ಕೇವಲ 1 ರೂಗೆ ಊಟ; ಬಡ ಜನರ ಹೊಟ್ಟೆ ತುಂಬಿಸುತ್ತಿದೆ ಯುವಕರ ತಂಡ!

ಕೊರೊನಾ-ಲಾಕ್‌ಡೌನ್‌ನಿಂದಾಗಿ ಬಡವರು, ನಿರ್ಗತಿಕರು, ಕಾರ್ಮಿಕರು, ಹಮಾಲಿಗಳ ಉದ್ಯೋಗವಿಲ್ಲದೆ, ಪರಿಪಾಡು ಪಡುತ್ತಿದ್ದಾರೆ. ಇಂತವರ ಹಸಿವು ನೀಗಿಸಲು ಬಳ್ಳಾರಿಯ ಯುವಕರ ತಂಡ ಶ್ರಮಿಸುತ್ತಿದೆ. ಕೇವಲ 1 ರೂಪಾಯಿಗೆ ಊಟ ನೀಡಲು ಜೈನ್ ಯುವಕರ ತಂಡ ಮುಂದಾಗಿದ್ದು, ಜೈನ್ ರೋಟಿ ಘರ್ ಎಂಬ ವ್ಯಾನ್‌ ಕ್ಯಾಂಟೀನ್‌ಅನ್ನು ತೆರೆದಿದೆ.

ಸಾಮಾನ್ಯವಾಗಿ ಯಾವುದಾದರೂ ಒಂದು ಸ್ಥಳದಲ್ಲೇ ಕ್ಯಾಂಟೀನ್‌ ತೆರೆದಿರೆ, ಅದು ನಿಗದಿತ ಒಂದೇ ಜಾಗದಲ್ಲಿ ಆಹಾರ ನೀಡುವಂತಾಗುತ್ತದೆ. ಇದರಿಂದ ದೂರವಿರುವ ಬಡಜನರಿಗೆ ಆಹಾರ ಸಿಗುವುದಿಲ್ಲ. ಅಲ್ಲದೆ, ದಿನನಿತ್ಯ ನಿರ್ದಿಷ್ಟ ಪ್ರದೇಶದ ನಿವಾಸಿಗಳಿಗೆ ಮಾತ್ರ ಸೀಮಿತವಾಗುತ್ತದೆ. ಹೀಗಾಗಿ ವಿಭಿನ್ನವಾಗಿ ಆಲೋಚಿಸಿದ ಈ ತಂಡ, ವ್ಯಾನ್‌ಗಳ ಮೂಲಕ ಆಹಾರ ವಿತರಣಾ ಕೆಲಸಕ್ಕೆ ಮುಂದಾಗಿದೆ.

ವರ್ಷದ 365 ದಿನಗಳೂ ವ್ಯಾನ್​ಗಳ ಮೂಲಕ ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ತೆರಳುವ ಯುವಕರು, ನಗರದಲ್ಲಿನ ಬಡವರು, ನಿರ್ಗತಿಕರು, ಕಾರ್ಮಿಕರು ಇರುವ ಸ್ಥಳಗಳು. ಸರ್ಕಾರಿ ಆಸ್ಪತ್ರೆಗಳ ಮುಂಭಾಗ, ಎಪಿಎಂಸಿ, ಬಸ್‌ ನಿಲ್ದಾಣ ಮತ್ತು ಪುಟ್ಪಾತ್ ಮೇಲೆ ಇರುವ ನಿರ್ಗತಿಕರ ಹತ್ತಿರ ಹೋಗಿ ಪ್ರತಿ ನಿತ್ಯ 200 ಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ಕೇವಲ ಒಂದು ರೂಪಾಯಿಗೆ ಮಾರಾಟ ಮಾಡುತ್ತಾರೆ.

ಪೊಟ್ಟಣದಲ್ಲಿ ಜೋಳದ ರೊಟ್ಟಿ, ವಿಧ ವಿಧವಾದ ಪಲ್ಯ, ಬಿಸಿ ಬಿಸಿ ಆನ್ನ, ಸಾಂಬಾರು, ಜತೆಗೆ ವಾರದಲ್ಲಿ ಒಂದು ಬಾರಿ ಸಿಹಿ ವಿತರಿಸಲಾಗುತ್ತದೆ.

ಈ ಕಾರ್ಯಕ್ಕೆ ಜೈನ್ ಯುವಕರ ತಂಡ ಹಣಕಾಸಿನ ನೆರವು ಭರಿಸಲಿದೆ. ಇವರ ತಂಡದಲ್ಲಿ 80 ಜನ ಯುವಕರಿದ್ದು, ಪ್ರತಿನಿತ್ಯ 10 ಯುವಕರ ತಂಡ ಕಾರ್ಯನಿರ್ವಹಿಸಲಿದೆ.

ದಿನವೂ ನಗರದ ಏರಿಯಾಗಳನ್ನು ಗುರುತಿಸಿ ಅಲ್ಲಿಗೆ ಹೋಗಿ ಆಹಾರದ ಪಾಕೆಟ್‌ಗಳನ್ನು ಮಾರಾಟ ಮಾಡುತ್ತಾರೆ. ಯುವಕರ ಈ ಕಾರ್ಯಕ್ಕೆ ಈಗ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕೆಲಸ ಮತ್ತಷ್ಟು ಜನಕ್ಕೆ ಪ್ರೇರಣೆಯಾಗಲಿದೆ.

ಇದನ್ನೂ ಓದಿ: ಯೋಗಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮಾಜಿ ಐಪಿಎಸ್ ಅಧಿಕಾರಿಯನ್ನು ಬಲವಂತವಾಗಿ ಹೊತ್ತೊಯ್ದ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights