ತಮಿಳುನಾಡು ಬಜೆಟ್: ಪೆಟ್ರೋಲ್‌ ಸೆಸ್‌ ಕಡಿತ; ಪ್ರತಿ ಲೀಟರ್‌ಗೆ 3 ರೂ ಅಗ್ಗ!

ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರದ ಬೆಲೆ ಏರಿಕೆಗೆ ಸೆಡ್ಡುಹೊಡೆದು ತಮಿಳುನಾಡು ಸರ್ಕಾರ, ಪ್ರತಿ ಲೀಟರ್ ಪೆಟ್ರೋಲ್‌ ಮೇಲೆ ರಾಜ್ಯ ಸೆಸ್‌ನಲ್ಲಿ 3 ರೂಪಾಯಿ ಕಡಿತಗೊಳಿಸುವ ಧೈರ್ಯ ಮಾಡಿದೆ.

ತಮಿಳುನಾಡು ವಿಧಾನಸಭಾ ಅಧಿವೇಶನ ಆರಂಭವಾಗಿದ್ದು, ಸದನದಲ್ಲಿ ಪೆಟ್ರೋಲ್‌ ಸೆಸ್‌ ಕಡಿಮೆ ಮಾಡುವ ಬಗ್ಗೆ ಮಾತನಾಡಿದ ವಿತ್ತ ಸಚಿವ ಪಳನಿವೇಲ್ ತ್ಯಾಗರಾಜನ್, ಸಿಎಂ ಎಂಕೆ ಸ್ಟಾಲಿನ್ ಅವರ ಸೂಚನೆಗಳ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಜನರು ತತ್ತರಿಸಿದ್ದಾರೆ. ಹೀಗಾಗಿ ಅಧಿವೇಶನದ ಬಜೆಟ್‌ನಲ್ಲಿ ಪೆಟ್ರೋಲ್‌ ದರ ಇಳಿಕೆಗೆ ನಿರ್ಧರಿಸಲಾಯಿತು. ಆದರೆ, ಡೀಸೆಲ್‌ಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಹಣಕಾಸು ಸಚಿವರು ಬಿಡುಗಡೆ ಮಾಡಿದ ಶ್ವೇತಪತ್ರವು ಸಾರ್ವಜನಿಕ ಸಾಲವು ಪ್ರತಿ ಕುಟುಂಬಕ್ಕೆ 2,63,976 ರೂ ಆಗಿದೆ. ಒಟ್ಟಾರೆ ಸಾಲ 5,70,189 ಕೋಟಿ ರೂ ಇದೆ. ಸಾಲದ ಮೊತ್ತವು ಒಂದು ದಶಕದ ಹಿಂದೆ ಇದ್ದಕ್ಕಿಂತ ಐದು ಪಟ್ಟು ಹೆಚ್ಚು ಇತ್ತು ಎಂದು ಒತ್ತಿ ಹೇಳಿದೆ.

“ಕೋವಿಡ್ ಅಲೆಗಳಿಂದ ರಾಜ್ಯವು ಇನ್ನೂ ಚೇತರಿಸಿಕೊಳ್ಳದ ಕಾರಣ, ಆರ್ಥಿಕ ಸುಧಾರಣೆಗಳ ಸಮಯ ಇನ್ನೂ ಪಕ್ವವಾಗಬೇಕಿದೆ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ನಾವು ಸುಧಾರಣಾ ಕ್ರಮಗಳನ್ನು ರೂಪಿಸುತ್ತೇವೆ” ಎಂದು ಅವರು ಹೇಳಿದರು.

ಬಜೆಟ್ ಭಾಷಣದಲ್ಲಿ ಆಶ್ಚರ್ಯಕರವಾಗಿ ಮದ್ಯದ ಮೇಲೆ ಸೇರಿದಂತೆ ಯಾವುದೇ ತೆರಿಗೆ ಹೆಚ್ಚಳವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಲವ್ಲಿನಾಗೆ ಒಂದು ಕೋಟಿ ಬಹುಮಾನ; ಡಿಎಸ್‌ಪಿ ಹುದ್ದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights