Fact check: 1986 ರಲ್ಲಿ ರಾಜೀವ್ ಗಾಂಧಿಯನ್ನು ರಕ್ಷಿಸಲು SPG ಭಿಕ್ಷುಕನ ಮೇಲೆ ಗುಂಡು ಹಾರಿಸಿದ್ದು ನಿಜವೇ?

1986 ರಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿದ ಅಸೋಸಿಯೇಟೆಡ್ ಪ್ರೆಸ್‌ನ 1:58 ನಿಮಿಷಗಳ ಅವಧಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ರಾಜೀವ್ ಗಾಂಧಿಯವರ ಭೇಟಿಯ ಸಮಯದಲ್ಲಿ ಪೊದೆಯ ಹಿಂದೆ ಕೆಲವರ ಚಲನೆಯನ್ನು ಎಸ್‌ಪಿಜಿ (ವಿಶೇಷ ಸಂರಕ್ಷಣಾ ಗುಂಪು) ಗಮನಿಸಿತು, ತಕ್ಷಣ ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದಿತು ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೃತಪಟ್ಟ ಸಂತ್ರಸ್ತ ಭಿಕ್ಷುಕ ಎಂದು ನಂತರ ಕಂಡುಬಂದಿದೆ ಎಂದು ಪ್ರತಿಪಾದಿಸಲಾಗಿರುವ ವೀಡಿಯೋ ವೈರಲ್ ಆಗುತ್ತಿವೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದಿಸಲಾದ ವೈರಲ್ ವಿಡಿಯೋ  ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಹರಿದಾಡುತ್ತಿರುವುದು

ಪಂಜಾಬ್‌ನ ಫ್ಲೈಓವರ್‌ನಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯನ್ನು ಪ್ರತಿಭಟನಾಕಾರರು ತಡೆದ ಹಿನ್ನೆಲೆಯ ವಿರುದ್ಧ ಇದನ್ನು ಹಂಚಿಕೊಳ್ಳಲಾಗಿದೆ, ಇದನ್ನು ಗೃಹ ಸಚಿವಾಲಯವು ‘ಭದ್ರತಾ ವೈಫಲ್ಯ’ಎಂದರೆ ಇನ್ನು ಬಿಜೆಪಿಯನ್ನು ಬೆಂಬಲಿಸುವ ಸುದ್ದಿ ವಾಹಿನಿಗಳಿಂದ ಪ್ರಧಾನಿ ಹತ್ಯೆಗೆ ಸಂಚು ಎಂದು ಬಣ್ಣಿಸಿದೆ.

ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ  ಅದರ AP ಆರ್ಕೈವ್ YouTube ಚಾನಲ್‌ನಲ್ಲಿ ಅಸೋಸಿಯೇಟೆಡ್ ಪ್ರೆಸ್‌ನಿಂದ ಮೂಲ ವೀಡಿಯೊವನ್ನು ದಿಂದ ಮಾಹಿತಿಯನ್ನು ಕಲೆಹಾಕಿದ್ದೇವೆ. ವೀಡಿಯೊ ವಿವರಣೆಯ ಪ್ರಕಾರ, ಅಕ್ಟೋಬರ್ 1986 ರಲ್ಲಿ, ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ದಿವಂಗತ ಮಹಾತ್ಮ ಗಾಂಧಿಯವರ ವಾರ್ಷಿಕೋತ್ಸವದಲ್ಲಿ ಭಾಗವಹಿಸುತ್ತಿದ್ದಾಗ, ಪೊದೆಯೋಳಗೆ ಅಡಗಿಕೊಂಡಿದ್ದ ಸಿಖ್ ವ್ಯಕ್ತಿಯಿಂದ ಗುಂಡು ಹಾರಿಸಲಾಯಿತು. ಆ ವ್ಯಕ್ತಿಯನ್ನು ಸೆರೆಹಿಡಿಯಲಾಯಿತು ಮತ್ತು ರಾಜೀವ್ ಗಾಂಧಿ ಯಾವುದೇ ಹಾನಿಗೊಳಗಾಗಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗಾಗಿ ವಿಡಿಯೋದಲ್ಲಿ ಪ್ರತಿಪಾದಿಸಲಾದ ಹೇಳಿಕೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಅಕ್ಟೋಬರ್ 3, 1986 ರಿಂದ ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ  ಮನೆಯಲ್ಲಿ ತಯಾರಿಸಿದ ಆಯುಧವನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಗುಂಡು ಹಾರಿಸಿದ. ಆ ಗದ್ದಲದಲ್ಲಿ ಆರು ಜನರು ಸಣ್ಣ ಪುಟ್ಟದಾಗಿ ಗಾಯಗೊಂಡರು ಎಂದು ಖಚಿತಪಡಿಸುತ್ತದೆ. ಬಂದೂಕುಧಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತ ವ್ಯಕ್ತಿಯು ಆರಂಭದಲ್ಲಿ ಮನಮೋಹನ್ ದೇಸಾಯಿ ಎಂದು  ತನ್ನ ಹೆಸರನ್ನು ಹೇಳಿಕೊಂಡಿದ್ದನು ಆದರೆ ಹಲವಾರು ಬಾರಿ ಆತ ಹೆಸರನ್ನು ಬದಲಾಯಿಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿತ್ತು. ಅದೇ ರೀತಿ ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ. ಲಾಸ್ ಏಂಜಲೀಸ್ ಟೈಮ್ಸ್‌ನ ವರದಿಯು ಶಾಂತತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ, ಬಂದೂಕುಧಾರಿಯು ಸಿಖ್ ಉಗ್ರರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಪೊಲೀಸ್ ವಕ್ತಾರರು ಹೇಳಿದ್ದರು ಎಂದು ವರದಿ ಮಾಡಿದೆ.

ಹತ್ಯೆಯ ಯತ್ನದ ಸುಮಾರು ಒಂದು ತಿಂಗಳ ನಂತರ ಪ್ರಕಟವಾದ ಇಂಡಿಯಾ ಟುಡೇ ವರದಿಯು ಆ ದಿನದ ಸಂಪೂರ್ಣ ವಿವರಗಳನ್ನು ಒದಗಿಸುತ್ತದೆ, ಒಂಟಿ ಬಂದೂಕುಧಾರಿಯನ್ನು ಹೇಗೆ ಬಂಧಿಸಲಾಯಿತು. ಇಂಡಿಯಾ ಟುಡೇ ಪತ್ರಿಕೆಯು ಆ ಬಂದೂಕುಧಾರಿಯ ಗುರುತನ್ನು ಕರಮ್‌ಜಿತ್ ಸಿಂಗ್ ಎಂದು ಉಲ್ಲೇಖಿಸುತ್ತದೆ.

ರಾಜೀವ್ ಗಾಂಧಿಯ ಹತ್ಯಗೆ ಯತ್ನಿಸಿದರೆನ್ನಲಾಧ  ಕರಮ್‌ಜಿತ್ ಸಿಂಗ್  ಅವರ ಸಂದರ್ಶನ

ಸಂಕ್ಷಿಪ್ತವಾಗಿ ಹೇಳುವುದಾದರೆ, ಮಹಾತ್ಮಾ ಗಾಂಧಿಯವರ ಜನ್ಮದಿನದಂದು ಪಿಎಂ ರಾಜೀವ್ ಗಾಂಧಿ ಅವರು ರಾಜ್‌ಘಾಟ್‌ಗೆ ಭೇಟಿ ನೀಡುತ್ತಿದ್ದಾಗ, ಒಬ್ಬ ಬಂದೂಕುಧಾರಿ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದರು. ಆದರೆ ವಿಫಲರಾದರು ಮತ್ತು ಅವರನ್ನು ಬಂಧಿಸಲಾಯಿತು. ಭಿಕ್ಷುಕನ ಮೇಲೆ ಎಸ್‌ಪಿಜಿ ಗುಂಡು ಹಾರಿಸಿದೆ ಎಂಬ ಮಾತು ಸುಳ್ಳು. ಗುಂಡಿನ ದಾಳಿಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಆದರೆ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ವರದಿಗಳಾಗಿವೆ.


ಇದನ್ನು ಓದಿರಿ: Fact check: ರಾಹುಲ್ ಗಾಂಧಿ ನಾನು ಲಂಡನ್ ನಲ್ಲಿ ನೆಲೆಸುತ್ತೇನೆಂದು ಹೇಳಿದ್ದಾರೆ ಎಂಬುದು ನಿಜವಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights