ಕಾಬೂಲ್​ನಿಂದ ಹೊರಟ ಉಕ್ರೇನ್​ ವಿಮಾನ ಹೈಜಾಕ್​; ಆದರೆ, ಇರಾನ್ ಹೇಳಿದ್ದೇ ಬೇರೆ!

ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳ ವಶದಲ್ಲಿದೆ. ಅವರ ಆಕ್ರಮಣದಿಂದ ಭೀತಗೊಂಡಿರುವ ಜನರು ದೇಶ ತೊರೆಯಲು ಆರಂಭಿಸಿದ್ದಾರೆ. ಹಲವಾರು ವಿಮಾನಗಳು ಜನರನ್ನು ವಿವಿಧ ದೇಶಗಳಿಗೆ ರವಾನಿಸುತ್ತಿವೆ. ಈ ನಡುವೆ ಆಫ್ಘಾನಿಸ್ತಾನದಲ್ಲಿದ್ದ ಉಕ್ರೇನ್‌ ಜನರನ್ನು ಉಕ್ರೇನ್‌ಗೆ ಕರೆದೊಯ್ಯುತ್ತಿದ್ದ ವಿಮಾನವನ್ನು ಅಪಹರಿಸಲಾಗಿದೆ. ವಿಮಾನವನ್ನು ಇರಾನ್​ನಲ್ಲಿ ಇಳಿಸಲಾಗಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್​ ಆರೋಪಿಸಿದ್ದಾರೆ.

ಆದರೆ, ಈ ಆರೋಪವನ್ನು ಇರಾನ್‍ನ ನಾಗರಿಕ ವಿಮಾನ ಯಾನ ಸಂಸ್ಥೆ ಅಲ್ಲಗಳೆದಿದೆ. ಉಕ್ರೇನಿಯನ್ ವಿಮಾನವು ನಿನ್ನೆ ರಾತ್ರಿ ಮಶ್ಹಾದ್‌ನಲ್ಲಿ ಇಂಧನ ತುಂಬುವುದಕ್ಕಾಗಿ ನಿಲ್ಲಿಸಲಾಗಿತ್ತು. ಬಳಿಕ ಉಕ್ರೇನ್‌ಗೆ ಹೊರಟಿತು. ವಿಮಾನ ಈಗಾಗಲೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಇಳಿದಿದೆ ಎಂದು ಇರಾನ್‌ನ ವಾಯುಯಾನ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ ವಿರುದ್ಧ ಪ್ರತಿಭಟನೆ: ಜನರು – ಪೊಲೀಸರ ನಡುವೆ ಘರ್ಷಣೆ; 218 ಜನರ ಬಂಧನ!

ಕಳೆದ ಭಾನುವಾರ ವಿಮಾನವನ್ನು ಹೈಜಾಕ್​ ಮಾಡಲಾಗಿದೆ. ಆಫ್ಘಾನಿಸ್ತಾನದಲ್ಲಿದ್ದ ಉಕ್ರೇನ್‍ನ ಪ್ರಜೆಗಳನ್ನು ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ವಿಮಾನ ನಮ್ಮ ದೇಶಕ್ಕೆ ಬರುವ ಬದಲು ಇರಾನ್​ಗೆ ಹಾರಿಸಲಾಗಿದೆ. ವಿಮಾನವನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ಅಪರಿಚಿತ ಅಪಹರಣಕಾರರ ಗುಂಪು ಶಸ್ತ್ರಸಜ್ಜಿತರಾಗಿದ್ದರು. ವಿಮಾನ ಹೈಜಾಕ್ ಆದ ಬಳಿಕ ಮತ್ತಷ್ಟು ಉಕ್ರೇನ್ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಸಿದ ಮೂರು ಪ್ರಯತ್ನಗಳು ಕೂಡ ವಿಫಲವಾಗಿವೆ. ನಮ್ಮವರನ್ನು ಕಾಬೂಲ್‍ನ ವಿಮಾನ ನಿಲ್ದಾಣದವರೆಗೂ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಉಪ ವಿದೇಶಾಂಗ ಸಚಿವರು ರಷ್ಯಾನ್​ ನ್ಯೂಸ್​ ಎಜೆನ್ಸಿಗೆ ತಿಳಿಸಿದ್ದಾರೆ.

ಅಪಹರಣಕ್ಕೊಳಗಾದ ವಿಮಾನದಲ್ಲಿ 31 ಉಕ್ರೇನ್ ಪ್ರಜೆಗಳು ಸೇರಿದಂತೆ 83 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.

ವಿಮಾನ ಉಕ್ರೇನ್‍ನ ಕೀವ್ ವಿಮಾನ ನಿಲ್ದಾಣಕ್ಕೆ 12ಕ್ಕೆ ಬಂದು ಇಳಿದಿದೆ. ಯಾವುದೇ ಅಪಹರಣಗಳು ನಡೆದಿಲ್ಲ. ಇದರ ಜೊತೆಗೆ 100 ಉಕ್ರೇನಿಯರು ಇನ್ನು ಸ್ಥಳಾಂತರಕ್ಕಾಗಿ ಆಫ್ಘಾನಿಸ್ತಾನದಲ್ಲಿ ಕಾಯುತ್ತಿದ್ದಾರೆ ಎಂದು ಐಎಎನ್​ಎಸ್​ ನ್ಯೂಸ್​ ಏಜೆನ್ಸಿ ವರದಿ ಮಾಡಿದೆ.

ಇದನ್ನೂ ಓದಿ: Fact Check: ಆಫ್ಘಾನ್‌ ಮಹಿಳೆಯರನ್ನು ಮಾರಾಟ ಮಾಡುತ್ತಿದೆಯೇ ತಾಲಿಬಾನ್‌?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights