ಡ್ರಗ್ ಪೆಡ್ಲರ್ ನ ಖತರ್ನಾಕ ಲಿಂಕ್ : ರತನ್ ಲಾಲ್ ನ ಅಸಲಿ ಆಟ ರಿವೀಲ್..!

ಸಿಂಥೆಟಿಕ್, ನಾನ್ ಸಿಂಥೆಟಿಕ್ ಡ್ರಗ್, ಎಕ್ಸ್ ಟೆಸಿ, ಎಂಡಿಎಂಎ, ಅಪೀಮು, ಗಾಂಜಾ ಸೇಲ್ ಮಾಡುತ್ತಿದ್ದ ರತನ್ ಲಾಲ್ ಬಂಧನದ ಬಳಿಕ ಈತನಿಗಿದ್ದ ಖತರ್ನಾಕ ಲಿಂಕ್ ಬಯಲಾಗಿದೆ.  ಜೊತೆಗೆ ಪೋಲೀಸರಿಗೆ ಇನ್ ಫಾರ್ಮರ್ ಆಗಿದ್ದ  ರತನ್ ಲಾಲ್ ನ ಅಸಲಿ ಆಟ ರಿವೀಲ್ ಆಗಿದೆ.

ರತನ್ ಲಾಲ್ ಗಾಂಜಾ ಕೇಸ್ ಸಂಬಂಧ ಕೆ.ಎಸ್.ಲೇಔಟ್ ಪೊಲೀಸರಿಗೆ ಇನ್ ಫಾರ್ಮರ್ ಆಗಿ ಮಾಹಿತಿದಾರನಾಗಿದ್ದನು. ಆದ್ರೆ ಈಗ ಇವನ ಬಳಿಯೇ ಡ್ರಗ್ಸ್ ಪತ್ತೆಯಾಗಿದೆ. ಈ 8 ವರ್ಷಗಳ ಹಿಂದೆ ಡ್ರಗ್ಸ್ ಸೇವನೆ ಮಾಡುತ್ತಿದ್ದ ರತನ್ ರೀಹ್ಯಾಬ್ ಸೆಂಟರ್ ಸೇರಿ ಡ್ರಗ್ ಸೇವನೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದ. ನಂತರ ಇದೇ ದಂಧೆ ಮಾಡುವ ಮೂಲಕ ಹಣ ಗಳಿಸಲು ಆರಂಭಿಸಿದ್ದ ಎನ್ನಲಾಗುತ್ತಿದೆ.

ಬೇರೆ ಬೇರೆ ರಾಜ್ಯಗಳಿಂದ ಡ್ರಗ್ಸ್ ಲಿಂಗ್ ಹೊಂದಿದ್ದನು. ಹಲವು ಪೊಲೀಸ್ ಠಾಣೆಯಲ್ಲಿ ಇನ್ ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ ರತನ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಬೇರೆ ಬೇರೆ ಕಡೆ ಹೋಗಿ ತನ್ನ ಬಳಿ ಇದ್ದ ಡ್ರಗ್ಸ್ ಇಟ್ಟು ನೀವು ಡ್ರಗ್ಸ್ ಮಾರಾಟ ಮಾಡುತ್ತಿದ್ರಿ ಎಂದು ಹೆದರಿಸಿ ಆರೋಪಿಸಿ ಪೊಲೀಸರನ್ನು ಕರೆಸಿ ನಂತರ ಅವರೊಂದಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಡೀಲ್ ಮಾಡಿಕೊಳ್ಳುತ್ತಿದ್ದನು. ಈ ರೀತಿ ಈತ ಹಲವಾರು ಕಡೆ ಮಾಡಿ ಹಣ ಪಡೆದಿರುವ ಆರೋಪವಿದೆ.

ಸದ್ಯ ಪೊಲೀಸರು ಇನ್ ಫಾರ್ಮಾರ್ ಅಸಲಿಯತ್ತು ಪತ್ತೆಗೆ ವಿಚಾರಣೆ ಆರಂಭಿಸಿದ್ದಾರೆ. ಪೊಲೀಸ್ ಇನ್ ಫಾರ್ಮಾರ್ ಆಗಿದ್ದ ರತನ್ ಲಾಲ್ ಒಂದೊಂದು ಅಸಲಿಯತ್ತು ಬೆಳಕಿಗೆ ಬರುತ್ತಿದೆ. ರತನ್ ಲಾಲ್ ಬಳಿ ಮಾದಕ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಇದೇ ರತನ್ ಲಾಲ್ ಮಾಹಿತಿ ಆಧರಿಸಿ ಭರತ್ ಕರೆದೊಯ್ಯಲು ಕೆ.ಎಸ್. ಲೇಔಟ್ ಪೊಲೀಸರು ಬಂದಿದ್ದರು. ಹೀಗಾಗಿ ಪೊಲೀಸರ ಮೇಲೂ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ಇನ್ ಫಾರ್ಮರ್ ನೆಪದಲ್ಲಿ ರತನ್ ಲಾಲ್ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ರತನ್ ಲಾಲ್ನಿಂದ ಸುಲಿಗೆಗೊಳಗಾದವರು ಮತ್ತಷ್ಟು ದೂರು ದಾಖಲಿಸುವ ಸಾಧ್ಯತೆ ಇದೆ. ಕಾಮಾಕ್ಷಿ ಪಾಳ್ಯ ಪೊಲೀಸರು ಕೆ.ಎಸ್.ಲೇಔಟ್ ಪೊಲೀಸರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights