ಗುಜರಾತ್ ಎಲೆಕ್ಷನ್‌: ಬಿಜೆಪಿಗೆ ಭಾರೀ ಗೆಲುವು; ಮತ್ತಷ್ಟು ಕುಗ್ಗಿದ ಕಾಂಗ್ರೆಸ್‌!

ಗುಜರಾತ್‌ನಲ್ಲಿ ನಡೆದ ಒಂದು ಪಾಲಿಕೆ ಮತ್ತು 84 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 84 ಪುರಸಭೆಗಳ ಪೈಕಿ ಬಿಜೆಪಿ 62 ಪುರಸಭೆಗಳಲ್ಲಿ ಅಧಿಕಾರ ಹಿಡಿದರೆ, ಕಾಂಗ್ರೆಸ್‌ 22 ಪುರಸಭೆಗಳಲ್ಲಿ ಗೆಲುವು ಸಾಧಿಸಿದೆ.

ರಾಜಧಾನಿ ಅಹಮದಾಬಾದ್‌ನ ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ)ನ ಒಟ್ಟು 44 ಸ್ಥಾನಗಳ ಪೈಕಿ 41 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ ಎರಡು ಸ್ತಾನಗಳನ್ನು ಗೆದ್ದರೆ, ಎಎಪಿ ಒಂದು ಸ್ಥಾನವನ್ನು ಗೆದ್ದಿದೆ.

ದೇವ್‌ಭೂಮಿ ದ್ವಾರಕಾದ ಓಖಾ ಪುರಸಭೆ ಒಟ್ಟು 36 ಸ್ಥಾನಗಳ ಪೈಕಿ ಬಿಜೆಪಿ 34 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ 2ರಲ್ಲಿ ಗೆದ್ದಿದೆ. ಬನಸ್ಕಾಂತಾದ ಥಾರಾ ಪುರಸಭೆಯ 28 ಸ್ಥಾನಗಳಲ್ಲಿ ಬಿಜೆಪಿಯು 24 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 4 ಸ್ಥಾನಗಳನ್ನು ಗಳಿಸಿದೆ. ಭನ್ವಾಡ್ ಪುರಸಭೆಯಲ್ಲಿ ಒಟ್ಟು 24 ಸ್ಥಾನಗಳ ಪೈಕಿ ಕಾಂಗ್ರೆಸ್ 16 ಸ್ಥಾನ ಗಳಿಸಿ ಗೆಲುವು ಸಾಧಿಸಿದ್ದು, ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ.

ಉಳಿದಂತೆ, 44 ಪುರಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ 37 ಮತ್ತು ಕಾಂಗ್ರೆಸ್ ಕೇವಲ 3ರಲ್ಲಿ ಗೆದ್ದಿದೆ. ಇತರರು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ.

2022ರಲ್ಲಿ ಗುಜರಾತ್‌ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಗೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪಾತ್ರ ಬಹುಮುಖ್ಯ ಎಂದು ಹೇಳಲಾಗಿತ್ತು. ಸ್ಥಳೀಯ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರೀ ಮೊತ್ತದ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಮತ್ತಷ್ಟು ಹಿನ್ನಡೆಯನ್ನು ಅನುಭವಿಸಿದೆ.

ಇದನ್ನೂ ಓದಿ: YSR ಕಾಂಗ್ರೆಸ್‌ v/s ಯಾರು? ಕುತೂಹಲಕಾರಿ ತಿರುವು ಪಡೆಯುತ್ತಿದೆ ಬದ್ವೇಲ್ ಉಪಚುನಾವಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights