Fact check: ವಿಧಾನಸಭಾ ಚುನಾವಣೆಯಲ್ಲಿ BJPಗೆ ಮತ ನೀಡಿ ಎಂದು BSP ಮುಖ್ಯಸ್ಥೆ ಮಾಯಾವತಿವರು ಹೇಳಿಲ್ಲ
ಇಡೀ ದೇಶ ಉತ್ತರ ಪ್ರದೇಶದ ಕಡೆ ನೋಡುತ್ತಿದೆ, ಬಹುತೇಕರ ಮಾತಿನ ಮದ್ಯ ಉತ್ತರ ಪ್ರದೇಶದ ಯಾವುದಾದರೂ ವಿಷಯ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಈ ಬಾರಿ ನಡೆಯತ್ತಿರುವ ವಿಧಾನಸಭಾ ಚುನಾವಣೆ. 2022ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆ ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ. ಉತ್ತರ ಪ್ರದೇಶದ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಸದ್ಯ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥರಾದ ಮಾಯಾವತಿಯವರು ಭಾರತೀಯ ಜನತಾ ಪಕ್ಷವನ್ನು (BJP) ಬೆಂಬಲಿಸುವಂತೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿರುವ ಪೋಸ್ಟ್ ಅನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹೇಳಿಕೆ ನಿಜವೇ ಎಂದು ಫ್ಯಾಕ್ಟ್ ಚೆಕ್ ಮೂಲಕ ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್:
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಅವರು 2020ರ ಅಕ್ಟೋಬರ್‌ನಲ್ಲಿ ನೀಡಿದಂತ ಹೇಳಿಕೆಯನ್ನು ಈಗ ಉತ್ತರಪ್ರದೇಶದ ಚುನಾವಣಾ ಸಂದರ್ಭದಲ್ಲಿ ಶೇರ್ ಮಾಡುವ ಮೂಲಕ ತಪ್ಪು ಸಂದೇಶಗಳನ್ನು ಹಂಚುತ್ತಿದ್ದಾರೆ. 2020 ರಲ್ಲಿ ಮಾಯಾವತಿಯವರು ‘ಅಗತ್ಯವಿದ್ದರೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬೆಂಬಲಿಸಿ’ ಎಂಬ ಹೇಳಿಕೆಯನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ನೀಡಿದ್ದರು. ಈ ಹೇಳಿಕೆಯನ್ನು ಗ್ರಾಫಿಕ್ಸ್ ಮಾಡಿ ಈಗ ಹೇಳಿದ್ದಾರೆ ಎಂಬಂತೆ ವೈರಲ್ ಮಾಡಲಾಗುತ್ತಿದೆ.
ಮಾಯಾವತಿ ಅವರು ಅಕ್ಟೋಬರ್ 2020 ರಲ್ಲಿ ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಗೆ ಮುಂಚಿತವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಫ್ಯಾಕ್ಟ್ ಚೆಕ್‌ನಿಂದ ತಿಳಿದುಬಂದಿದೆ. ಬಿಎಸ್‌ಪಿ ನಾಯಕರು ಸಮಾಜವಾದಿ ಪಕ್ಷಕ್ಕೆ ಪಕ್ಷಾಂತರ ಮಾಡುತ್ತಾರೆ ಎಂಬ ಊಹಾಪೋಹಗಳು ವರದಿಯಾದ ನಂತರ ಎಸ್‌ಪಿ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಸೇರಿದಂತೆ ಯಾವುದೇ ವಿರೋಧ ಪಕ್ಷಕ್ಕೆ ತಮ್ಮ ಪಕ್ಷ ಮತ ಹಾಕಿ ಎಂದು ಮಾಯಾವತಿಯವರು ಹೇಳಿದ್ದರು. ಮುಂದುವರೆದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಬಿಎಸ್‌ಪಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಅವರು ನವೆಂಬರ್ 2020 ರಲ್ಲಿ ಸ್ಪಷ್ಟಪಡಿಸಿದ್ದರು.

ಹೇಳಿಕೆಗೆ ಸಂಬಂಧಿಸಿದ ಕೀವರ್ಡ್ ಸರ್ಚ್ ನಡೆಸಿದಾಗ ಅದೇ ಸ್ಕ್ರೀನ್‌ಶಾಟ್ ಗಳು ಅಕ್ಟೋಬರ್ 29, 2020 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಅಲ್ಲಿ ಚಾನಲ್ ಹೆಸರನ್ನು ಗುರುತಿಸಬಹುದು – Zee ಉತ್ತರ ಪ್ರದೇಶ ಉತ್ತರಖಂಡ.
ಇದನ್ನು ಓದಿರಿ: Fact check: ಅಬುಧಾಬಿಯಲ್ಲಿ ನಡೆದಿರುವ ಡ್ರೋನ್ ದಾಳಿಯ ವೈರಲ್ ಫೋಟೋ ನಿಜವೇ?
ಕೀವರ್ಡ್ ಮೂಲಕ ಮಾಹಿತಿ ಪಡೆದು ಮೂಲ ಪ್ರಸಾರವನ್ನು ಪತ್ತೆಹಚ್ಚಿದ್ದೇವೆ ಅದೂ 29 ಅಕ್ಟೋಬರ್ 2020 ರಂದು Zee UP UK ಮೂಲಕ ಫೇಸ್‌ಬುಕ್ ಲೈವ್ ಸ್ಟ್ರೀಮ್ ಎಂದು ತಿಳಿದುಬಂದಿದೆ, ಮಾಯಾವತಿಯವರ ಪತ್ರಿಕಾಗೋಷ್ಠಿಯನ್ನು ಲೈವ್ ಆಗಿ ತೋರಿಸಿದೆ. 14 ನಿಮಿಷಗಳ ಸಮಯದ ಲವ್ ವಿಡಿಯೊವನ್ನು ಇಲ್ಲಿ ಗಮನಿಸಬಹುದು.
2020ರ ಅಕ್ಟೋಬರ್‌ನಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಸೋಲಿಸಲು ತಮ್ಮ ಪಕ್ಷವು ಭಾರತೀಯ ಜನತಾ ಪಕ್ಷ ಸೇರಿದಂತೆ ಯಾವುದೇ ಇತರ ರಾಜಕೀಯ ಪಕ್ಷಕ್ಕೆ ಮತ ಹಾಕುತ್ತದೆ ಎಂದು ಮಾಯಾವತಿ ಅವರು ಹೇಳಿದ್ದ ಈ ಹೇಳಿಕೆಯ ಕುರಿತು ಸುದ್ದಿ ವರದಿಗಳನ್ನು ಸಹ ಪತ್ತೆಮಾಡಲಾಗಿದೆ.
#WATCH BSP Chief Mayawati says that her party will vote for BJP or any party's candidate in future UP MLC elections, to defeat Samajwadi Party's second candidate.
"Any party candidate, who'll be dominant over SP's 2nd candidate, will get all BSP MLAs' vote for sure," she said. pic.twitter.com/ki4W6ZAwgE
— ANI (@ANI) October 29, 2020
ಕೆಲವು ದಿನಗಳ ನಂತರ, ನವೆಂಬರ್ 2, 2020 ರಂದು, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಬಿಎಸ್‌ಪಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು, ತಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಕೇಸರಿ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು ಎಂಬ ವರದಿಗಳು ಲಭ್ಯವಾಗಿವೆ.
ಇದೆಲ್ಲವನ್ನು ಗಮನಿಸಿ ಹೇಳುವುದಾದರೆ ಮಾಯವತಿ ಈ ಹಿಂದೆ ತಾವು ಅಧಿಕಾರ ನಡೆಸಿದ ಸಂದರ್ಭದಲ್ಲಿ ಬಿಜೆಪಿಯ ಬೆಂಬಲವನ್ನು ಪಡೆದಿದ್ದರು, ಸ್ಥಳೀಯ ಚುನಾವಣಾ ಸಂದರ್ಭದಲ್ಲೂ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ಆದರೆ 2022ರ ಉತ್ತರ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯನ್ನು ಬೆಂಬಲಿಸುವಂತಹ ಹೇಳಿಕೆ ನೀಡಿರುವ ಯಾವ ವರದಿಗಳು ಲಭ್ಯವಿಲ್ಲ. ಹಾಗಾಗಿ ಮಾಯಾವತಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದಾರೆ ಎಂಬ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: fact check: ಮಹಾಭಾರತದ ಪಳೆಯುಳಿಕೆಗಳು ಸಿಕ್ಕಿದ್ದು ನಿಜವೇ?

