ಒಬಿಸಿಗಳ ಜನಗಣತಿ ನಡೆಸಲು ಕ್ರಮ ಕೈಗೊಂಡರೆ ಸಂಸತ್ತಿನ ಒಳಗು/ಹೊರಗು ಕೇಂದ್ರವನ್ನು ಬಿಎಸ್‌ಪಿ ಬೆಂಬಲಿಸುತ್ತದೆ!: ಮಯಾವತಿ
ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಜನಗಣತಿ ನಡೆಸಲು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡರೆ ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ಪಕ್ಷವು ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪ. ಪಂಗಡಗಳ ಜಾತಿ ಆಧಾರಿತ ಜನಗಣತಿ ನಡೆಸಲು ಪ್ರಸ್ತಾಪಿಸಿದ್ದು, ಇದರ ಕುರಿತಾದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರ ಅಪಾಯಿಂಟ್‌ಮೆಂಟ್ ಕೋರಿದ್ದಾರೆ. ಈ ನಂತರ, ಮಾಯಾವತಿ ಅವರು ಒಬಿಸಿಗಳ ಜನಗಣತಿಗೂ ಒತ್ತಾಯಿಸಿದ್ದಾರೆ.
“ದೇಶದಲ್ಲಿ ಒಬಿಸಿಗಳ ಜನಗಣತಿನಡೆಸಬೇಕು ಎಂದು ಬಿಎಸ್‌ಪಿ ಒತ್ತಾಯಿಸುತ್ತದೆ. ಕೇಂದ್ರ ಸರ್ಕಾರ ಈ ದಿಶೆಯಲ್ಲಿ ಯಾವುದೇ ಸಕಾರಾತ್ಮಕ ಹೆಜ್ಜೆ ಇಟ್ಟರೆ, ಬಿಎಸ್‌ಪಿ ಸಂಸತ್ತಿನ ಒಳಗೆ ಮತ್ತು ಹೊರಗೆ ಬೆಂಬಲಿಸುತ್ತದೆ” ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನ್ಯಾಯಾಧೀಶರ ಬೆದರಿಕೆ ದೂರುಗಳಿಗೆ ಸಿಬಿಐ, ಏಜೆನ್ಸಿಗಳು “ಸ್ಪಂದಿಸುವುದಿಲ್ಲ”: ಮುಖ್ಯ ನ್ಯಾಯಮೂರ್ತಿ

