ಜಮ್ಮು ಮತ್ತು ಕಾಶ್ಮೀರ: ಇಬ್ಬರು ಬಿಜೆಪಿ ನಾಯಕರ ನಡುವೆ ವಾಕ್ಸಮರ; ವಿಡಿಯೋಗಳು ವೈರಲ್

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕರಿಬ್ಬರು ಪಕ್ಷದ ಸಭೆಯಲ್ಲಿ ಪರಸ್ಪರ ಜಗಳವಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಶನಿವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶ್ರೀನಗರಕ್ಕೆ ಭೇಟಿ ನೀಡಿದ್ದರು. ಅವರು ಬರುವುದಕ್ಕೂ ಮುನ್ನ ನಡೆದ ಪಕ್ಷದ ಸಭೆಯಲ್ಲಿ ಇಬ್ಬರು ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಜವಾಹರ್ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಾಜರಿದ್ದ ವರದಿಗಾರರು ರೆಕಾರ್ಡ್ ಮಾಡಿದ ಮಾತಿನ ಚಕಮಕಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಕೇಂದ್ರ ಸಚಿವರ ಆಗಮನಕ್ಕೆ ಕೆಲವು ನಿಮಿಷಗಳ ಮೊದಲು, ಬಿಜೆಪಿ ನಾಯಕರಾದ ಅಲಿ ಮೊಹಮ್ಮದ್ ಮತ್ತು ಮೊಹಮ್ಮದ್ ಅಶ್ರಫ್ ನಡುವೆ ವಾಗ್ವಾದ ನಡೆದಿದೆ. ಅವರ ವಾಗ್ವಾದ ತಾರಕಕ್ಕೇರಿದಾಗ ಅವರನ್ನು ಉಳಿದ ಸದಸ್ಯರು ಸಮಾಧಾನ ಪಡಿಸಿದ್ದಾರೆ.

ಸ್ಥಳದಲ್ಲಿದ್ದ ಮಾಧ್ಯಮ ಸಿಬ್ಬಂದಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅವರ ವಾಗ್ಸಮರವನ್ನು ಚಿತ್ರೀಕರಿಸಿದ್ದಾರೆ. ಘಟನೆಯ ವೀಡಿಯೊಗಳನ್ನು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಬಡ ಮಕ್ಕಳಿಗೆ ಧನಸಹಾಯ ಮಾಡಲು ‘ಗ್ಯಾಜೆಟ್ ಬ್ಯಾಂಕ್’ ಆರಂಭಿಸಿದ ಜಾರ್ಖಂಡ್ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights