Fact check: ಉಕ್ರೇನ್‌ನಲ್ಲಿ ಭಾರತೀಯ ಧ್ವಜ ಹಿಡಿದವರಿಗೆ ಹಾನಿ ಮಾಡುವುದಿಲ್ಲ ಎಂದು ರಷ್ಯಾ ಹೇಳಿದಿಯೇ?

ಒಂದೆಡೆ ರಷ್ಯಾವು ಉಕ್ರೇನ್ ಮೇಲೆ ದಾಳಿ ಮುಂದುವರೆಸಿದ್ದರೆ ಇನ್ನೊಂದೆಡೆ ಬೆಲಾರಸ್‌ನಲ್ಲಿ ಉಕ್ರೇನ್ ಹಾಗೂ ರಷ್ಯಾ ಶಾಂತಿಯುತ ಮಾತುಕತೆ ಆರಂಭಿಸಿದೆ. ಭಾರತೀಯರ ಮನೆ ಮತ್ತು ವಾಹನಗಳ ಮೇಲೆ ಭಾರತೀಯ ಧ್ವಜಗಳನ್ನು ಇರಿಸುವಂತೆ ರಷ್ಯಾದ ಸೇನೆ ಕೇಳಿಕೊಂಡಿದೆ ಮತ್ತು ಭಾರತೀಯರಿಗೆ ಹಾನಿ ಮಾಡುವುದಿಲ್ಲ ಮತ್ತು ಭಾರತೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತದೆ ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

View this post on Instagram

 

A post shared by Gajab Science 💡 (@gajabscience)

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ನಲ್ಲಿ ಮಾಡಲಾದ ಹೇಳಿಕೆಯನ್ನು ಗೂಗಲ್ ಸರ್ಚ್  ಮಾಡಲಾಗಿದೆ ಆದರೆ ಎಲ್ಲಿಯೂ ರಷ್ಯಾ  ಸೈನ್ಯದ ಯಾವುದೇ ಪ್ರಕಟಣೆಯು ಲಭ್ಯವಾಗಿಲ್ಲ. ಭಾರತೀಯರ ಮನೆ ಮತ್ತು ವಾಹನಗಳ ಮೇಲೆ ಭಾರತೀಯ ಧ್ವಜಗಳನ್ನು ಇರಿಸುವಂತೆ ರಷ್ಯಾದ ಸೇನೆಯು ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ. ಒಂದು ವೇಳೆ ರಷ್ಯಾ ಹಾಗೆ ಮಾಡಿದ್ದರೆ, ಹೆಚ್ಚಿನ ಮಾಧ್ಯಮ ಸಂಸ್ಥೆಗಳು ಅದರ ಬಗ್ಗೆ ವರದಿ ಮಾಡಿರುತ್ತಿದ್ದವು. ಆದರೆ ಯಾವುದೇ ಪ್ರತಿಷ್ಠಿತ ಸುದ್ದಿ ಸಂಸ್ಥೆ ಇಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ. ಅಲ್ಲದೆ, ‘ರಷ್ಯಾದಲ್ಲಿರುವ ಭಾರತದ ರಾಯಭಾರ ಕಚೇರಿ’ ಅಂತಹ ಯಾವುದೇ ಸಲಹೆಯನ್ನು ಟ್ವೀಟ್ ಮಾಡಿಲ್ಲ.

25 ಫೆಬ್ರವರಿ 2022 ರಂದು, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಸಲಹೆಯನ್ನು ನೀಡಲಾಯಿತು. ಸಲಹೆಯಲ್ಲಿ, “ಭಾರತೀಯ ಧ್ವಜವನ್ನು ಮುದ್ರಿಸಿ ಮತ್ತು ಪ್ರಯಾಣಿಸುವಾಗ ವಾಹನಗಳು ಮತ್ತು ಬಸ್‌ಗಳಲ್ಲಿ ಪ್ರಮುಖವಾಗಿ ಅಂಟಿಸಿ” ಎಂದು ಬರೆಯಲಾಗಿದೆ. ರಷ್ಯಾದ ಸೇನೆಯು ಭಾರತೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

‘ANI’ ಜೊತೆ ಮಾತನಾಡಿದ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, “ಬೈಕುಗಳು, ಕಾರುಗಳು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ವಾಹನಗಳ ಮೇಲೆ ಭಾರತದ ಧ್ವಜವನ್ನು ಪ್ರಮುಖವಾಗಿ ಪ್ರದರ್ಶಿಸಲು ನಾವು ಕೇಳಿದ್ದೇವೆ. ಧ್ವಜಗಳ ಚಿತ್ರಗಳನ್ನು ಹೊಂದಿರದ ಜನರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಧ್ವಜಗಳನ್ನು ಕಳುಹಿಸಲಾಗಿದೆ. ಭಾರತೀಯ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ರಷ್ಯಾ ಭರವಸೆ ನೀಡಿದೆ. ಭಾರತೀಯ ಧ್ವಜಗಳನ್ನು ಹಿಡಿದುಕೊಂಡು ಉಕ್ರೇನ್ ಗಡಿಯನ್ನು ತಲುಪಲು ನಾವು ಅವರನ್ನು ಕೇಳಿದ್ದೇವೆ”.

ಇತ್ತೀಚೆಗೆ, 01 ಮಾರ್ಚ್ 2022 ರಂದು, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ – “ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳು ಇಂದು ಕೈವ್‌ನಿಂದ ತುರ್ತಾಗಿ ತೊರೆಯಲು ಸೂಚಿಸಲಾಗಿದೆ”. ರಷ್ಯಾದ ಸೇನೆಯು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು (ಪೋಸ್ಟ್‌ನಲ್ಲಿ ಹೇಳಿಕೊಂಡಂತೆ) ಭಾರತೀಯ ಧ್ವಜಗಳನ್ನು ತಮ್ಮ ಮನೆಗಳ ಮೇಲೆ ಇರಿಸಿಕೊಳ್ಳಲು ಅವರು ಭಾರತೀಯರಿಗೆ ಸಲಹೆ ನೀಡಲಿಲ್ಲ.

ಅಲ್ಲದೆ, 01 ಮಾರ್ಚ್ 2022 ರಂದು, ಅರಿಂದಮ್ ಬಾಗ್ಚಿ (ಅಧಿಕೃತ ವಕ್ತಾರ – ವಿದೇಶಾಂಗ ವ್ಯವಹಾರಗಳ ಸಚಿವಾಲಯ) ಖಾರ್ಕಿವ್‌ನಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಯ ಸಾವನ್ನು ದೃಢಪಡಿಸಿದ್ದಾರೆ.

ಆದಾಗ್ಯೂ, ಉಕ್ರೇನ್‌ನಿಂದ ಬುಕಾರೆಸ್ಟ್ (ರೊಮೇನಿಯಾ) ತಲುಪಿದ ಭಾರತೀಯ ವಿದ್ಯಾರ್ಥಿಗಳು ‘ANI’ ಜೊತೆ ಮಾತನಾಡುತ್ತಾ ” ಉಕ್ರೇನ್‌ನಲ್ಲಿ ಭಾರತೀಯರು ಮತ್ತು ಭಾರತದ ಧ್ವಜವನ್ನು ಹೊತ್ತಿರುವುವರಿಗೆ ಯಾವುದೇ ಸಮಸ್ಯೆಗಳಿಲ್ಲ. ಟರ್ಕಿಶ್ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳು ಎಂದು ಹೇಳುತ್ತಿದ್ದ ಕೆಲವು ವಿದ್ಯಾರ್ಥಿಗಳು ಭಾರತೀಯ ಧ್ವಜವನ್ನು ಸಹ ಬಳಸುತ್ತಿದ್ದರು” ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯರು ತಮ್ಮ ಮನೆಗಳ ಮೇಲೆ ಭಾರತೀಯ ಧ್ವಜವನ್ನು ಇರಿಸಿದರೆ, ಅವರಿಗೆ ಹಾನಿ ಮಾಡುವುದಿಲ್ಲ ಮತ್ತು ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು ಎಂದು ರಷ್ಯಾದ ಸೈನ್ಯದಿಂದ ಯಾವುದೇ ಘೋಷಣೆ ಮಾಡಲಾಗಿಲ್ಲ. ಇದು ಬೇರೆ ಬೇರೆಯವರ ಹೇಳಿಕೆಯಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಗಳಲ್ಲಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: BJP ನಾಯಕರನ್ನು ಟೀಕಿಸುತ್ತಿರುವ ಈ ಯುವಕ ಹರ್ಷ ಅಲ್ಲ, CFI ಮುಖಂಡ ಸರ್ಫರಾಜ್ ಗಂಗಾವತಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights