ಹಿರಿಯ ಪತ್ರಕರ್ತ ಸಾ. ಚಂದ್ರಶೇಖರ್ ರಾವ್ ಇನ್ನಿಲ್ಲ…!
ಹಿರಿಯ ಪತ್ರಕರ್ತ ಸಾ. ಚಂದ್ರಶೇಖರ್ ರಾವ್ ಇಂದು ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಸಾ.ಚಾ ಇಂದು ಇಹಲೋಕ ತ್ಯಜಿಸಿದ್ದಾರೆ.
ಆಸ್ಪತ್ರೆ ಸೇರಿದ ಬಳಿಕ ಹಾರ್ಟ್ ಅಟ್ಯಾಕ್ ಆಗಿರುವುದರಿಂದ ಸಾಚಾ(75 ) ನಿಧನರಾಗದ್ದಾರೆ. ಅವರ ಶ್ರೀಮತಿ, ಮಗ ಹಾಗೂ ಮಗಳನ್ನು ತ್ಯಜಿಸಿದ್ದಾರೆ.
ವೃತ್ತಿಯಲ್ಲಿ ಮಗಳು ಮಮತಾ ಡಾಕ್ಟರ್ ಆಗಿದ್ದರಿಂದ ಸಾಚಾ ಅವರಿಗೆ ಉತ್ತಮ ಚಿಕಿತ್ಸೆ ನಡೆದಿದ್ದು, ಬಿಪಿ ನಾರ್ಮಲ್ ಆಗಿತ್ತು. ಆದರೆ ಅವರಿಗೆ ಏಕಾಏಕಿ ಎದೆ ನೋವು ಕಣಿಸಿಕೊಂಡಿತ್ತು. ವೈದ್ಯರು 24 ಗಂಟೆಗಳ ಕಾಲ ಏನೂ ಹೇಳಲಾಗುವುದಿಲ್ಲ ಎಂದಿದ್ದರು. ಆದರೆ ವಿದಿಯಾಟ ಇಂದು ಹೃದಯಾಘಾತದಿಂದ ಸಾ. ಚಂದ್ರಶೇಖರ್ ರಾವ್ ಅವರು ಪ್ರಾಣ ಬಿಟ್ಟಿದ್ದಾರೆ.
ಮಂಜುನಾಥ ನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನದ ಬಳಿಕ ರಾತ್ರಿ 7.30 ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

