದು ಶಸ್ತ್ರಚಿಕಿತ್ಸೆಯ ನಂತರ ವೈದ್ಯರ ತಂಡ ಅವರ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಮುಖವನ್ನು ಸಂಪೂರ್ಣವಾಗಿ ಮಾನವ ರೂಪಕ್ಕೆ ತರಲು ಸಾಧ್ಯವಾಗಲಿಲ್ಲ.

ಜುಲೈ ವೇಳೆಗೆ ಬಿಷ್ಣೋಯ್ ತನ್ನ ಬಲ ಹುಬ್ಬು ಮತ್ತು ಹಣೆಯನ್ನು ಚಲಿಸಲು ಸಾಧ್ಯವಾಯಿತು. ಸರಣಿ ಶಸ್ತ್ರಚಿಕಿತ್ಸೆ ಬಳಿ ಬಿಷ್ಣೋಯ್ ಜೀವಂತವಾಗಿ ಉಳಿದಿದ್ದೇ ಹೆಚ್ಚು. ಅವರು ಮುಂದಿನ ಕೆಲವು ತಿಂಗಳುಗಳ ಕಾಲ ಕೃತಕ ಕಣ್ಣು ಮತ್ತು ಗಾಯದ ಪರಿಷ್ಕರಣೆಗಾಗಿ ಹೆಚ್ಚಿನ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ಒಟ್ಟಿನಲ್ಲಿ ಗೂಳಿ ದಾಳಿಗೆ ಒಳಗಾದ ಬಿಷ್ಣೋಯ್ ಅವರ ನಿಜವಾದ ಮುಖವೇ ಬದಲಾಗಿ ಹೋಗಿದೆ. ಪ್ರಾಣ ಉಳಿಸಲು ಯಶಸ್ವಿಯಾದ ವೈದ್ಯರಿಗೆ ಬಿಷ್ಣೋಯ್ ಧನ್ಯವಾದ ತಿಳಿಸಿದ್ದಾರೆ.

