ಕೋಮು ದ್ವೇಷ ಪೂರಿತ ಭಾಷಣ ಮಾಡಿದ ಚೈತ್ರಾ ಕುಂದಾಪುರ ವಿರುದ್ದ ಸುಮೊಟೋ ಪ್ರಕರಣ ದಾಖಲಿಸಲು WIM ಆಗ್ರಹ!

ಮುಸ್ಲಿಂ ಸಮುದಾಯವನ್ನು ಮತ್ತು ಮುಸ್ಲಿಂ ಮಹಿಳೆಯರನ್ನು ಅತ್ಯಂತ ತುಛ್ಚವಾದ ಭಾಷೆಯಲ್ಲಿ ನಿಂದಿಸಿ ಕೋಮು ಪ್ರಚೋದನಕಾರಿಯಾಗಿ ಭಾಷಣ ಮಾಡಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕದಡಲು ಯತ್ನಿಸಿದ ಚೈತ್ರಾ ಕುಂದಾಪುರ ಅವರ ವಿರುದ್ದ ಪೊಲೀಸ್‌ ಇಲಾಖೆ ಸುಮೊಟೋ ಪ್ರಕರಣ ದಾಖಲಿಸಬೇಕು ಎಂದು ವಿಮೆನ್ ಇಂಡಿ ಮೂವ್ಮೆಂಟ್ (WIM) ಆಗ್ರಹಿಸಿದೆ.

ಸೋಮವಾ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಬಜರಂಗದಳ ಆಯೋಜಿಸಿದ್ದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ್ದ ಚೈತ್ರಾ ಕುಂದಾಪುರ, ಮುಸ್ಲಿಮರು ಲವ್ ಜಿಹಾದ್ ನಿಲ್ಲಿಸಬೇಕು.ಇಲ್ಲವಾದಲ್ಲಿ ಶೇ 70ರಷ್ಟು ಇರುವ ಹಿಂದೂಗಳು, ಮುಸ್ಲಿಂ ಹೆಣ್ಣು ಮಕ್ಕಳನ್ನು ಮತಾಂತರ ಮಾಡೋಕೆ ಎರಡು ದಿನ ಸಾಕು. ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ಹೆಣ್ಣು ಮಕ್ಕಳನ್ನು ಲವ್ ಮಾಡೋಕೆ ಹೊರಟರೆ, ಮುಸ್ಲಿಮರ ಮನೆಯಲ್ಲಿ ಬುರ್ಖಾ ಕಾಣೋದಿಲ್ಲ. ಪ್ರತೀ ಮನೆಯ ಮುಸ್ಲಿಂ ಹೆಣ್ಣುಮಕ್ಕಳ ಹಣೆಗೆ ಕುಂಕುಮ ಇಟ್ಟು ಕರೆದುಕೊಂಡು ಬರುತ್ತೇವೆ ಎಂದು ಪ್ರಚೋದಾನಾಕಾರಿ ಮತ್ತು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಚೈತ್ರಾ ಕುಂದಾಪುರ ಅವರ ಹೇಳಿಕೆಯನ್ನು ಖಂಡಿಸಿರುವ ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಅವರು, ಆಕೆಯ ವಿರುದ್ದ ಪೊಲೀಸರು ಸುಮೊಟೋ ಕೇಸ್ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಯುವಕನ ಬರ್ಬರ ಹತ್ಯೆ; 7 ಹಿಂದೂತ್ವವಾದಿ ಕಾರ್ಯಕರ್ತರ ಬಂಧನ

ಸಂಘಪರಿವಾರ ಒಡೆದು ಆಳುವ ನೀತಿಯ ಭಾಗವಾಗಿ ದೇಶದೆಲ್ಲೆಡೆ ಅರಾಜಕತೆ ಸೃಷ್ಟಿಸುತ್ತಿದೆ.ಅದರ ಮುಂದುವರಿದ ಭಾಗವಾಗಿ ಇಂತಹ ಯುವತಿಯರನ್ನು ಬಳಸಿಕೊಂಡು ಭಾಷಣ ಮಾಡಿಸಿ ಹಿಂದೂ ಮಹಿಳೆಯರನ್ನು ಭಾವನಾತ್ಮಕವಾಗಿ ಪ್ರಚೋದಿಸುತ್ತಿದೆ ಎಂದು ಅವರು ಆರೋಪಿಸಿದ್ಧಾರೆ.

ಭಾರತದಲ್ಲಿ ಕರಾಳ ಕಾನೂನುಗಳ ವಿರುದ್ಧ ನ್ಯಾಯಯುತವಾಗಿ ಧ್ವನಿ ಎತ್ತಿದ ಮಹಿಳೆಯರ ಮೇಲೆ ಯುಎಪಿಎ ಯಂತಹ ಕರಾಳ ಕಾನೂನು ಗಳನ್ನು ಬಳಸಿಕೊಂಡು ಬಂಧಿಸುವ ಪೋಲಿಸ್ ಮತ್ತು ಸರ್ಕಾರ ಇಂತಹ ಕ್ರಿಮಿಗಳ ಮೇಲೆ ಮೃದು ಧೋರಣೆ ತೋರಿ ಇವರ ಕೋಮು ಧ್ವೇಷದ ಭಾಷಣ ಮತ್ತು ಪ್ರವೃತ್ತಿಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ್ವೇಷ ಭಾಷಣ ಮಾಡಿ ಮುಸ್ಲಿಂ ಮಹಿಳೆಯರ ಸಾಮೂಹಿಕವಾಗಿ ಮಾನಹರಣ,ಬಲಾತ್ಕಾರ ವಾಗಿ ಮತಾಂತರ ಮಾಡಲು ಪ್ರೇರಣೆ ಮತ್ತು ಹಿಂದೂ ಮುಸ್ಲಿಮರ ನಡುವೆ ದ್ವೇಷ ಬಿತ್ತುವಂತಹ ಹೇಳಿಕೆಗಳನ್ನು ಕಾನೂನಿಗೆ ಗೌರವ ನೀಡದೆ ಬಹಿರಂಗವಾಗಿ ಹೇಳಿಕೆ ನೀಡಿದ ಚೈತ್ರಾ ಕುಂದಾಪುರಳ ವಿರುದ್ಧ ಹಾಗೂ ಈ ಸಭೆಯ ಆಯೋಜಕರ ವಿರುದ್ಧ ಪೋಲಿಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು,ಇಲ್ಲದಿದ್ದಲ್ಲಿ ವಿಮ್ ವತಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದೆಂದು ನಸ್ರಿಯಾ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಪಿಲಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲು; ನಿರಾಶರಾಗಲು ಏನೂ ಇಲ್ಲ ಎಂದ ಕೇಸರಿ ಪಕ್ಷ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights