ದೇಶದಲ್ಲಿ ಕೊರೊನಾ ಏರಿಳಿಕೆ : 38,667 ಹೊಸ ಕೇಸ್ ಪತ್ತೆ – 478 ಜನ ಬಲಿ..!
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿಕೆಯಾಗುತ್ತಿದ್ದು ಹೊಸದಾಗಿ 38,667 ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 478 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,21,56,493ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,30,732ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಒಟ್ಟು 3,13,38,088 ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳು 3,87,673 ರಷ್ಟಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಹೊಸದಾಗಿ ದಾಖಲಾದ 38,667 ಪ್ರಕರಣಗಳ ಪೈಕಿ ಕೇರಳದಲ್ಲಿ 20,452 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 6,686 ಪ್ರಕರಣಗಳು, ತಮಿಳುನಾಡು 1,933 ಪ್ರಕರಣಗಳು, ಆಂಧ್ರ ಪ್ರದೇಶ 1,746 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 1,669 ಪ್ರಕರಣಗಳು ದಾಖಲಾಗಿವೆ.
ಶನಿವಾರ ದಾಖಲಾದ 478 ಕೋವಿಡ್ ಸಂಬಂಧಿತ ಸಾವುಗಳಲ್ಲಿ ಮಹಾರಾಷ್ಟ್ರ (158) ಗರಿಷ್ಠ ಸಾವುಗಳನ್ನು ವರದಿ ಮಾಡಿದೆ. ಕೇರಳದಲ್ಲಿ 114 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತ ಹಿಂದಿನ ದಿನ 22,29,798 ಪರೀಕ್ಷೆಗಳನ್ನು ನಡೆಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 63,80,937 ಲಸಿಕೆ ಡೋಸ್ಗಳನ್ನು ನೀಡಲಾಗಿದ್ದು, ಈವರೆಗೆ ಒಟ್ಟು 53,61,89,903 ಡೋಸ್ ನೀಡಲಾಗಿದೆ.

