ಬಾಲಕಿ ಮೇಲೆ ಅತ್ಯಾಚಾರ; ಕೃತ್ಯ ನಡೆದ 18 ಗಂಟೆಯಲ್ಲಿ ಜಾರ್ಜ್‌ಶೀಟ್ ಸಲ್ಲಿಕೆ; ಅಪರಾಧಿಗೆ 20 ವರ್ಷ ಜೈಲು

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ 25 ವರ್ಷದ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜೈಪುರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಕೃತ್ಯ ನಡೆದ ಒಂಬತ್ತೇ ದಿನಗಳಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಅಪರಾಧಿಗೆ ಶಿಕ್ಷೆ ನೀಡಿರುವ ಪ್ರಕರಣ ಇದಾಗಿದೆ. ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮಾತ್ರವಲ್ಲದೆ, 2 ಲಕ್ಷ ರೂ ದಂಡವನ್ನೂ ಕೋರ್ಟ್‌ ವಿಧಿಸಿದೆ.

ಸೆಪ್ಟೆಂಬರ್‌ 26ರಂದು ಅಪರಾಧಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಕೋರ್ಟ್‌ನಲ್ಲಿ ಪ್ರಕರಣ ದಾಖಲಾದ ಐದು ‘ಕರ್ತವ್ಯ ದಿನ’ಗಳ ಅವಧಿಯಲ್ಲಿ ತೀರ್ಪು ಪ್ರಕಟವಾಗಿದೆ. ಜೈಪುರ ಮೆಟ್ರೊಪಾಲಿಟನ್‌ ಪೋಕ್ಸೊ ನ್ಯಾಯಾಲಯವು ಅತ್ಯಂತ ಕ್ಷಿಪ್ರಗತಿಯಲ್ಲಿ ತೀರ್ಪು ನೀಡಿದೆ ಎಂದು ಜೈಪುರ ದಕ್ಷಿಣ ಉಪ ಪೊಲೀಸ್ ಆಯುಕ್ತ ಹರೇಂದ್ರ ಕುಮಾರ್ ಹೇಳಿದ್ದಾರೆ.

ಅಪರಾಧಿಯ ವಿರುದ್ದ ಐಪಿಸಿ ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ 18 ಗಂಟೆಗಳಲ್ಲಿ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಪೊಲೀಸರು ತನಿಖೆಯಲ್ಲಿ ತೊಡಗಿಸಿಕೊಂಡಿದ್ದರು. ಸಿಬ್ಬಂದಿಯ ಸಾಮೂಹಿಕ ಪ್ರಯತ್ನದಿಂದಾಗಿ ತನಿಖೆಯನ್ನು ಕಡಿಮೆ ಸಮಯದಲ್ಲಿ ಮುಗಿಸಿ, ಜಾರ್ಜ್‌ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ತಲೆ ಬೋಳಿಸಿಕೊಂಡು ಬಿಜೆಪಿ ತೊರೆದ ತ್ರಿಪುರಾ ಶಾಸಕ: ಟಿಎಂಸಿ ಸೇರುವ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights