Fact check: ಜಾತಿ ದ್ವೇಷದಿಂದ ಬ್ರಾಹ್ಮಣ ವೈದ್ಯರನ್ನು ಅಖಿಲೇಶ್ ಯಾದವ್ ನಿಂದಿಸಿದ್ದು ನಿಜವೆ?

ಕನ್ನೌಜ್ ಆಸ್ಪತ್ರೆಯಲ್ಲಿ ವೈದ್ಯರು ಬ್ರಾಹ್ಮಣ ಜಾತಿ ಎಂಬ ಕಾರಣಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕನೌಜ್‌ನ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿದೆ.

ಹಲವಾರು ಫೇಸ್‌ಬುಕ್ ಬಳಕೆದಾರರು 28 ಸೆಕೆಂಡುಗಳ ಅವಧಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಕನ್ನೌಜ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರು ಬ್ರಾಹ್ಮಣರು ಎನ್ನುವ ಕಾರಣಕ್ಕೆ ಅಖಿಲೇಶ ಯಾದವ್ ಅವರು ಜಾತಿದ್ವೇಷದಿಂದ ವೈದ್ಯರನ್ನು ಗದರಿಸಿ ಮತ್ತು ಸ್ಥಳವನ್ನು ತೊರೆಯುವಂತೆ ಹೇಳುತ್ತಿರುವುದನ್ನು ಕೇಳಬಹುದು. ಯಾದವ್ ಅವರು ಡಾ.ಡಿ.ಎಸ್.ಮಿಶ್ರಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಫೇಸ್ ಬುಕ್ ಬಳಕೆದಾರರು ಆರೋಪಿಸಿದ್ದಾರೆ.

ಹಿಂದಿಯಲ್ಲಿ, ವೈರಲ್ ಪೋಸ್ಟ್‌ಗಳು, “ಕನೌಜ್‌ನಲ್ಲಿ ಹಿರಿಯ ವೈದ್ಯ ಡಿಎಸ್ ಮಿಶ್ರಾ ಅವರ ಬಗ್ಗೆ ಅಖಿಲೇಶ್ ಯಾದವ್ ಅವರ ವರ್ತನೆ ಅವರ ಮನಸ್ಥಿತಿಗೆ ದ್ರೋಹ ಬಗೆದಿದೆ. ಹೆಸರು ಕೇಳಿದ ನಂತರ. ಅಖಿಲೇಶ್ ಬ್ರಾಹ್ಮಣನೆಂದು ತಿಳಿದ ನಂತರ ಆತನನ್ನು ನಡೆಸಿಕೊಂಡ ರೀತಿ; ಎಸ್ಪಿ ವರಿಷ್ಠರು ಬ್ರಾಹ್ಮಣರಾಗಿರುವುದು ಪಾಪವೆಂದು ಭಾವಿಸುತ್ತಾರೆಯೇ? ಎನ್ನುವ ಹೇಳಿಕೆಗಕೊಂದಿಗೆ ವಿಡಿಯೊ ಪೋಸ್ಟ್ ಮಾಡಿದ್ದಾರೆ. ವೈರಲ್ ವೀಡಿಯೊದಲ್ಲಿ ಪ್ರತಿಪಾದಿಸಲಾದ ಹೇಳಿಕೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ಯೂಟ್ಯೂಬ್‌ನಲ್ಲಿ ವೈರಲ್ ವೀಡಿಯೊವನ್ನು ಗೂಗಲ್ ಕೀ ವರ್ಡ್‌ಗಳ  ಮೂಲಕ ಸರ್ಚ್ ಮಾಡಲಾಗಿದು,  ಜನವರಿ 2020 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಅಪ್‌ಲೋಡ್ ಮಾಡಿರುವ ವಿಡಿಯೊ ಲಭ್ಯವಾಗಿದೆ. ಶೀರ್ಷಿಕೆಯಲ್ಲಿ, “ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಕನೌಜ್ ವೈದ್ಯರನ್ನು ವಾರ್ಡ್‌ನಿಂದ ಹೊರ ಹೋಗಲು ಸೂಚಿಸುತ್ತಾರೆ, ‘ತುಮ್ ಭಾಗ್ ಜಾವೋ’ ಎಂದು ಹಿಂದಿಯಲ್ಲಿ ಹೇಳುವುದನ್ನು ಕೇಳಬಹುದು”.

