ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿ : ಚಾಲಕ ಪ್ರಾಣಾಪಯದಿಂದ ಪಾರು..!

ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಘಟನೆ ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಶಾನಿವಾರಸಂತೆ ಸಮೀಪದ ಸಂಭವಿಸಿದೆ.

ಆಂಧ್ರ ಪ್ರದೇಶದಿಂದ ಸೋಮವಾರ ಪೇಟೆ ಕಡೆಗೆ ಹರೊಟಿದ್ದ ಸಿಮೆಂಟ್ ಲಾರಿಯೊಂದು ಪಲ್ಟಿಯಾಗಿದೆ. ದುರಂತದ ವೇಳೆ ಲಾರಿ ಚಾಲಕ ಇಮ್ತಾಸ್ ಎಂಬಾತ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಸ್ತೆಯಲ್ಲಿ ಬೃಹತ್ ಗುಂಡಿಯಿದ್ದ ಪರಿಣಾಮ ಲಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಚಾಲಕ ಹೇಳಿಕೊಂಡಿದ್ದಾನೆ.

ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಇಬ್ಬರು ದುರಂತದಿಂದ ಪಾರಾಗಿದ್ದಾರೆ. ಸುಮಾರು 600 ಸಿಮೇಟ್ ಚೀಲಗಳನ್ನು ಲಾರಿ ಹೊತ್ತು ಸಾಗುತ್ತಿತ್ತು. ಶನಿವಾರಸಂತೆ ಗುಡುಗಳಲೆ ರಸ್ತೆ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ.

ರಸ್ತೆಯಲ್ಲಿ ಬೃಹತ್ ಗುಂಡಿಗಳಿದ್ದು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಮಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights