ದೆಹಲಿಯಲ್ಲಿ ವರುಣಾರ್ಭಟ : ನದಿಗಳಂತಾದ ರಸ್ತೆಗಳು – ಹಲವೆಡೆ ಟ್ರಾಫಿಕ್ ಜಾಮ್..!
ಭಾರೀ ಮಳೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ದೆಹಲಿ-ಎನ್ಸಿಆರ್ನಲ್ಲಿ ಭಾರೀ ಮಳೆ ಸುರಿದಿದ್ದು ರಸ್ತೆಗಳಿಗೆ ನೀರು ನುಗ್ಗಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಶನಿವಾರ ನಸುಕಿನಲ್ಲಿ ಆರಂಭವಾದ ಮಳೆಗೆ ನಿರಂತರವಾಗಿ ಸುರಿಯುತ್ತಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟುಮಾಡಿದ್ದು ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ರಸ್ತೆಗಳು ನದಿಯಾಗಿ ಮಾರ್ಪಟ್ಟಿದ್ದರಿಂದ ಪ್ರಗತಿ ಮೈದಾನದಲ್ಲಿ ಹಲವಾರು ವಾಹನಗಳು ಮುಳುಗಡೆಯಾಗಿರುವುದು ಕಂಡುಬಂದಿದೆ. ಭಾರೀ ಮಳೆಗೆ ದೆಹಲಿ-ಎನ್ಸಿಆರ್ನಲ್ಲಿ ತಾಪಮಾನ 27 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.
#WATCH | Parts of Delhi witness rain showers; visuals from Vijay Chowk pic.twitter.com/WzA8Wchp0U
— ANI (@ANI) August 20, 2021
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂದಿನ ಎರಡು ಗಂಟೆಗಳಲ್ಲಿ ದೆಹಲಿಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರೀ ತೀವ್ರತೆಯ ಮಳೆಯಾಗುವ ಸಾಧ್ಯತೆಯಿದೆ.
#WATCH | Heavy rain lashes parts of Haryana; visuals from Sector 35, Faridabad pic.twitter.com/R677Ii6Qs9
— ANI (@ANI) August 21, 2021
ಆಜಾದ್ ಮಾರ್ಕೆಟ್ ಅಂಡರ್ಪಾಸ್ ಅನ್ನು 1.5 ಅಡಿ ನೀರಿನಿಂದ ಮುಚ್ಚಿರುವುದರಿಂದ ಅಲ್ಲಿ ಸಂಚರಿಸದಂತೆ ಜನರಿಗೆ ಸೂಚಿಸಿದೆ. ನೀರಿನ ಹರಿವಿನಿಂದಾಗಿ ಮಿಂಟೋ ಸೇತುವೆಯ ಎರಡೂ ಬದಿಯ ಸಂಚಾರವನ್ನು ಮುಚ್ಚಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.
#WATCH Vehicles wade through the waterlogged road after heavy rains at Pragati Maidan in Delhi pic.twitter.com/uIwmUCmjf4
— ANI (@ANI) August 21, 2021
ಐಟಿಒ, ಮೂಲ್ಚಂದ್ ಅಂಡರ್ಪಾಸ್, ಲಜಪತ್ ನಗರ ಮತ್ತು ಜಂಗಪುರದಲ್ಲಿ ನೀರು ನಿಂತು ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಮೆಹ್ರೌಲಿ-ಬಾದರ್ಪುರ ರಸ್ತೆ ಮತ್ತು ಐಟಿಒ-ಪ್ರಗತಿ ಮೈದಾನ ರಸ್ತೆಯಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
#WATCH Heavy rainfall in Delhi since morning causes traffic snarls due to waterlogging at ITO-Pragati Maidan road pic.twitter.com/YSgHggJWQ5
— ANI (@ANI) August 21, 2021
ದೆಹಲಿಯಲ್ಲಿ ಆಗಸ್ಟ್ 21 ರ ಬೆಳಗಿನ ಜಾವ 2.30 ರಿಂದ 5.30 ರ ನಡುವೆ 73.2 ಮಿಮೀ ಮಳೆಯಾಗಿದೆ ಎಂದು ಐಎಂಡಿ ವರದಿ ಮಾಡಿದೆ.
#WATCH Commuters face a tough time due to waterlogging as heavy rain continues in Noida; Visuals from near Rashtriya Dalit Prerna Sthal pic.twitter.com/Nk6OE7GlHj
— ANI UP (@ANINewsUP) August 21, 2021