ಸುದ್ದಿ ವರದಿಯ ಪ್ರಕಾರ,  ಜನವರಿ 10, 2020 ರಂದು ಉತ್ತರ ಪ್ರದೇಶದ ಕನೌಜ್‌ನಲ್ಲಿ 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಬಸ್ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಯಾದವ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಮತ್ತಷ್ಟು ಕೀ ವರ್ಡ್ ಸರ್ಚ್ ಮಾಡುವ ಮೂಲಕ ANI ಸುದ್ದಿ ಸಂಸ್ಥೆ ಅಪ್‌ಲೋಡ್ ಮಾಡಿರುವ ವಿಡಿಯೊವನ್ನು ಪರಿಶೀಲಿಸಿದಾಗ  ಅಲ್ಲಿ ಮತ್ತೊಂದು ಕ್ಯಾಮೆರಾದಲ್ಲಿ ಬೇರೆ ಕೋನದಿಂದ ಸೆರೆ ಹಿಡಿದಿರುವ ವಿಡಿಯೋ ದೃಶ್ಯಾವಳಿಗಳು ಲಭ್ಯವಾಗಿದೆ. ಇದನ್ನು ಸುದ್ದಿ ಸಂಸ್ಥೆ ANI ಜನವರಿ 14, 2020 ರಂದು ಹಂಚಿಕೊಂಡಿದೆ.

ANI  ಟ್ವೀಟ್‌ನ ಶೀರ್ಷಿಕೆ ಹೀಗಿದೆ, “ಕನೌಜ್ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಹೋದ ಮಾಜಿ ಸಿಎಂ ಅಖಿಲೇಶ್ ಯಾದವ್,  ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಪರಿಹಾರದ ಮೊತ್ತದ ಬಗ್ಗೆ ಮಾತನಾಡುವಾಗ ತುರ್ತು ವೈದ್ಯಕೀಯ ಅಧಿಕಾರಿಯನ್ನು ಕೊಠಡಿಯಿಂದ ಹೊರಹೋಗುವಂತೆ ಕೇಳುತ್ತಾರೆ,” ತುಮ್ ಸರ್ಕಾರ್ ಕಾ ಪಕ್ಷ್ ನಹೀ ಲೇ ಸಕ್ತೇ.. ಬಹರ್ ಭಾಗ್ ಜಾವೋ”. ಎಂದೆಳುವುದನ್ನು ಕೇಳಬಹುದು.

ವೀಡಿಯೊದಲ್ಲಿ, ಗಾಯಗೊಂಡವರ ಪಕ್ಕದಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಸಂತ್ರಸ್ತರಿಗೆ ಪರಿಹಾರದ “ಚೆಕ್” ತಲುಪಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅದೇ ಸಮಯಕ್ಕೆ ಮತ್ತೊಬ್ಬರು ಇಲ್ಲ ಚೆಕ್ ತಲುಪಿದೆ ಎಂದು ಹೇಳುತ್ತಾರೆ.

ಆಗ ಯಾದವ್ ಮಾತನಾಡುತ್ತ, ಇನ್ನೊಬ್ಬ ವ್ಯಕ್ತಿಗೆ, “ನೀವು ಸರ್ಕಾರಿ ಅಧಿಕಾರಿಯಾಗಿರುವುದರಿಂದ ಮಾತನಾಡಬಾರದು. ನೀವು ಸರ್ಕಾರದ ಪರವಾಗಿ ನಿಲ್ಲುತ್ತೀರಿ. ನೀವು ಆರೆಸ್ಸೆಸ್ ಅಥವಾ ಬಿಜೆಪಿಯವರಾಗಿರಬಹುದು, ಆದರೆ ನೀವು ತುಂಬಾ ಕಿರಿಯ ಅಧಿಕಾರಿ. ಆದ್ದರಿಂದ, ಅವರು ಹೇಳುತ್ತಿರುವುದನ್ನು ನೀವು ತಿರುಚುವ ಅವಶ್ಯಕತೆ ಇಲ್ಲ ಎಂದು ಗದರಿಸಿ. ನೀವು ಇಲ್ಲಿಂದ  ಸುಮ್ಮನೆ  ಹೊರಹೋಗಿ” ಎನ್ನುತ್ತಾರೆ.

2020 ರ ಜನವರಿಯಲ್ಲಿ ಇದೇ ವರದಿಯನ್ನು ಹಲವು ಸುದ್ದಿವಾಹಿನಿಗಳು ಒಂದೇ ವೀಡಿಯೊದೊಂದಿಗೆ ಹಂಚಿಕೊಂಡಿವೆ.

ಈ ಸುದ್ದಿ ವರದಿಗಳ ಪ್ರಕಾರ, ಗಾಯಗೊಂಡವರನ್ನು ಭೇಟಿಯಾದಾಗ, ಸರ್ಕಾರದಿಂದ ಪರಿಹಾರದ ಚೆಕ್ ಬಂದಿಲ್ಲ ಎಂದು ರೋಗಿಯ ಕಡೆಯವರು ತಿಳಿಸಿದಾಗ, ಅಲ್ಲಿ ಹಾಜರಿದ್ದ ಆಸ್ಪತ್ರೆಯ ತುರ್ತು ವೈದ್ಯಕೀಯ ಅಧಿಕಾರಿ ಡಾ.ಡಿ.ಎಸ್.ಮಿಶ್ರಾ ಈ ಹೇಳಿಕೆಯನ್ನು ಅಲ್ಲಗಳೆಯಲು ಯತ್ನಿಸಿದರು. ಇದರಿಂದ ಸಿಟ್ಟಿಗೆದ್ದ ಯಾದವ್ ಅಧಿಕಾರಿಯನ್ನು ಗದರಿಸಿದ್ದು, ಕೂಡಲೇ ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.

ನಂತರ, ವೈದ್ಯಾಧಿಕಾರಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕಾರಣ ಅಲ್ಲಿ ಹಾಜರಿದ್ದರು ಎಂದು ಮಿಶ್ರಾ ಅವರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. “ರೋಗಿಯೊಬ್ಬರು ಪರಿಹಾರದ ಚೆಕ್ ತಮಗೆ ತಲುಪಿಲ್ಲ ಎಂದು ಹೇಳುತ್ತಿರುವಾಗ, ಮದ್ಯಪ್ರವೇಶಿಸಿದ ವೈದ್ಯರನ್ನು ತಡೆಯುತ್ತಾರೆ, ಈ ಸಮಯದಲ್ಲಿ ಕೋಪಗೊಂಡ ಮಾಜಿ ಸಿಎಂ ಅಖಿಲೇಶ್ ಜೀ ಅವರು ನನ್ನನ್ನು ಕೊಠಡಿಯಿಂದ ಹೊರಹೋಗುವಂತೆ ಕೇಳಿಕೊಂಡರು’ ಎಂದು ಮಿಶ್ರಾ ಹೇಳಿದ್ದಾರೆ.

ಹೀಗಾಗಿ, ರೋಗಿಗಳಿಗೆ ಪರಿಹಾರ ಚೆಕ್ ತಲುಪಿಸಿಲ್ಲ ಎಂಬ ಕಾರಣಕ್ಕೆ ಅಖಿಲೇಶ್ ಯಾದವ್ ವೈದ್ಯರನ್ನು ಪ್ರಶ್ನೆ ಮಾಡಿರುವ ವಿಡಿಯೊವನ್ನು ತಿರುಚಿ, ವೈದ್ಯರು ಬ್ರಾಹ್ಮಣ ಜಾತಿಯವರು ಎಂಬ ಕಾರಣಕ್ಕೆ ಅಖಿಲೇಶ್ ಯಾದವ್  ಕನ್ನೌಜ್ ಆಸ್ಪತ್ರೆಯಲ್ಲಿ ವೈದ್ಯರನ್ನು ನಿಂದಿಸಿದ್ದಾರೆ ಎಂದು ಪ್ರತಿಪಾದಿಸಲಾಗಿರುವ ವೈರಲ್ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: Fact check: ಫೆಬ್ರವರಿ 14 “ಪ್ರೇಮಿಗಳ ದಿನ” ಆಕಾಶಕಾಯದಲ್ಲಿ ಕಂಡ ವಿಚಿತ್ರ ದೃಶ್ಯಾವಳಿಗಳ ಹಿಂದಿನ ರಹಸ್ಯವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights