ಬೊಮ್ಮಾಯಿ ಕ್ಯಾಬಿನೆಟ್ ಗೆ ಬಿವೈ ವಿಜಯೇಂದ್ರ ಎಂಟ್ರಿ..? : ಹೈಕಮಾಂಡ್ ಮಟ್ಟದಲ್ಲಿ ಲಾಬಿ..!

ಬಿಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದರೂ ಅವರ ಶಕ್ತಿ ಮಾತ್ರ ಕಡಿಮೆಯಾಗಿಲ್ಲ. ಸಚಿವ ಸ್ಥಾನಕ್ಕಾಗಿ ಶಾಸಕರು ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿದ್ದಾರೆ. ಈ ಮಧ್ಯೆ ಬಿವೈ ವಿಜಯೇಂದ್ರ ಸಂಪುಟಕ್ಕೆ ಸೇರಿಕೊಳ್ಳುವ ವಿಚಾರ ಚರ್ಚೆ ನಡೆಸುತ್ತಿದೆ.

ಹೌದು.. ಇಂದು ಸಂಪುಟ ರಚನೆಯ ದಿನಾಂಕ ಬಹುತೇಕ ಫಿಕ್ಸ್ ಆಗಲಿದೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಹೈಕಮಾಂಡ್ ಸೂಚಿಸಿದ ಸಚಿವರ ಹೆಸರುಗಳ ಪಟ್ಟಿಯೊಂದಿಗೆ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿದ್ದು, ಸಚಿವ ಸ್ಥಾನಕ್ಕಾಗಿ ಶಾಸಕರ ಕೊನೆ ಕ್ಷಣದ ಲಾಬಿ ಜೋರಾಗಿದೆ. ಇದರ ಮಧ್ಯೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರಿಗೂ ಸಚಿವ ಸ್ಥಾನ ಕೊಡಿಸುವ ಬಗ್ಗೆ ಚರ್ಚೆಗಳು ಜೋರಾಗಿವೆ.

ಆದರೆ ಈ ಬಗ್ಗೆ ವಿಜಯೇಂದ್ರ ಆಗಲಿ, ಯಡಿಯೂರಪ್ಪ ಆಗಲಿ ಅಥವಾ ಹೈಕಮಾಂಡ್ ಆಗಲಿ ಯಾರೂ ಕೂಡ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ಮಾತ್ರ ಬಿವೈ ವಿಜಯೇಂದ್ರ ಮಂತ್ರಿ ಸ್ಥಾನಕ್ಕೆ ಎಂಟ್ರಿಯಾಗುವ ಸಾಧ್ಯತೆ ಇದೆ. ಇದಕ್ಕೆ ವೀರಶೈವ ಲಿಂಗಾಯತ ಸ್ವಾಮಿಗಳ ಒತ್ತಡ ಇದ್ದು ಈ ವಿಚಾರ ಸಿಎಂ ಹೈಕಮಾಂಡ ಅಂಗಳಕ್ಕೆ ತಳ್ಳಿದ್ದಾರೆ ಎನ್ನಲಾಗುತ್ತಿದೆ. ಬಿಎಸ್ ಯಡಿಯೂರಪ್ಪ ಪದತ್ಯಾಗ ಮಾಡಿದ ಹಿನ್ನೆಲೆ ವಿಜಯೇಂದ್ರ ಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

ವೀರಶೈವ ಲಿಂಗಾಯತ ಸ್ವಾಮಿಗಳ ಒತ್ತಡಕ್ಕೆ ಮಣಿದು ಹೈಕಮಾಂಡ್ ಒಪ್ಪಿದರೆ ಬಿವೈ ವಿಜಯೇಂದ್ರ ಬೊಮ್ಮಾಯಿ ಕ್ಯಾಬಿನೆಟ್ ಸೇರಲಿದ್ದಾರೆ. ಒಂದು ವೇಳೆ ಬಿವೈ ವಿಜಯೇಂದ್ರ ಅವರು ಸಚಿವರಾದರೆ ಮತ್ತೆ ಯಡಿಯೂರಪ್ಪ ಅವರೇ ಮೇಲು ಗೈ ಸಾಧಿಸಲಿದ್ದಾರೆ. ಈಗಾಗಲೇ ಕುಟುಂಬದ ಹಸ್ತಕ್ಷೇಪದಿಂದಾಗಿ ಬಿಎಸ್ ಯಡಿಯೂರಪ್ಪ ವಿರೋಧಿ ಬಣ ಕೋಪಗೊಂಡಿತ್ತು. ಕುಟುಂಬ ಹಸ್ತಕ್ಷೇಪ ವಿರೋಧಿಸಿ ಬಿಜೆಪಿ ಆಂತರಿಕ ವಲಯದಲ್ಲಿ ವಾಗ್ವಾದಗಳಾಗಿವೆ. ಕೊನೆಗೆ ಹೈಕಮಾಂಡ್ ಹಸ್ತಕ್ಷೇಪದಿಂದಾಗಿ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನ ಕೂಡ ಕಳೆದುಕೊಳ್ಳುವಂತಾಯಿತು. ಹೀಗಿರುವಾಗ ಈಗ ಮತ್ತೆ ವಿಜಯೇಂದ್ರನಿ ಗೆ ಸ್ಥಾನ ನೀಡಿದರೆ ಸ್ವಪಕ್ಷದವರೇ ವಿರೋಧಿಸುವ ಸಾಧ್ಯತೆಗಳು ದಟ್ಟವಾಗಿದೆ.

ಹೀಗಾಗಿ ವಿಜಯೇಂದ್ರ ಈಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಆಂತರಿಕ ವಲಯದಲ್ಲಿ ಬಿವೈ ವಿಜಯೇಂದ್ರ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿರುವುದು ಮಾತ್ರ ಸತ್ಯ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights